
ಅಜ್ಜ ಅಜ್ಜಿಯಂದಿರೆಂದರೆ (grandparents) ಮೊಮ್ಮಕ್ಕಳಿಗೆ ತುಂಬಾನೇ ಇಷ್ಟ. ಹೀಗಾಗಿ ಮೊಮ್ಮಕ್ಕಳು ಶಾಲೆಗೆ ರಜೆ ಸಿಕ್ಕರೆ ಸಾಕು ಅಜ್ಜಿ ಮನೆಗೆ ಓಡಿ ಬರುತ್ತಾರೆ. ಆದರೆ ಇಲ್ಲೊಬ್ಬ ಮೊಮ್ಮಗನು ಅಜ್ಜಿಗೆ ಸರ್ಪ್ರೈಸ್ ನೀಡಿದ್ದಾನೆ. ಬಹಳ ದಿನಗಳ ಬಳಿಕ ಅಜ್ಜಿಯನ್ನು ಕಾಣಲು ಊರಿಗೆ ಬಂದಿದ್ದಾನೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಅಜ್ಜಿಯ ಮುಂದೆ ಬಂದು ನಿಲ್ಲುತ್ತಿದ್ದಂತೆ ಮೊಮ್ಮಗನನ್ನು ಕಂಡ ಖುಷಿ ಹಿರಿಜೀವದ ಮೊಗದಲ್ಲಿ ವ್ಯಕ್ತವಾಗಿದೆ. ಅಜ್ಜಿ ಹಾಗೂ ಮೊಮ್ಮಗನ ಬಾಂಧವ್ಯ ಸಾರುವ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
ಸೂರಜ್ (@SURAJ_624) ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅಜ್ಜಿ ತಮ್ಮ ಮೊಮ್ಮಗ ಬಹಳ ದಿನಗಳ ನಂತರ ಮನೆಗೆ ಬಂದಿರುವುದನ್ನು ನೋಡಿ ತುಂಬಾ ಸಂತೋಷಪಟ್ಟರು ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಈ ವಿಡಿಯೋದಲ್ಲಿ ವೃದ್ಧೆಯೊಬ್ಬರು ಹೊಲದಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಮೊಮ್ಮಗನು ಹೇಳದೇನೆ ಅಜ್ಜಿಯ ಮುಂದೆ ಪ್ರತ್ಯಕ್ಷನಾಗಿ ಸರ್ಪ್ರೈಸ್ ನೀಡಿದ್ದಾನೆ. ಮೊಮ್ಮಗನನ್ನು ನೋಡಿದ ಖುಷಿಯೇ ಅಜ್ಜಿಗೆ ಮಾತೇ ಬರುತ್ತಿಲ್ಲ. ಮೊಮ್ಮಗನನ್ನು ತಬ್ಬಿಕೊಂಡು ತನ್ನ ಖುಷಿಯನ್ನು ಹೊರಹಾಕಿರುವುದನ್ನು ಕಾಣಬಹುದು. ಆ ಬಳಿಕ ಅಜ್ಜಿ ಮೊಮ್ಮಗ ಕೆಲಸದ ಬಗ್ಗೆ ಮಾತನಾಡುತ್ತಿರುವುದನ್ನು ನೋಡಬಹುದು.
Grandma Is So Happy When She Sees Her Grandson Come Home After A Long Time Away 🥹❤️ pic.twitter.com/a08CnTiATA
— SURAJ (@SURAJ_624) December 30, 2025
ಇದನ್ನೂ ಓದಿ:ಅಜ್ಜಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ಮುಗ್ಗರಿಸಿ ಬಿದ್ದ ಪುಟಾಣಿ
ಡಿಸೆಂಬರ್ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತುಂಬಾ ಮುದ್ದಾದ ಸಂಬಂಧ ಎಂದಿದ್ದಾರೆ. ಇನ್ನೊಬ್ಬರು, ಇದು ನಿಜವಾದ ಸಂತೋಷ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ವಿಡಿಯೋ ನೋಡಿ ನನ್ನ ಅಜ್ಜಿ ನೆನಪಾದರು ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Wed, 31 December 25