AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ಚಳಿ ತಾಳಲಾರದೆ ಬಾಣಲೆಯಲ್ಲಿ ಕೆಂಡ ಹಾಕಿ ಬೈಕ್​​ ಸವಾರಿ ಮಾಡಿದ ಮಹಿಳೆ

ಮಹಿಳೆ ಬೈಕ್​​ನ ಹಿಂಭಾಗದಲ್ಲಿ ಕುಳಿತಿದ್ದು, ಚಳಿ ತಾಳಲಾರದೆ ಜೋಳ ಬೇಯಿಸುವ ಬಾಣಲೆಯಲ್ಲಿ ಕೆಂಡ ಹಾಕಿ ಬೈಕ್​​ನಲ್ಲಿ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.

Video Viral: ಚಳಿ ತಾಳಲಾರದೆ ಬಾಣಲೆಯಲ್ಲಿ ಕೆಂಡ ಹಾಕಿ ಬೈಕ್​​ ಸವಾರಿ ಮಾಡಿದ ಮಹಿಳೆ
Video Viral_
ಅಕ್ಷತಾ ವರ್ಕಾಡಿ
|

Updated on: Jan 26, 2024 | 12:52 PM

Share

ದೇಶದ ರಾಜಧಾನಿ ದೆಹಲಿ ಸೇರಿದಂತೆ, ಇಡೀ ಉತ್ತರ ಭಾರತದಾದ್ಯಂತ ವಿಪರೀತ ಚಳಿ. ಈ ಚಳಿಯಿಂದಾಗಿ ಬೈಕ್​​ ಸವಾರಿ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ಸಖತ್​ ಆಗಿ ಪ್ಲಾನ್​​ ಮಾಡಿ ಬೈಕ್​​​ನಲ್ಲಿ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮಹಿಳೆ ಬೈಕ್​​ನ ಹಿಂಭಾಗದಲ್ಲಿ ಕುಳಿತಿದ್ದು, ಚಳಿ ತಾಳಲಾರದೆ ಜೋಳ ಬೇಯಿಸುವ ಬಾಣಲೆಯಲ್ಲಿ ಕೆಂಡ ಹಾಕಿ ಬೈಕ್​​ನಲ್ಲಿ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಕಷ್ಟು ನೆಟ್ಟಿಗರನ್ನು ತಲುಪಿದೆ. ಈ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ವೈರಲ್​​ ವಿಡಿಯೋದಲ್ಲಿ ಮಹಿಳೆ ತನ್ನ ಪತಿ ಮತ್ತು ಮಗುವಿನೊಂದಿಗೆ ಬೈಕ್​​ನಲ್ಲಿ ಹೋಗುತ್ತಿರುವುದು ಕಾಣಬಹುದು. ಜೊತೆಗೆ ಮಹಿಳೆ ಮಹಿಳೆ ಬಾಣಲೆಯಲ್ಲಿ ಕೆಂಡ ಹಾಕಿ ತನ್ನ ಮಡಿಲಲ್ಲಿ ಇಟ್ಟುಕೊಂಡಿರುವಂತೆ ಕಾಣುತ್ತದೆ. ಈ ಮೂಲಕ ತನ್ನ ಪತಿ ಹಾಗೂ ಮಗುವನ್ನು ಚಳಿಯಿಂದ ರಕ್ಷಿಸಲು ಸಖತ್​​ ಆಗಿ ಪ್ಲಾನ್​ ಮಾಡಿದ್ದಾರೆ. ಒಂದೆಡೆ ಮಹಿಳೆಯನ್ನು ಕಂಡು ಆ ದಾರಿಯಲ್ಲಿ ಹೋಗುತ್ತಿದ್ದ ಸವಾರರು ಅಚ್ಚರಿಗೊಂಡಿದ್ದಾರೆ. ಇನ್ನೊಂದೆಡೆ ಮತ್ತೊಂದು ಸವಾರರು ಈ ದೃಶ್ಯವನ್ನು ಮೊಬೈಲ್​​ನಲ್ಲಿ ಸೆರೆಹಿಡಿದ್ದಿದ್ದಾರೆ.

ವೈರಲ್​ ವಿಡಿಯೋ  ಇಲ್ಲಿದೆ ನೋಡಿ:

ಇದನ್ನೂ ಓದಿ: ಮಕ್ಕಳ ನಡವಳಿಕೆಗೆ ನೊಂದು ಸಾಕು ಪ್ರಾಣಿಯ ಹೆಸರಿಗೆ ಕೋಟಿಗಟ್ಟಲೆ ಆಸ್ತಿ ವರ್ಗಾವಣೆ ಮಾಡಿದ ವೃದ್ಧೆ

ವಿಡಿಯೋವನ್ನು @aseem2008 ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ಈಗಾಗಲೇ ಈ ವಿಡಿಯೋ ಸಖತ್​ ಆಗಿ ವೈರಲ್​​ ಆಗಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ‘ಹಿಂದಿನಿಂದ ಬರುವ ಸವಾರರ ಕಣ್ಣಿಗೆ ಕೆಂಡ ಬಿದ್ದರೆ ಗತಿಯೇನು?’ ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!