ಮದುವೆ ಒಂದು ಪವಿತ್ರ ಬಂಧ. ಎರಡು ಮನಸ್ಸುಗಳ ಬೆಸುಗೆ. ಹೀಗಾಗಿ ತಮ್ಮ ಮದುವೆ ಕ್ಷಣಗಳನ್ನು ಸುಮಧುರವಾಗಿಸಲು ಬಯಸುತ್ತಾರೆ. ಭಾರತೀಯ ಮದುವೆಯಲ್ಲಿ ವಧು ವರನು ಒಟ್ಟಿಗೆ ನೃತ್ಯ ಮಾಡುವುದು, ಸಂಬಂಧಿಕರು ಡಾನ್ಸ್ ಮೂಲಕ ವಧು ವರನನ್ನು ಮದುವೆ ಮಂಟಪಕ್ಕೆ ಕರೆತರುವ ಕ್ಷಣಗಳನ್ನು ನೋಡಬಹುದ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವಧುವು ಮಂಟಪಕ್ಕೆ ಬರುತ್ತಿದ್ದಂತೆ ದೃಷ್ಟಿ ತೆಗೆದು ಆಕೆಯ ಕೈಹಿಡಿದು ವರನೇ ಕರೆದುಕೊಂಡು ಬಂದಿದ್ದಾನೆ.
Zoopgo ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ವಧುವು ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟು ಸುಂದರವಾಗಿ ಕಾಣಿಸುತ್ತಿದ್ದಾಳೆ. ಆಕೆಯನ್ನು ನೋಡಿದ ವರನು, ಕೈಯಲ್ಲಿ ಹಣವನ್ನು ಹಿಡಿದು ಆಕೆಯ ದೃಷ್ಟಿ ತೆಗೆದಿದ್ದಾನೆ. ಈ ವೇಳೆಯಲ್ಲಿ ವಧುವು ವರನನ್ನು ನೋಡುತ್ತಾ ನಗುತ್ತಾ ನಿಂತಿದ್ದಾಳೆ. ಆ ಬಳಿಕ ಕೈಹಿಡಿದು ಆಕೆಯನ್ನು ಮಂಟಪಕ್ಕೆ ಕರೆದುಕೊಂಡು ಬಂದಿದ್ದಾನೆ.
ಇದನ್ನೂ ಓದಿ: 10 ವರ್ಷಗಳ ಕಾಲ ಗುಹೆಯೊಳಗಿದ್ದ 110ರ ವೃದ್ಧ, ಇದು ರಾಮನ ಪರಮ ಭಕ್ತನ ರೋಮಾಂಚನಕಾರಿ ಕಥೆ
ಈ ವಿಡಿಯೋಗೆ “ಪ್ರತಿಯೊಬ್ಬ ವಧು ತನ್ನ ವರನು ತನ್ನನ್ನು ಹೀಗೆ ಸ್ವಾಗತಿಸಬೇಕೆಂದು ಕನಸು ಕಾಣುತ್ತಾಳೆ.” ಎಂದು ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ 31 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡು ಕೊಂಡಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರೂ ಪ್ರತಿಕ್ರಿಯೆ ನೀಡಿದ್ದು, ಆ ಹುಡುಗಿಗೆ ಒಳ್ಳೆಯ ವರ ಸಿಕ್ಕಿದ್ದಾನೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬರು, ‘ ಆ ಹುಡುಗನನ್ನು ಮದುವೆಯಾಗುತ್ತಿರುವ ಆಕೆಯು ನಿಜಕ್ಕೂ ಅದೃಷ್ಟವಂತಳು’ ಎಂದಿದ್ದಾರೆ. ಇನ್ನೊಬ್ಬರು ‘ ವರನು ಹಣವನ್ನು ವ್ಯರ್ಥ ಮಾಡಲಿಲ್ಲ, ಅದನ್ನು ಯಾರಿಗೂ ನೀಡಲಿಲ್ಲ ‘ ಎಂದಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ