ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ವಿಶೇಷ ಗೌರವ

Google google: ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್ ಅವರ 117ನೇ ಜನ್ಮ ದಿನದ ಪ್ರಯುಕ್ತ ವಿಶೇಷ ಡೂಡಲ್ಅನ್ನು ಗೂಗಲ್ ಬಿಡುಗಡೆ ಮಾಡಿದೆ.

ಹೋರಾಟಗಾರ್ತಿ, ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ವಿಶೇಷ ಗೌರವ
ಸುಭದ್ರಾ ಕುಮಾರಿ ಚೌಹಾಣ್
Edited By:

Updated on: Aug 16, 2021 | 9:41 AM

ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರದರ್ಶಿಸುವ ನೃತ್ಯ ಡೂಡಲ್ ಮೂಲಕ ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಿನ್ನೆ ಗೂಗಲ್ ಆಚರಿಸಿದೆ. ಆ ಬಳಿಕ ಇಂದು ಆಗಸ್ಟ್ 16ರಂದು ಭಾರತದ ಮಹಿಳಾ ಕವಯತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ಸುಭದ್ರಾ ಕುಮಾರಿ ಚೌಹಾಣ್ ಅವರ ಜನ್ಮ ದಿನದ ಪ್ರಯುಕ್ತ ಗೂಗಲ್ ಡೂಡಲ್ ವಿಶೇಷವಾಗಿ ಗೌರವಿಸಿದೆ.

ಕವಯತ್ರಿ ಸುಭದ್ರಾ ಕುಮಾರಿ ಚೌಹಾಣ್ ಅವರ 117ನೇ ಜನ್ಮ ದಿನದ ಪ್ರಯುಕ್ತ ವಿಶೇಷ ಡೂಡಲ್ಅನ್ನು ಗೂಗಲ್ ಬಿಡುಗಡೆ ಮಾಡಿದೆ. 1094ರಲ್ಲಿ ಇದೇ ದಿನ ಸುಭದ್ರಾ ಕುಮಾರಿ ಚೌಹಾಣ್ ಭಾರತದ ನಿಹಾಲ್ಪುರ ಗ್ರಾಮದಲ್ಲಿ ಜನಿಸಿದರು. ಕುದುರೆ ಗಾಡಿಯಲ್ಲಿ ಅದೆಷ್ಟೋ ದೂರ ಶಾಲೆಗೆ ಕ್ರಮಿಸಬೇಕಿತ್ತು. ಪ್ರತಿನಿತ್ಯ ಶಾಲೆಗೆ ಕುದುರೆ ಗಾಡಿಯಲ್ಲಿ ಕ್ರಮಿಸುವಾಗಲೂ ಸಹ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದರು.

ತಮ್ಮ ಒಂಭತ್ತನೇ ವಯಸ್ಸಿನಲ್ಲಿ ತಾವು ಬರೆದ ಮೊದಲ ಕವಿತೆಯನ್ನು ಪ್ರಕಟಿಸಿದರು. ಅವರು ಪ್ರೌಢಾವಸ್ಥೆಯಲ್ಲಿರುವಾಗಲೇ ಭಾರತದ ಸ್ವಾತಂತ್ರ್ಯಕ್ಕೆ ಧ್ವನಿ ಎತ್ತಿದರು. ಭಾರತೀಯ ಮಹಿಳೆಯರು ಎದುರಿಸುತ್ತಿದ್ದ ಲಿಂಗ ಮತ್ತು ಜಾತಿ ತಾರತಮ್ಯದಂತಹ ಸಂಕಷ್ಟವನ್ನು ಕೇಂದ್ರೀಕರಿಸಿ ಕವಿತೆಗಳನ್ನು ಬರೆದರು. ಸುಭದ್ರಾ ಕುಮಾರಿ ಚೌಹಾಣ್ ಒಟ್ಟು 88 ಕವಿತೆಗಳು, 46 ಸಣ್ಣ ಕಥೆಗಳನ್ನು ಪ್ರಕಟಿಸಿದ್ದಾರೆ. ಇಂದು ಚೌಹಾಣ್ ಬರೆದ ಅನೇಕ ಕಾವ್ಯವು ದೇಶದ ವಿದ್ಯಾರ್ಥಿಗಳ ಪಠ್ಯದಲ್ಲಿದೆ. ಐತಿಹಾಸಿಕ ಪ್ರಗತಿಯ ಸಂಕೇತವಾಗಿ ಉಳಿದಿದೆ.

ಇದನ್ನೂ ಓದಿ:

Kadambini Ganguly: ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಅವರಿಗೆ ಗೂಗಲ್​ ಡೂಡಲ್ ವಿಶೇಷ​ ಗೌರವ

ಭಾರತದ ವೈವಿಧ್ಯತೆ ಸಾರಿದ ‘ಗೂಗಲ್ ಡೂಡಲ್​’; ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸಿದ ಇಂಟರ್​ನೆಟ್​ ದೈತ್ಯ