Viral Video: ಲೇಸ್ ಚಿಪ್ಸ್ ಆಮ್ಲೆಟ್, ನೆಟ್ಟಿಗರ ಕೋಪಕ್ಕೆ ಗುರಿಯಾದ ಯುವಕ, ಯಾಕೆ ಗೊತ್ತಾ?   

ಇತ್ತೀಚಿಗೆ ಈ ವಿಯರ್ಡ್ ಫುಡ್ ಕಾಂಬಿನೇಷನ್​​ಗಳ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಅದೇ ರೀತಿ ಇಲ್ಲೊಬ್ಬ ಯುವಕ ಲೇಸ್ ಚಿಪ್ಸ್ ಆಮ್ಲೆಟ್ ತಯಾರಿಸಿದ್ದಾನೆ.  ಪ್ಲಾಸ್ಟಿಕ್ನೊಳಗೆ ಬೇಯಿಸಿದ ಆಹಾರವನ್ನು ತಿನ್ನಬಾರದು ಅಂತ ಗೊತ್ತಿದ್ರೂ, ಈ ರೀತಿಯ ವಿಡಿಯೋ ಅಪ್ಲೋಡ್ ಮಾಡೋದು ಎಷ್ಟು ಸರಿ? ಇದನ್ನು ತಿಂದ್ರೆ ಪಕ್ಕಾ ಕ್ಯಾನ್ಸರ್ ಬರುತ್ತೆ ಅಂತ ನೆಟ್ಟಿಗರು ಯುವಕನ ವಿರುದ್ಧ ಫುಲ್ ಗರಂ ಆಗಿದ್ದಾರೆ.  

Viral Video: ಲೇಸ್ ಚಿಪ್ಸ್ ಆಮ್ಲೆಟ್, ನೆಟ್ಟಿಗರ ಕೋಪಕ್ಕೆ ಗುರಿಯಾದ ಯುವಕ, ಯಾಕೆ ಗೊತ್ತಾ?   
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 26, 2024 | 2:38 PM

ಇತ್ತೀಚಿನ ದಿನಗಳಲ್ಲಿ ಈ ವಿಯರ್ಡ್ ಫುಡ್ ಕಾಂಬಿನೇಷನ್ ಟ್ರೆಂಡ್ ತುಂಬಾನೇ ಹೆಚ್ಚಾಗಿದೆ. ಒರಿಯೋ ಬಜ್ಜಿಯಂತೆ, ಇಡ್ಲಿ ಸಾಂಬಾರ್ ಐಸ್ ಕ್ರೀಂ ರೋಲ್ ಅಂತೆ, ಗುಲಾಬ್ ಜಾಮೂನ್ ದೋಸೆಯಂತೆ, ಬಿಯರ್ ಬಜ್ಜಿಯಂತೆ, ಹೀಗೆ ಒಂದಾ… ಎರಡಾ ತರಹೇವಾರಿ ವಿಯರ್ಡ್ ಫುಡ್ ಕಾಂಬಿನೇಷನ್  ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಕೆಲವರು ವಿಚಿತ್ರ ಆಹಾರಗಳನ್ನು ತಿನ್ನಲು ಇಷ್ಟಪಟ್ಟರೆ, ಹಲವರು ಇದನ್ನ ಯಾರಪ್ಪಾ ತಿಂತಾರೆ ಅಂತ ಮೂಗು ಮುರಿತ್ತಾರೆ.  ಅದೇ ರೀತಿ ಇಲ್ಲೊಂದು ವಿಯರ್ಡ್ ಫುಡ್ ಕಾಂಬಿನೇಷನ್ ವಿಡಿಯೋ ಹರಿದಾಡುತ್ತಿದ್ದು, ಯುವಕನೊಬ್ಬ ಲೇಸ್ ಚಿಪ್ಸ್ ಆಮ್ಲೆಟ್ ತಯಾರಿಸಿದ್ದಾರೆ. ಪ್ಲಾಸ್ಟಿಕ್ನೊಳಗೆ ಬೇಯಿಸಿದ ಆಹಾರವನ್ನು ತಿನ್ನಬಾರದು ಅಂತ ಗೊತ್ತಿದ್ರೂ, ಹೀಗೆ ಮಾಡೋದು ಎಷ್ಟು ಸರಿ ಅಂತ ಆಮ್ಲೆಟ್ ತಯಾರಿಸುವ ವಿಧಾನವನ್ನು ನೋಡಿ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

ಈ ವೈರಲ್ ವಿಡಿಯೋವನ್ನು @desimijitho ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಈ ಆಮ್ಲೆಟ್ ಪಾಕವಿಧಾನದಲ್ಲಿ ಕ್ಯಾನ್ಸರ್ ಒಂದು ಅಗೋಚರ ಪದಾರ್ಥವಾಗಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಯುವಕನೊಬ್ಬ ಲೇಸ್ ಚಿಪ್ಸ್ ಆಮ್ಲೆಟ್ ಅನ್ನು ಯಾವ ರೀತಿ ತಯಾರಿಸುತ್ತಿದ್ದಾನೆ ಅಂತ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಮೊದಲಿಗೆ ಒಂದು ಲೇಸ್ ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು, ಅದರೊಳಗಿನ ಚಿಪ್ಸ್​​​ನ್ನು ಚೆನ್ನಾಗಿ ಪುಡಿ ಮಾಡಿ, ನಂತರ ಅದೇ ಪ್ಯಾಕೆಟ್​​​ಗೆ ಎರಡು ಮೊಟ್ಟೆಯನ್ನು ಒಡೆದು ಹಾಕುತ್ತಾನೆ. ನಂತರ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಂಡು, ಅದನ್ನು ಕೂಡಾ ಅದೇ ಚಿಪ್ಸ್ ಪ್ಯಾಕೆಟ್ ಒಳಗಡೆ ಹಾಕುತ್ತಾನೆ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಅರಶಿನ, ಖಾರದ ಪುಡಿಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ, ಬಳಿಕ ಆ ಚಿಪ್ಸ್ ಪ್ಯಾಕೆಟ್ ಕ್ಲೋಸ್ ಮಾಡಿ, ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಯಾಗಲು ಇಟ್ಟು, ಆ ಪ್ಲಾಸ್ಟಿಕ್ ಕವರ್ ಅನ್ನು ಬಿಸಿ ನೀರಿನೊಳಗೆ ಬೇಯಲು ಇಡುತ್ತಾನೆ.  ಅದು ಚೆನ್ನಾಗಿ ಬೆಂದ ಬಳಿಕ ಲೇಸ್ ಚಿಪ್ಸ್ ಆಮ್ಲೆಟ್ ನ್ನು  ಕಟ್  ಮಾಡಿ ಕೆಚಪ್ ಜೊತೆಗೆ  ಸವಿಯುವುದನ್ನು ಕಾಣಬಹುದು. ಆತ ಈ ಒಂದು ಆಹಾರವನ್ನು ಪ್ಲಾಸ್ಟಿಕ್ ಒಳಗೆ ಬೇಯಿಸುವುದನ್ನು ಕಂಡು ಇದ್ರಿಂದ ಕ್ಯಾನ್ಸರ್ ಬರುವ ಎಲ್ಲಾ ಲಕ್ಷಣಗಳು ಇವೆ ಅಂತ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಚಳಿ ತಾಳಲಾರದೆ ಬಾಣಲೆಯಲ್ಲಿ ಕೆಂಡ ಹಾಕಿ ಬೈಕ್​​ ಸವಾರಿ ಮಾಡಿದ ಮಹಿಳೆ

ಜನವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ.  ಒಬ್ಬ ಬಳಕೆದಾರರು ʼಪ್ಲಾಸ್ಟಿಕ್ ಲಕೋಟೆಗಳಲ್ಲಿ ಆಹಾರವನ್ನು ಬೇಯಿಸುವುದು ಕ್ಯಾನ್ಸರ್ ಅನ್ನು ಆಹ್ವಾನಿಸುತ್ತದೆ. ದಯವಿಟ್ಟು ಯಾರು ಇದನ್ನು ಪ್ರಯತ್ನಿಸಬೇಡಿʼ ಎಂದು ತಮ್ಮ ಕಾಳಜಿಯನ್ನು ತೋರಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಎಂತಹ ಅಸಹ್ಯʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ತುಂಬಾ ಅಪಾಯಕಾರಿ, ಪ್ಲಾಸ್ಟಿಕ್ ಕವರ್ ಒಳಗೆ ಆಹಾರವನ್ನು ಬೇಯಿಸುವಂತಹ ಅಗತ್ಯವೇನಿತ್ತುʼ ಎಂದು  ಕೇಳಿದ್ದಾರೆ. ಇನ್ನೂ ಅನೇಕರು, ಈ ಪ್ಲಾಸ್ಟಿಕ್ ಕವರ್ ಅಲ್ಲಿ ಅಡುಗೆ ಮಾಡಿ ತಿಂದ್ರೆ, ಕ್ಯಾನ್ಸರ್ ನಮ್ಮನ್ನು ಬೆನ್ನಟ್ಟಿ ಬರುವುದಂತೂ ಗ್ಯಾರಂಟಿ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ