AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವೈದ್ಯರ ಬರಹ ಸುಲಭವಾಗಿ ಸಾಮಾನ್ಯ ಜನರಿಗೆ ಅರ್ಥ ಆಗೋಲ್ಲ ಯಾಕೆ? ಇಲ್ಲಿದೆ  ಇಂಟರೆಸ್ಟಿಂಗ್ ಮಾಹಿತಿ 

ವೈದ್ಯರ ಕೈ ಬರಹ ಯಾವಾಗಲೂ ಸಾಮಾನ್ಯ ಜನರಿಗೆ ಆರ್ಥವಾಗದ ಒಗಟಿನಂತಿರುತ್ತದೆ. ಅಷ್ಟಕ್ಕೂ  ವೈದ್ಯರ ಹ್ಯಾಂಡ್ ರೈಟಿಂಗ್ ನಮ್ಗೆ ಯಾಕೆ ಅಷ್ಟು ಸುಲಭವಾಗಿ ಅರ್ಥ ಆಗೋಲ್ಲ, ವೈದ್ಯರು ಬರೆಯುವ ಪ್ರಿಸ್ಕ್ರಿಪ್ಷನ್ ಓದುವುದು ಯಾಕೆ ಕಷ್ಟ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬನ್ನಿ ಹಾಗಿದ್ರೆ, ಡಾಕ್ಟರ್ಸ್ ಹ್ಯಾಂಡ್ ರೈಟಿಂಗ್ ಯಾಕೆ ಸಾಮಾನ್ಯ ಜನರಿಗೆ ಅರ್ಥ ಆಗೋಲ್ಲ ಅನ್ನೊದನ್ನು ನೋಡೋಣ.

Viral Video: ವೈದ್ಯರ ಬರಹ ಸುಲಭವಾಗಿ ಸಾಮಾನ್ಯ ಜನರಿಗೆ ಅರ್ಥ ಆಗೋಲ್ಲ ಯಾಕೆ? ಇಲ್ಲಿದೆ  ಇಂಟರೆಸ್ಟಿಂಗ್ ಮಾಹಿತಿ 
ಮಾಲಾಶ್ರೀ ಅಂಚನ್​
| Edited By: |

Updated on: Jan 26, 2024 | 5:46 PM

Share

ಯಾರ ಕೈ ಬರಹವನ್ನು ಬೇಕಾದ್ರೂ ಓದ್ಬೋದು, ಆದ್ರೆ ಈ ವೈದ್ಯರ ಏನು ಬರಿತಾರೆ ಅಂತ  ಅರ್ಥ ಮಾಡೋದು ತುಂಬಾನೇ ಕಷ್ಟ.  ಹೌದು ವೈದ್ಯರ ಕೈ ಬರಹ ಯಾವಾಗಲೂ ಸಾಮಾನ್ಯ ಜನರಿಗೆ ಆರ್ಥವಾಗದ  ಒಗಟಿನಂತಿರುತ್ತದೆ.  ಅದರಲ್ಲೂ ಅವರು ಬರೆದುಕೊಡುವಂತಹ ಪ್ರಿಸ್ಕ್ರಿಪ್ಷನ್ ಅಂತೂ ಅರ್ಥ ಮಾಡಿಕೊಳ್ಳಲು ಸಾಧ್ಯನೇ ಇಲ್ಲ. ಅದು ಕೇವಲ ಮೆಡಿಕಲ್ ಸ್ಟೋರ್ ಅವರಿಗೆ ಮಾತ್ರ ಅರ್ಥ ಆಗುತ್ತೆ. ನೀವು ಯಾವತ್ತದ್ರೂ ಯೋಚ್ನೆ ಮಾಡಿದ್ದೀರಾ, ಈ ವೈದ್ಯರ ಹ್ಯಾಂಡ್ ರೈಟಿಂಗ್ ಯಾಕೆ ಸಾಮಾನ್ಯ ಜನರಿಗೆ ಅರ್ಥ ಆಗೊಲ್ಲ ಅಂತಾ? ಇದರ ಹಿಂದೆ ಮೂರು ಕಾರಣಗಳಿವೆಯಂತೆ, ಈ ಕುರಿತ ಇಂಟರೆಸ್ಟಿಂಗ್ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬನ್ನಿ ಹಾಗಿದ್ರೆ, ಡಾಕ್ಟರ್ಸ್ ಹ್ಯಾಂಡ್ ರೈಟಿಂಗ್ ಯಾಕೆ ಸಾಮಾನ್ಯ ಜನರಿಗೆ ಅರ್ಥ ಆಗೋಲ್ಲ ಅನ್ನೊದನ್ನು ನೋಡೋಣ.

ಈ ಮೂರು ಮುಖ್ಯ ಕಾರಣಗಳಲ್ಲಿ ಮೊದಲನೆಯ ಕಾರಣ ಏನೆಂದ್ರೆ, ಮೆಡಿಕಲ್ ಎಕ್ಸಾಮ್ಸ್​​​ಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಕೇವಲ ಮೂರು ಗಂಟೆಯಲ್ಲಿ 150 ಅಂಕದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಹೀಗೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆಯಬೇಕಾದರೆ ತುಂಬಾ ವೇಗವಾಗಿ ಅವರು ಬರೆಯಬೇಕಾಗುತ್ತೆ. ಇದು ಕೂಡಾ ವೈದ್ಯರ ಕೈ ಬರಹ ಅಷ್ಟು ಸುಲಭವಾಗಿ ಅರ್ಥವಾಗದಿರಲು ಒಂದು ಕಾರಣವಾಗಿದೆ. ಎರಡನೆಯ ಕಾರಣವೇನೆಂದರೆ ಕಡಿಮೆ ಸಮಯದಲ್ಲಿ ಹೆಚ್ಚು ಪೇಶೆಂಟ್​​​ಗಳನ್ನು ಡಾಕ್ಟರ್ಸ್ ಚೆಕ್ ಮಾಡಬೇಕಾಗುತ್ತದೆ. ಅದಕ್ಕಾಗಿ ಅವರು ವೇಗವಾಗಿ ಪ್ರಿಸ್ಕ್ರಿಪ್ಷನ್ ಬರೆಯುತ್ತಾರೆ. ಅದು ನಮಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ 1000 ಜನಕ್ಕೆ ಕೇವಲ ಒಬ್ಬ ಡಾಕ್ಟರ್ ಇರೋದಂತೆ. ಇನ್ನೂ ಮೂರನೆಯ ಕಾರಣವನ್ನು ನೋಡುವುದಾದರೆ, ಡಾಕ್ಟರ್ಸ್ ಹ್ಯಾಂಡ್ ರೈಟಿಂಗ್ ಕೇವಲ ಮೆಡಿಕಲ್ ಸ್ಟೋರ್ ಅವರಿಗೆ ಮಾತ್ರ ಅರ್ಥವಾಗುತ್ತದೆ, ಸಾಮಾನ್ಯ ಜನರಿಗೆ ಅರ್ಥವಾದರೆ ಅವರು ಡಾಕ್ಟರ್ಸ್ ಬಳಿ ಹೋಗದೇ ತಾವೇ ತಮಗೆ ಬೇಕಾದ ಮಾತ್ರೆಗಳನ್ನು ತೆಗೆದುಕೊಂಡು, ತೊಂದರೆಗೆ ಸಿಳುಕುವಂತಹ ಸಾಧ್ಯತೆ ಇರುತ್ತದೆ. ಇನ್ನೊಂದು ಏನಪ್ಪಾ ಅಂದ್ರೆ,  ಆ ಪ್ರಿಸ್ಕ್ರಿಪ್ಷನ್ ನಮ್ಮ ಮೆಡಿಕಲ್ ಬಿಟ್ಟು ಬೇರೆ ಯಾರಿಗೂ ಅರ್ಥವಾಗಬಾರದು ಅಂತ ಕೂಡಾ, ಸಾಮಾನ್ಯ ಜನರಿಗೆ ಅರ್ಥವಾಗದಂತೆ ವೈದ್ಯರ ಕೈಬರಹವಿರುತ್ತದೆಯಂತೆ.

ಇದನ್ನೂ ಓದಿ: ಪತಿಯ ಮೂರನೇ ಮದುವೆಗೆ ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟ ಮೊದಲ ಪತ್ನಿ; ಮುಂದೆನಾಯ್ತು ನೋಡಿ

ಈ ವಿಡಿಯೋವನ್ನು  @voice_of_malenadu ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಈ ವೈರಲ್ ವಿಡಿಯೋದಲ್ಲಿ  ಡಾಕ್ಟರ್ಗಳ ಹ್ಯಾಂಡ್ ರೈಟಿಂಗ್ ಸಾಮಾನ್ಯ ಜನರಿಗೆ ಯಾಕೆ ಅರ್ಥವಾಗೋಲ್ಲ ಅನ್ನೋದರ ಹಿಂದಿನ ಇಂಟರೆಸ್ಟಿಂಗ್ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಜನವರಿ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼತುಂಬಾ ಒಳ್ಳೆಯ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್ʼ  ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹಳ ಉಪಯುಕ್ತ ಮಾಹಿತಿʼ ಅಂತ ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮೊದಲ ಕಾರಣ ಯಾಕೋ ಸರಿ ಅನ್ನಿಸಲಿಲ್ಲʼ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್