Viral Video: ಪತಿಯ ಮೂರನೇ ಮದುವೆಗೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟ ಮೊದಲ ಪತ್ನಿ; ಮುಂದೆನಾಯ್ತು ನೋಡಿ

ಪಾಕಿಸ್ತಾನಿ ಮಹಿಳೆಯೊಬ್ಬರು, ತನ್ನ ಪತಿ ಮೂರನೇ ಮದುವೆಯಾಗುತ್ತಿರುವ ವಿಷಯವನ್ನು ತಿಳಿದು, ಮದುವೆ ಮಂಟಪಕ್ಕೆ ಸಡನ್ ಎಂಟ್ರಿ ಕೊಟ್ಟು,  ಪತಿಯ ಬಂಡವಾಳವನ್ನು ಬಯಲು ಮಾಡುವ ಮೂಲಕ ಆತ ಮೂರನೇ ಮದುವೆಯಾಗುವುದನ್ನು ತಪ್ಪಿಸಿದ್ದಾರೆ. ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. 

Viral Video: ಪತಿಯ ಮೂರನೇ ಮದುವೆಗೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟ ಮೊದಲ ಪತ್ನಿ; ಮುಂದೆನಾಯ್ತು ನೋಡಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 26, 2024 | 3:38 PM

ಕೆಲ ದಿನಗಳ ಹಿಂದೆಯಷ್ಟೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ತಲಾಕ್ ನೀಡಿ, ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಪಾಕ್ ನಟಿ ಸನಾ ಜಾವೆದ್ ಅವರನ್ನು ವಿವಾಹವಾಗಿ ಸುದ್ದಿಯಲ್ಲಿದ್ದರು. ಈಗ ಅದೇ ರೀತಿಯ ಘಟನೆಯೊಂದು ಪಾಕಿಸ್ತಾನದಲ್ಲಿ ನಡೆದಿದೆ. ಹೌದು ಪಾಕಿಸ್ತಾನಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಪತ್ನಿಯರಿಗೆ ಮೋಸ ಮಾಡಿ ಮೂರನೇ ಮದುವೆಯಾಗಲು ಹೊರಟಿದ್ದ. ಆತನ ಮೂರನೇ ಮದುವೆಯ ವಿಚಾರವನ್ನು ತಿಳಿದ ಮೊದಲ ಪತ್ನಿ, ಮದುವೆ ಮಂಟಪಕ್ಕೆ ಬಂದು ಆಕೆಯ  ಗಂಡನ ಮೋಸದಾಟವನ್ನು ಬಯಲು ಮಾಡುವ ಮೂಲಕ ಆತ ಮೂರನೇ ಮದುವೆಯಾಗುವುದನ್ನು ತಡೆದಿದ್ದಾರೆ.

ಪತಿಯಿಂದ ವಂಚನೆಗೊಳಗಾದ ಮಹಿಳೆಯ ಪ್ರಕಾರ, ಆತ ತನ್ನ ಇಬ್ಬರೂ ಪತ್ನಿಯರ ಕಣ್ತಪ್ಪಿಸಿ, ಮೂರನೇ ಮದುವೆಯಾಗಲು ತಯಾರಿ ನಡೆಸುದಿದ್ದನು. ಈ ವಿಷಯ ಹೇಗೋ ತಿಳಿದು, ಮೊದಲ ಪತ್ನಿ  ಈತನ ಬಂಡವಾಳವನ್ನು ಬಯಲು ಮಾಡುವ ಸಲುವಾಗಿ, ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದಂತಹ ಮದುವೆ ಕಾರ್ಯಕ್ರಮಕ್ಕೆ ಸಡನ್ ಆಗಿ ಎಂಟ್ರಿ ಕೊಟ್ಟು, ಆತನ ಎರಡು ಮದುವೆಯ ವಿಚಾರದ ಬಗ್ಗೆಯೂ ಮೂರನೇ ಮದುವೆಯಾಗಲು ಹೊರಟಿರುವ ವಧುವಿನ ಕುಟುಂಬಕ್ಕೆ ತಿಳಿಸುವ ಮೂಲಕ, ಆಕೆಯ ಪತಿಯು ಮೂರನೇ ಮದುವೆಯಾಗುವುದನ್ನು ತಡೆದಿದ್ದಾರೆ. ಈ ಮಹಿಳೆಯ ಧೈರ್ಯ ಮತ್ತು ಒಬ್ಬಂಟಿಯಾಗಿ ನ್ಯಾಯಕ್ಕಾಗಿ ಹೋರಾಡಿದ ಪರಿಗೆ ನೆಟ್ಟಿಗರು ಆಕೆಯನ್ನು ಶ್ಲಾಘಿಸಿದ್ದಾರೆ.

ಈ ವೈರಲ್ ವಿಡಿಯೋವನ್ನು @desimojito ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಪಾಕಿಸ್ತಾನಿ ಮಹಿಳೆ, ತನ್ನ ಪತಿಯ ಮೂರನೇ ಮದುವೆಯನ್ನು ನಿಲ್ಲಿಸಲು ಮದುವೆ ಮಂಟಪಕ್ಕೆ ಆಗಮಿಸಿರುವ  ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ:

ವೈರಲ್ ವಿಡಿಯೋದಲ್ಲಿ ಪಾಕಿಸ್ತಾನಿ ಮಹಿಳೆಯೊಬ್ಬರು ತನ್ನ ಪತಿಯು ಮೂರನೇ ಮದುವೆಯಾಗುತ್ತಿರುವ ವಿಚಾರವನ್ನು ತಿಳಿದು, ಆತನ ಮೋಸದಾಟವನ್ನು ಹೇಗಾದರೂ ಬಯಲು ಮಾಡಬೇಕೆಂದು, ತನ್ನ ಪುಟ್ಟ ಮಗುವಿನ ಜೊತೆಗೆ ಮದುವೆ ಮಂಟಪಕ್ಕೆ  ಎಂಟ್ರಿ ಕೊಡ್ತಾರೆ. ಅಲ್ಲಿ ಒಂದಷ್ಟು ರಂಪ ರಾಮಾಯಣ, ಮಾಡಿ ಆತ ಮನೆಯಲ್ಲಿ ಸುಳ್ಳು ಹೇಳಿ ಬಂದು ಇಲ್ಲಿ ಮೂರನೇ ಮದುವೆಯಾಗುತ್ತಿದ್ದಾನಾ?  ನನಗೂ ಮತ್ತು ಆತನ ಎರಡನೇ ಪತ್ನಿಗೂ ಮೋಸ ಮಾಡಿದ್ದಲ್ಲದೆ, ಇನ್ನೊಬ್ಬ ಯುವತಿಯ ಜೀವನ ಹಾಳು ಮಾಡಲು ಹೊರಟಿದ್ದಾನೆ. ಈ ಮದುವೆಯನ್ನು ನಾನು ನಡೆಯಲು ಬಿಡೊಲ್ಲ. ಈ ಆಸಾಮಿ ಅದು ಹೇಗೆ ಮದುವೆಯಾಗ್ತಾನೆ ಅಂತ ನಾನೂ ನೋಡ್ತೀನಿ ಅಂತ ಹೇಳಿ ಧೈರ್ಯವಾಗಿ ನ್ಯಾಯಕ್ಕಾಗಿ ಹೋರಾಡುವ ದೃಶ್ಯಾವಳಿಯನ್ನು ಕಾಣಬಹುದು.

ಇದನ್ನೂ ಓದಿ: ಲೇಸ್ ಚಿಪ್ಸ್ ಆಮ್ಲೆಟ್, ನೆಟ್ಟಿಗರ ಕೋಪಕ್ಕೆ ಗುರಿಯಾದ ಯುವಕ, ಯಾಕೆ ಗೊತ್ತಾ? 

ಜನವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡದುಕೊಂಡಿದೆ. ಒಬ್ಬ ಬಳಕೆದಾರರು  ʼಆತನಿಗೆ ಸರಿಯಾಗಿ ಬುದ್ಧಿ ಕಲಿಸಿದ್ದೀಯಾ ಸಹೋದರಿʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಮಹಿಳೆಯ ದುಃಖವನ್ನು ನೋಡಲು ತುಂಬಾ ಕಷ್ಟಕರವಾಗುತ್ತಿದೆʼ ಅಂತ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾದದರು ʼಖಂಡಿತವಾಗಿಯೂ ಆ ಮಹಿಳೆಗೆ ನ್ಯಾಯ ಸಿಗಲೇಬೇಕುʼ ಅಂತ ಹೇಳಿದ್ದಾರೆ. ಇನ್ನೂ ಅನೇಕರು ಪತ್ನಿಯಿದ್ದರೂ ಮರು ಮದುವೆಯಾಗಲು ಆತನಿಗೆ ನಾಚಿಕೆಯಾಗಲ್ವಾ ಅಂತ  ಕಿಡಿ ಕಾರಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ