New Year’s Eve: 2025ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸುವ ವಿಶೇಷ ಡೂಡಲ್ ಹಂಚಿಕೊಂಡ ಗೂಗಲ್
Google Doodle Today: ಪ್ರತೀ ಬಾರಿ ಗೂಗಲ್ ತನ್ನ ಡೂಡಲ್ ಮೂಲಕ ಗಮನ ಸೆಳೆಯುತ್ತಿರುತ್ತದೆ. ಅದರಲ್ಲೂ ಈ ವಿಶೇಷ ದಿನಗಳ ಸಂಭ್ರಮ ಆಚರಣೆಯಲ್ಲಿ ಭಾಗಿಯಾಗುವುದಿದೆ. ಹೌದು ವಿಶೇಷ ಸಂದರ್ಭದಲ್ಲಿ ಗೂಗಲ್ ಕೂಡ ತನ್ನ ಡೂಡಲ್ನಲ್ಲಿ ಫೋಟೋ, ಆ್ಯನಿಮೇಷನ್ ಹಾಕುವ ಮೂಲಕ ಆಚರಿಸುತ್ತದೆ. ಅದೇ ರೀತಿ ಈ ಬಾರಿ ಗೂಗಲ್ 2026ರ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದಲ್ಲಿದೆ. ಕೊನೆಯ ದಿನದ ಹಿನ್ನೆಲೆಯಲ್ಲಿ ಗೂಗಲ್ ನ್ಯೂ ಇಯರ್ ಈವ್ ಡೂಡಲ್ ಮೂಲಕ ಆಚರಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

2025 ಕ್ಕೆ ವಿದಾಯ ಹೇಳುವ ದಿನ ಬಂದೇ ಬಿಟ್ಟಿತ್ತು. 2025 ಕ್ಕೆ ಗುಡ್ ಬೈ ಹೇಳಲು ಇನ್ನೇನು ಕೆಲವೇ ಕೆಲವು ಗಂಟೆಗಳಷ್ಟೇ ಬಾಕಿಯಿವೆ. ಈಗಾಗಲೇ ಹೊಸ ವರ್ಷವನ್ನು (New year) ಬರಮಾಡಿಕೊಳ್ಳಲು ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಕಡೆ ಹೊಸ ವರ್ಷ 2026ನ್ನು ಬರ ಮಾಡಿಕೊಳ್ಳುವ ಸಂತಸದ ಸಮಯವನ್ನು ಗೂಗಲ್ ಡೂಡಲ್‌ನ್ನು(Google doodle) ವಿಭಿನ್ನವಾಗಿ ರೂಪಿಸಿದೆ.
ಇಂದಿನ ಗೂಗಲ್ ಡೂಡಲ್ ವಿಶೇಷತೆಯೇನು?
ಡೂಡಲ್ ಹೊಸ ವರ್ಷವನ್ನು ಪ್ರಾರಂಭಿಸಲು ಹೊಸ ಹುರುಪನ್ನು ನೀಡುತ್ತಿದೆ. ಇಂದು, ತನ್ನ ಗೂಗಲ್ ಡೂಡಲ್ ಮೂಲಕ, 2025 ನ್ನು ವಿಭಿನ್ನ ರೀತಿಯಲ್ಲಿ ವಿದಾಯ ಹೇಳುತ್ತಿದೆ ಹಾಗೂ 2026 ಹೊಸ ವರ್ಷವನ್ನು ಸ್ವಾಗತಿಸುತ್ತಿದೆ. ಹೀಗಾಗಿ ಈ ವರ್ಷದ ಕೊನೆಯ ದಿನದ ಹಿನ್ನೆಲೆಯಲ್ಲಿ ಗೂಗಲ್ ನ್ಯೂ ಇಯರ್ ಈವ್ಅನ್ನು ಡೂಡಲ್ ಮೂಲಕ ಆಚರಿಸಿದೆ.
ಗೂಗಲ್ ಡೂಡಲ್ 2025 ಮತ್ತು 2026 ಎರಡನ್ನೂ ಒಳಗೊಂಡಿದೆ. 2026 ರ ಆರಂಭವನ್ನು ಗೂಗಲ್ ಸ್ವಾಗತಿಸುತ್ತಿರುವಂತೆ ಡೂಡಲ್ ವಿನ್ಯಾಸವೂ ಬಲೂನುಗಳು, ಮಿಂಚು ಅಲಂಕಾರಗಳೊಂದಿಗೆ ಮಧ್ಯರಾತ್ರಿಯ ಆಚರಣೆಯನ್ನು ನೆನಪಿಸುವಂತಿದೆ. ಈ ಗೂಗಲ್ ಲೋಗೋವನ್ನು ಹೊಳೆಯುವ ಚಿನ್ನದ ಅಕ್ಷರಗಳಲ್ಲಿ ಬರೆಯಲಾಗಿದೆ. ಮಧ್ಯದಲ್ಲಿ, ಹೊಳೆಯುವ ಸಿಲ್ವರ್ ಬಣ್ಣದಲ್ಲಿ 2026 ರನ್ನು ಬರೆಯಲಾಗಿದೆ. ನೀವು ಅದರ ಮೇಲೆ ಕ್ಲಿಕ್ ಮಾಡಿದಾಗ 2026ರಾಗಿ ಬದಲಾಗುತ್ತವೆ.
ಇದನ್ನೂ ಓದಿ:ಡಿಎನ್‌ಎ ಕಲಿಕೆಗೆ ಪ್ರೋತ್ಸಾಹಿಸಿ ಡೂಡಲ್ ಮೂಲಕ ವಿಶೇಷ ಗೌರವ ಸಲ್ಲಿಸಿದ ಗೂಗಲ್
ಗೂಗಲ್ ಡೂಡಲ್ ಪಾರ್ಟಿ-ಥೀಮ್ ಆಗಿದ್ದು, ವರ್ಣರಂಜಿತ ಬಲೂನ್‌ಗಳು ಮತ್ತು ಅಲಂಕಾರಗಳನ್ನು ಒಳಗೊಂಡಿದೆ. ನಕ್ಷತ್ರಗಳು ಇಡೀ ಡೂಡಲ್‌ಗೆ ಪಾರ್ಟಿಯ ವಾತಾವರಣವನ್ನು ನೀಡುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




