Viral : Google’s ‘Year In Search 2022’- 2022ರಲ್ಲಿ ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಾಟಕ್ಕೆ ಒಳಗಾದ ಶಬ್ದಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಯಾವ ದೇಶದಲ್ಲಿ ಯಾವ ವಿಷಯಗಳ ಕುರಿತು ಜನ ಸರ್ಚ್ ಎಂಜಿನ್ನಲ್ಲಿ ಹುಡುಕಾಡಿದ್ದಾರೆ ಎನ್ನುವ ಮಾಹಿತಿ ಇದರಲ್ಲಿದೆ. ಕೊವಿಡ್ 19 ಸರ್ಚ್ ಎಂಜಿನ್ ಬಿಟ್ಟು ಸರಿದಿದೆ ಎಂದರೆ ಜನ ರೋಗಮುಕ್ತರಾಗಿದ್ದಾರೆ ಎಂದರ್ಥ. ನೋವು, ನರಳಿಕೆ, ಭೀತಿಯಿಂದ ಹೊರಬಂದು ಮನಸಿಗೆ ಉಲ್ಲಾಸ ಕೊಡುವಂಥ ಸಂಗತಿಗಳ ಕಡೆ ಗಮನ ಹರಿಸಿದ್ದಾರೆ. ಆಟ, ಮನರಂಜನೆ ಮತ್ತು ಕ್ರೀಡೆಗ ಸಂಬಂಧಿಸಿದ ವಿಷಯಗಳತ್ತ ಆಸಕ್ತಿ ತೋರಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆಯೇ.
ಇದನ್ನೂ ಓದಿ : 2022ರಲ್ಲಿ ಜಗತ್ತಿನಾದ್ಯಂತ ಗೂಗಲಪ್ಪನ ಹೊಟ್ಟೆಯಲ್ಲಿ ಅತೀ ಹೆಚ್ಚು ಹುಡುಕಿದ್ದು ಪನೀರ್ನ ಈ ರೆಸಿಪಿಯನ್ನು!
ಹಾಗಿದ್ದರೆ ನೀವು ಊಹಿಸಬಲ್ಲಿರಾ? ಅಗ್ರಸ್ಥಾನದಲ್ಲಿರುವ ವಿಷಯ ಅಥವಾ ಶಬ್ದಗಳು ಯಾವುವು ಎಂದು? ಪ್ರಪಂಚದಾದ್ಯಂತ Wordle – ವರ್ಡಲ್- ಪದರಚನೆಯ ಆಟವನ್ನು ಹೆಚ್ಚು ಜನ ಹುಡುಕಾಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಬ್ರೂಕ್ಲಿನ್ನ ಸಾಫ್ಟ್ವೇರ್ ಎಂಜಿನಿಯರ್ ಜೋಶ್ ವಾರ್ಡೆಲ್ ತಮ್ಮ ಭಾರತೀಯ ಪಾರ್ಟನರ್ ಪಲಕ್ ಶಾ ಅವರೊಂದಿಗೆ ಆಡಲು ಈ ಆಟವನ್ನು ರೂಪಿಸಿದ್ದರು. ‘
ವರ್ಡಲ್ ನಂತರ ಭಾರತ Vs ಇಂಗ್ಲೆಂಡ್, ಉಕ್ರೇನ್ ಮತ್ತು ರಾಣಿ ಎಲಿಜಬೆತ್ ಈ ಪದಗಳು ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟಿವೆ. ಕ್ರಿಕೆಟ್, ಫುಟ್‌ಬಾಲ್, ಬಾಲಿವುಡ್ ಕೂಡ ಟಾಪ್ 10ನಲ್ಲಿ ಸೇರಿವೆ.
1. ಇಂಡಿಯನ್ ಪ್ರೀಮಿಯರ್ ಲೀಗ್
2. ಕೋವಿನ್
3. ಫಿಫಾ ವಿಶ್ವಕಪ್
4. ಏಷ್ಯಾ ಕಪ್
5. ಐಸಿಸಿ ಟಿ20 ವಿಶ್ವಕಪ್
6. ಬ್ರಹ್ಮಾಸ್ತ್ರ: ಭಾಗ ಒಂದು – ಶಿವ
7. ಇ-ಶ್ರಾಮ್ ಕಾರ್ಡ್
8. ಕಾಮನ್ವೆಲ್ತ್ ಗೇಮ್ಸ್
9. K.G.F: ಭಾಗ 2
10. ಇಂಡಿಯನ್ ಸೂಪರ್ ಲೀಗ್
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:52 am, Sat, 10 December 22