
Jawan : ಜವಾನ್ ಸಿನೆಮಾ ಥಿಯೇಟರ್ನಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ ಶಾರುಖ್ಖಾನ್ (Shahrukh Khan) ಅಭಿಮಾನಿಯೊಬ್ಬ ಸ್ಕ್ರೀನ್ನ ಮುಂದೆಯೇ ಚಲೇಯಾ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ನೋಡಿದಿರಿ. ದಿವ್ಯಾಂಗ ವ್ಯಕ್ತಿಯೊಬ್ಬ ವೆಂಟಿಲೇಷನ್ ಮೇಲೆಯೇ ಥಿಯೇಟರಿಗೆ ಬಂದು ಸಿನೆಮಾ ನೋಡಿದ ವಿಡಿಯೋವನ್ನೂ ನೋಡಿದಿರಿ. ನಕಲಿ ‘ಆಝಾದ್’ನೊಬ್ಬ ತಲೆಗೆ ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡು ರೈಲು ನಿಲ್ಧಾಣ ಮತ್ತು ರೈಲಿನಲ್ಲಿ ಓಡಾಡಿದ ವಿಡಿಯೋ ಕೂಡ ನೋಡಿದಿರಿ. ಇದೀಗ ನ್ಯೂಯಾರ್ಕ್ನ ಬ್ರೂಕ್ಲಿನ್ ಸೇತುವೆಯ ಮೇಲೆ ಹುಡುಗಿಯರಿಬ್ಬರು ಚಲೇಯಾ ಹಾಡಿಗೆ ಡ್ಯಾನ್ಸ್ ಮಾಡಿದ್ಧಾರೆ. ಈ ವಿಡಿಯೋವನ್ನು ಶಾರುಖ್ಖಾನ್ X ನಲ್ಲಿ ಪೋಸ್ಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?
ಇಷ್ಟೊಂದು ರೀಲ್ಗಳು ಚಲೇಯಾ ಹಾಡಿನ ಮೇಲೆ ಹೊಮ್ಮಿದವರಾದರೂ ಈ ವಿಡಿಯೋ ಮಾತ್ರ ವಿಶೇಷವಾಗಿ ನೆಟ್ಟಿಗರ ಗಮನ ಸೆಳೆದಿದೆ. ಏಕೆಂದರೆ ಶಾರುಖ್ ಖಾನ್ ಸ್ವತಃ ಈ ವಿಡಿಯೋವನ್ನು X ನಲ್ಲಿ ಹಂಚಿಕೊಂಡಿದ್ದಾರೆ. ‘ಇದು ಅದ್ಭುತವಾಗಿದೆ. ಹುಡುಗಿಯರೇ, ಚಲೇಯಾ ಹಾಡನ್ನು ಬ್ರೂಕ್ಲಿನ್ ಸೇತುವೆಯ ಮೇಲೆ ಪ್ರಸ್ತುತಪಡಿಸಿದ್ದಕ್ಕೆ ಧನ್ಯವಾದ. ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ನೋಟ್ ಕೂಡ ಬರೆದಿದ್ದಾರೆ.
ಜವಾನ್ ಸಿನೆಮಾ ಅಟ್ಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಆ್ಯಕ್ಷನ್ ಥ್ರಿಲ್ಲರ್ ಸಿನೆಮಾ ಆಗಿರುವ ಇದು ದೇಶದಲ್ಲಿ ಪ್ರಚಲಿತವಿರುವ ಹಲವಾರು ಸಾಮಾಜಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವ ಕಥಾಹಂದರವನ್ನು ಹೊಂದಿದೆ. ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಸುನಿಲ್ ಗ್ರೋವರ್ ಮತ್ತು ಸಾನ್ಯಾ ಮಲ್ಹೋತ್ರಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : Viral: ಮುಂಬೈ; ಆಕಾಶದಲ್ಲಿ ತೇಲಾಡುತ್ತಿರುವ ಕಟ್ಟಡಗಳು, ಏನಿದು ಸೋಜಿಗ?
ಸೆ. 20ರಂದು ಹಂಚಿಕೊಂಡ ಈ ವಿಡಿಯೋ ಇನ್ನೇನು 1 ಲಕ್ಷ ಜನರನ್ನು ತಲುಪಲಿದೆ. 3,500ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಸುಮಾರು 600 ಜನರು ರೀಪೋಸ್ಟ್ ಮಾಡಿದ್ದಾರೆ. ಈ ಸಿನೆಮಾದ ನಂತರ ಯಾವ ಸಿನೆಮಾ ತೆರೆಕಾಣಲಿದೆ, ಬೇಗ ತಿಳಿಸಿ ಸರ್ ಎಂದು ಶಾರುಖ್ ಖಾನ್ಗೆ ಕೇಳಿದ್ಧಾರೆ ಅನೇಕ ನೆಟ್ಟಿಗರು.
ಈ ವಿಡಿಯೋ ನೋಡಿದ ನಿಮ್ಮ ಅಭಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:50 pm, Thu, 21 September 23