ನವದೆಹಲಿ: ಖ್ಯಾತ ಭಾರತೀಯ ಗಣಿತಶಾಸ್ತ್ರಜ್ಞ (Mathematician) ಮತ್ತು ಭೌತಶಾಸ್ತ್ರಜ್ಞ (Physicist) ಸತ್ಯೇಂದ್ರ ನಾಥ್ ಬೋಸ್ (Satyendra Nath Bose) ಅವರು ಭೌತಶಾಸ್ತ್ರ ಮತ್ತು ಗಣಿತ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಗೂಗಲ್ ಡೂಡಲ್ (Google doodle) ಮೂಲಕ ಶನಿವಾರ (ಮೇ 4)ರಂದು ವಿಶೇಷ ಗೌರವ ಸಲ್ಲಿಸಿದೆ.
1920 ರ ದಶಕದ ಆರಂಭದಲ್ಲಿ ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿನ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿಯಾದ ಸತ್ಯೇಂದ್ರ ನಾಥ್ ಬೋಸ್ ಅವರು ತಮ್ಮ ಕ್ವಾಂಟಮ್ ಸೂತ್ರೀಕರಣಗಳನ್ನು 1924 ಮೇ 4ರಂದು ಇಂದು, ಜರ್ಮನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್‌ಗೆ ಕಳುಹಿಸಿದರು. ಆಲ್ಬರ್ಟ್ ಐನ್‌ಸ್ಟೈನ್ ಅವರು ಇದನ್ನು ಕ್ವಾಂಟಮ್ ಮೆಕ್ಯಾನಿಕ್ಸ್‌ನಲ್ಲಿ ಗಮನಾರ್ಹ ಆವಿಷ್ಕಾರವೆಂದು ಗುರುತಿಸಿದರು.
ಇದನ್ನು ಓದಿ: ಮನೆಯ ಮಸಾಲೆ ಪದಾರ್ಥಗಳನ್ನು ರುಬ್ಬಿಕೊಳ್ಳಲು ವಿದ್ಯುತ್ ಕಚೇರಿಗೆ ತೆರಳುವ ರೈತ
1894 ರಲ್ಲಿ ಕೋಲ್ಕತ್ತಾದಲ್ಲಿ ಜನಿಸಿದ ಬೋಸ್ ಅವರು ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಖನಿಜಶಾಸ್ತ್ರ, ತತ್ವಶಾಸ್ತ್ರ, ಕಲೆಗಳು, ಸಾಹಿತ್ಯ ಮತ್ತು ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ಬೋಸ್ ಕಲ್ಕತ್ತಾದ ಹಿಂದೂ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಉನ್ನತ ವ್ಯಾಸಾಂಗವನ್ನು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮಾಡಿದರು. ಪ್ರತಿ ವರ್ಷ ಇವರು ಅತಿ ಹೆಚ್ಚು ಅಂಕ ತೆಗೆದುಕೊಂಡು ತೇರ್ಗಡೆಯಾಗುತ್ತಿದ್ದರು.
ಇದನ್ನು ಓದಿ: ಗರ್ಲ್ಫ್ರೆಂಡ್ ಜೊತೆ ಇದ್ದಾಗ ಹೆಂಡತಿ ಕೈಗೆ ಸಿಕ್ಕಿಬಿದ್ದ ಕಾಂಗ್ರೆಸ್ ನಾಯಕ; ಆ ಯುವತಿ ಯಾರು?
ಭೌತಶಾಸ್ತ್ರಜ್ಞ ಜಗದೀಶ್ ಚಂದ್ರ ಬೋಸ್ ಮತ್ತು ಇತಿಹಾಸಕಾರ ಪ್ರಫುಲ್ಲ ಚಂದ್ರ ರೇ ಅವರಿಂದ ಸ್ಫೂರ್ತಿ ಪಡೆದ ಬೋಸ್ ಅವರು 1916 ರಿಂದ 1921 ರವರೆಗೆ ಕಲ್ಕತ್ತಾ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದರು. 1924 ರಲ್ಲಿ ಬೋಸ್ ಶಾಸ್ತ್ರೀಯ ಭೌತಶಾಸ್ತ್ರದ ಯಾವುದೇ ಉಲ್ಲೇಖವಿಲ್ಲದೆ ಪ್ಲ್ಯಾಂಕ್‌ನ ಕ್ವಾಂಟಮ್ ವಿಕಿರಣ ನಿಯಮವನ್ನು ಪಡೆಯುವ ಕಾಗದವನ್ನು ಬರೆದರು.
1954 ರಲ್ಲಿ, ಬೋಸ್ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಲಾಯಿತು.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Sat, 4 June 22