ಈ ಅಪರೂಪದ ಚಿನ್ನದ ಬಣ್ಣದ ಹುಲಿ (Golden Tiger) ಅಸ್ಸಾಂನ ಗೋಲಾಘಾಟ್ ಮತ್ತು ನಾಗಾನ್ ಜಿಲ್ಲೆಗಳ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡಿದೆ. ಪ್ರಸ್ತುತ, ಚಿನ್ನದ ಬಣ್ಣದ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅವುಗಳನ್ನು ಅಳಿವಿನಂಚಿನಲ್ಲಿರುವ ಜಾತಿಯೆಂದು ಪರಿಗಣಿಸಲಾಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ(Kaziranga National Park) ದಲ್ಲಿ ಇಂತಹ ನಾಲ್ಕು ಹುಲಿಗಳಿವೆ. ಆದರೆ, ಇವು ಕಾಣಸಿಗುವುದು ಅಪರೂಪ. ಈ ಹುಲಿಯ ಮೊದಲ ಫೋಟೋ 2020 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ‘X'(ಹಿಂದಿನ ಟ್ವಿಟರ್) ಖಾತೆಯಲ್ಲಿ ಅಪರೂಪದ ಚಿನ್ನದ ಬಣ್ಣದ ಫೋಟೋ ಹಂಚಿಕೊಂಡಿದ್ದು,ಸದ್ಯ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ಚಿನ್ನದ ಹುಲಿಯನ್ನು ನೋಡುವ ಭಾಗ್ಯ ನಮ್ಮದಾಯಿತು” ಎಂದು ಅನೇಕ ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
Assam’s wildlife never ceases to amaze!
A rare golden tiger was recently spotted in Kaziranga National Park taking a stroll. This sighting adds to the list of diverse faunal creatures found in Assam’s landscape.@kaziranga_ #NationalTourismDay pic.twitter.com/JY1VXvUVZO
— Chief Minister Assam (@CMOfficeAssam) January 25, 2024
ಇದನ್ನೂ ಓದಿ: ಡೋಲೋ 650 ಶಶಿರೇಖಾ ಈಗ ಸಿನಿಮಾ ಹೀರೋಯಿನ್; ವಿಡಿಯೋ ವೈರಲ್
ಚಿನ್ನದ ಹುಲಿ ಅತ್ಯಂತ ಅಪರೂಪದ ಹುಲಿ ಎಂದು ಹೇಳಲಾಗುತ್ತದೆ. ಇದು ಪೂರ್ವ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಮಾತ್ರ ಕಂಡುಬರುತ್ತದೆ. ಇದರ ಬಣ್ಣ ಸಾಮಾನ್ಯ ಹುಲಿಗಳಿಗಿಂತ ಹೆಚ್ಚು ಹಳದಿ ಅಥವಾ ಕಿತ್ತಳೆಯಲ್ಲಿರುತ್ತದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ