ಸ್ಪೇನ್: 141 ವರ್ಷಗಳಿಂದ ಕಟ್ಟುತ್ತಿದ್ದರೂ ಈ ಚರ್ಚ್‌ನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲವಂತೆ!
ಸಗ್ರಾಡಾ ಫ್ಯಾಮಿಲಿಯಾ ಬಾರ್ಸಿಲೋನಾ ಎಂಬುದು ಸ್ಪೇನ್‌ನಲ್ಲಿರುವ ರೋಮನ್ ಕ್ಯಾಥೊಲಿಕ್ ಚರ್ಚ್ ಆಗಿದ್ದು. ಈ ಚರ್ಚ್ ಅನ್ನು 141 ವರ್ಷಗಳಿಂದ ಕಟ್ಟುತ್ತಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲವಂತೆ.ಇದನ್ನು ಬೆಸಿಲಿಕಾ ಐ ಟೆಂಪಲ್ ಎಕ್ಸ್‌ಪಿಯಾಟೋರಿ ಡಿ ಲಾ ಸಗ್ರಾಡಾ ಫ್ಯಾಮಿಲಿಯಾ ಎಂದೂ ಕರೆಯಲಾಗುತ್ತದೆ. ಇದು 2026 ಅಥವಾ 2032 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ವಿಶ್ವದಲ್ಲೇ ನಿರ್ಮಾಣವಾಗುತ್ತಿರುವ ಅತಿದೊಡ್ಡ ಕ್ಯಾಥೋಲಿಕ್ ಚರ್ಚ್ ಆಗಿದೆ. ಈಗ ವೈರಲ್ ಆಗುತ್ತಿರುವ ವೀಡಿಯೊ ನೋಡಿದರೆ ಒಮ್ಮೆ ರೋಮಾಂಚನವಾಗುತ್ತದೆ.

ನಿರ್ಮಾಣ ಯಾವಾಗ ಪ್ರಾರಂಭವಾಯಿತು? ಈ ಚರ್ಚ್‌ನ ನಿರ್ಮಾಣವು ಮಾರ್ಚ್ 19, 1882 ರಂದು ಪ್ರಾರಂಭವಾಯಿತು, ಇದರ ನಿರ್ಮಾಣವು ಹಲವು ಕಾರಣಗಳಿಂದ ಇನ್ನೂ ಪೂರ್ಣಗೊಂಡಿಲ್ಲ. ಆದಾಗ್ಯೂ, ಪೂರ್ಣಗೊಂಡಾಗ, ಇದು ಯುರೋಪಿನ ಅತಿ ಎತ್ತರದ ಧಾರ್ಮಿಕ ಕಟ್ಟಡವಾಗಲಿದೆ. ಚರ್ಚ್ ಅನ್ನು ಆಂಟೋನಿ ಗೌಡಿ (1852-1926) ವಿನ್ಯಾಸಗೊಳಿಸಿದರು, ಆದರೆ ಅದರ ವಿನ್ಯಾಸವನ್ನು ನಂತರ ಬದಲಾಯಿಸಲಾಯಿತು. ಈ ಚರ್ಚ್ ಅನ್ನು UNESCO ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
The Sagrada Familia’s construction began in 1882 and it’s estimated to be completed in 2026.
This is what it will look like when the target is met.
[🎞️ basilicasagradafamilia]pic.twitter.com/Mb0DDcdnL3
— Massimo (@Rainmaker1973) January 24, 2024
ಚರ್ಚ್ ನಿರ್ಮಾಣ ತಡವಾಗುತ್ತಿರುವುದೇಕೆ? ಸಗ್ರಾಡಾ ಫ್ಯಾಮಿಲಿಯಾ 1882 ರಿಂದ ನಿರ್ಮಾಣ ಹಂತದಲ್ಲಿದೆ ಮತ್ತು 2026 ಅಥವಾ 2032 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವಿನ್ಯಾಸ ಬದಲಾವಣೆಗಳು, ಹಣಕಾಸಿನ ಸವಾಲುಗಳು, ಬಾಹ್ಯ ಘಟನೆಗಳು, ಸ್ಪ್ಯಾನಿಷ್ ಅಂತರ್ಯುದ್ಧ ಮತ್ತು COVID-19 ಸಾಂಕ್ರಾಮಿಕವು ಈ ಚರ್ಚ್ ಅನ್ನು ಇನ್ನೂ ನಿರ್ಮಿಸದಿರಲು ಕೆಲವು ಕಾರಣಗಳಾಗಿವೆ. ಈಗ ದೇಣಿಗೆ ಮತ್ತು ಟಿಕೆಟ್ ಶುಲ್ಕದಿಂದ ಬಂದ ಹಣದಲ್ಲಿ ಚರ್ಚ್ ನಿರ್ಮಿಸಲಾಗುತ್ತಿದೆ.
ಮತ್ತಷ್ಟು ಓದಿ: ಮಕ್ಕಳ ನಡವಳಿಕೆಗೆ ನೊಂದು ಸಾಕು ಪ್ರಾಣಿಯ ಹೆಸರಿಗೆ ಕೋಟಿಗಟ್ಟಲೆ ಆಸ್ತಿ ವರ್ಗಾವಣೆ ಮಾಡಿದ ವೃದ್ಧೆ
ಚರ್ಚ್ ಅಪೂರ್ಣವಾಗಿದ್ದರೂ ಕೂಡ ಅಭೂತಪೂರ್ವವಾಗಿದೆ. ಇದು ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆ ಎಂದು ಪರಿಗಣಿಸಲಾಗಿದೆ. ಇದು ಬಾರ್ಸಿಲೋನಾದ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ ಮತ್ತು ಸ್ಪೇನ್‌ನಲ್ಲಿ ಹೆಚ್ಚು ಭೇಟಿ ನೀಡುವ ತಾಣವಾಗಿದೆ. ಕ್ರಿಸ್‌ಮಸ್‌ನಲ್ಲಿ, ಈ ಚರ್ಚ್‌ನ ಅಲಂಕಾರಗಳು ಮತ್ತು ಅದರ ಗೋಪುರಗಳು ನೋಡಲು ಎರಡು ಕಣ್ಣು ಸಾಲದು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ