2021 ಮುಗಿಯುತ್ತಿದೆ. ಎಲ್ಲರೂ ವರ್ಷದ ಅಂತ್ಯಕ್ಕೆ ಬಂದು ನಿಂತಿದ್ದು ಹಳೆಯ ಕಹಿ ಘಟನೆಗಳನ್ನು ಮರೆತು ಹೊಸತನದ ಹೊಸ ವರ್ಷವನ್ನು ಸ್ವಾಗತಿಸಬೇಕು. ಈ ಹಿನ್ನೆಲೆಯಲ್ಲಿ ಗೂಗಲ್ ಕೂಡ ಹೊಸ ವರ್ಷವನ್ನು ಸ್ವಾಗತಿಸಲು ಇಯರ್ ಎಂಡ್ಅನ್ನು ವಿಶೇಷ ಡೂಡಲ್ ಮೂಲಕ ಆಚರಿಸುತ್ತಿದೆ. ಬಣ್ಣದ ಬಲೂನ್, ಟೋಪಿ, ಚಾಕೊಲೆಟ್ನಲ್ಲಿ 2021 ಎಂದು ಬರೆದಿದ್ದು ಹೊಸ ವರ್ಷವನ್ನು G ಅಕ್ಷರಕ್ಕೆ ಟೋಪಿ ತೊಡಿಸುವ ಮೂಲಕ ಕಾಲ್ಪನಿಕವಾಗಿ ತೋರಿಸಿದೆ.
ಆನಿಮೇಟೆಡ್ ಡೂಡಲ್ಅನ್ನು ಗೂಗಲ್ ಟ್ವೀಟ್ ಮಾಡಿದ್ದು ಹೊಸ ವರ್ಷದ ಹಿಂದಿನ ದಿನದ ಶುಭಾಷಯಗಳು ಎಂದು ಕ್ಯಾಪ್ಷನ್ ನೀಡಿದೆ. ಗ್ರೆಗೋರಿಯನ್ ಕ್ಯಾಲೆಂಡರ್ನ ಅನುಸಾರ ಡಿಸೆಂಬರ್ 31ನ್ನು ವರ್ಷದ ಕೊನೆಯ ದಿನ ಎಂದು ಆಚರಿಸಲಾಗುತ್ತದೆ. 2021 ವರ್ಷ ಪೂರ್ತಿ ಕೊರೋನಾ ಆತಂಕದಲ್ಲೇ ಕಳೆದಿದ್ದಾಗಿದೆ. ಹೀಗಾಗಿ 2022ರಲ್ಲಿ ಆದರೂ ಸಾಂಕ್ರಾಮಿಕ ರೋಗದ ಭೀತಿಯಿಂದ ಹೊರಬಂದು ಖುಷಿಯ ವರ್ಷ ದೊರಕಲಿ ಎನ್ನುವುದು ಎಲ್ಲರ ಆಶಯ. ಗೂಗಲ್ ಕೂಡ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿದೆ.
New Google Doodle has been released: “New Year’s Eve 2021” 🙂#google #doodle #designhttps://t.co/MBZ64lYKAw pic.twitter.com/KasECNibFF
— Google Doodles EN (@Doodle123_EN) December 30, 2021
ಗೂಗಲ್ ವಿಶೇಷ ದಿನಗಳಲ್ಲಿ ವಿಭಿನ್ನ ರೀತಿಯ ಡೂಡಲ್ ಮೂಲಕ ಬಳಕೆದಾರರಿಗೆ ಶುಭಾಷಯ ತಿಳಿಸುತ್ತದೆ. ಈ ಹಿಂದೆ ಚಳಿಗಾಲವನ್ನು ಆರಂಭಿಸುವ ಡೂಡಲ್ ಮೂಲಕ ಬಳಕೆದಾರರನ್ನು ಚೀಯರ್ ಅಫ್ ಮಾಡಿತ್ತು. ಇದೀಗ ವರ್ಷಾಂತ್ಯಕ್ಕೂ ತನ್ನದೇ ರೀತಿಯಲ್ಲಿ ಆನಿಮೇಟೆಡ್ ಡೂಡಲ್ ಮೂಲಕ ಶುಭಹಾರೈಸಿದೆ.
ಇದನ್ನೂ ಓದಿ:
‘ಹೊಸ ವರ್ಷಕ್ಕೆ ನಮ್ಮ ಅತಿಥಿಗಳಾಗಬೇಡಿ’: ಪಾರ್ಟಿ ಪ್ರಿಯರಿಗೆ ಎಚ್ಚರಿಕೆ ನೀಡಿದ ಅಸ್ಸಾಂ ಪೊಲೀಸರು