ಚಿಕನ್ಪಾಕ್ಸ್ (chickenpox) ರೋಗದ ವಿರುದ್ಧ ಮೊದಲ ಲಸಿಕೆ ಕಂಡುಹಿಡಿದ ಜಪಾನಿನ ವೈರಲಾಜಿಸ್ಟ್(virologist) ಡಾ. ಮಿಚಿಯಾಕಿ ತಕಾಹಶಿ(Michiaki Takahashi) ಅವರ ಜನ್ಮದಿನದವಾದ ಇಂದು (ಫೆ.17) ಗೂಗಲ್ ವಿಶೇಷ ಡೂಡಲ್ (Google Doodle) ರಚಿಸಿದೆ. ಡಾ. ಮಿಚಿಯಾಕಿ ಅವರ 94ನೇ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಸಿದೆ. ಈ ಡೂಡಲ್ಅನ್ನು ಜಪಾನೀ ಕಲಾವಿದ ಟಟ್ಸುರೊ ಕಿಯುಚಿ ಎನ್ನುವವರು ಚಿತ್ರಿಸಿದ್ದಾರೆ. ಡೂಡಲ್ನಲ್ಲಿ ಮಿಚಿಯಾಕಿ ಅವರು ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು. ಅವರು ಅಧ್ಯಯನಕ್ಕಾಗಿ ಸೂಕ್ಷ್ಮ ದರ್ಶಕ ಬಳಸುತ್ತಿರುವುದು, ಮಗುವಿನ ತೋಳಿಗೆ ಬ್ಯಾಂಡ್ ಹಾಕುವುದನ್ನು ಡೂಡಲ್ನಲ್ಲಿ ಕಾಣಬಹದು.
ಡಾ. ಮಿಚಿಯಾಕಿ 1928ರಲ್ಲಿ ಜಪಾನ್ನ ಒಸಾಕಾ ನಗರದಲ್ಲಿ ಜನಿಸಿದರು. ಮೈಕ್ರೋಬಿಯಲ್ ಡಿಸೀಸ್ ಸಂಶೋಧನಾ ಸಂಸ್ಥೆಗೆ ಸೇರಿ 1959ರಲ್ಲಿ ವೈದ್ಯಕೀಯ ಪದವಿ ಪಡೆದರು. 1974ರಲ್ಲಿ ಇವರು ಚಿಕನ್ಪಾಕ್ಸ್ಗೆ ಕಾರಣವಾಗುವ ವರಿಸೆಲ್ಲಾ ವೈರಸ್ಅನ್ನು ತಡೆಗಟ್ಟಲು ಮೊದಲ ಲಸಿಕೆಯನ್ನು ಕಂಡುಹಿಡಿದರು. ಇಮ್ಯುನೊಕೊಪ್ರೊಮೈಸ್ಡ್ ರೋಗಿಗಳನ್ನು ಸಂಶೋಧನೆಗೆ ಒಳಪಡಿಸುವ ಮೂಲಕ ಲಸಿಕೆಯ ಪರಿಣಾಮಕತ್ವವನ್ನು ಸಾಬೀತು ಮಾಡಲಾಯಿತು. ನಂತರ ವಿಶ್ವ ಆರೋಗ್ಯ ಸಂಸ್ಥೆಯು ಅನುಮೋದನೆ ನೀಡಿದ ಬಳಿಕ ಮೈಕ್ರೋಬಿಯಲ್ ರೋಗಗಳ ಸಂಶೋಧನಾ ಪ್ರತಿಷ್ಠಾನವು 1986ರಲ್ಲಿ ಲಸಿಕೆಯನ್ನು ಬಳಕೆಗೆ ಹೊರತಂದಿತು.
ಜಗತ್ತಿನ 80ಕ್ಕೂ ಹೆಚ್ಚು ದೇಶಗಳು ಚಿಕನ್ಪಾಕ್ಸ್ಗೆ ಜೀವರಕ್ಷಕವಾಗಿ ಇವರ ಲಸಿಕೆಯನ್ನು ಬಳಸಿಕೊಂಡಿದೆ. ಪ್ರತೀ ವರ್ಷ ಲಕ್ಷಾಂತರ ಮಕ್ಕಳಿಗೆ ಈ ಲಸಿಕೆ ನೀಡಿ ಚಿಕನ್ಪಾನಕ್ಸ್ನಿಂದ ರಕ್ಷಿಸಲಾಗುತ್ತದೆ. ಡಾ.ಮಿಚಿಯಾಕಿ 2013ರಲ್ಲಿ ನಿಧನರಾದರು.
ಇದನ್ನೂ ಓದಿ:
48 ಗಂಟೆಗಳ ಕಾಲ ಪ್ಲಾಸ್ಟಿಕ್ ಕ್ಯಾನ್ನಲ್ಲಿ ತಲೆ ಸಿಲುಕಿ ಒದ್ದಾಡುತ್ತಿದ್ದ ಚಿರತೆ ಮರಿಯ ರಕ್ಷಣೆ
Published On - 11:03 am, Thu, 17 February 22