Guinness Records: 3 ಸೆಕೆಂಡುಗಳ ಒಳಗೆ A ಯಿಂದ Z ವರೆಗೆ ಟೈಪ್​ ಮಾಡಿ ಗಿನ್ನೆಸ್ ದಾಖಲೆ ಬರೆದ ಭಾರತೀಯ

|

Updated on: May 03, 2024 | 5:44 PM

ಕೇವಲ ಮೂರು ಸೆಕೆಂಡುಗಳ ಒಳಗೆ ಒಟ್ಟು 26 ಅಕ್ಷರಗಳನ್ನು ಟೈಪ್​​ ಮಾಡಿದ್ದು, ಇವರ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಣ್ಣು ಮಿಟುಕುವಷ್ಟರ ಒಳಗಡೆ Aಯಿಂದ Z ವರೆಗೆ ಟೈಪ್​​ ಮಾಡಿದ್ದು, ಇವರ ಈ ಸಾಧನೆಯ ವಿಡಿಯೋ ಇಲ್ಲಿದೆ ನೋಡಿ.

Guinness Records: 3 ಸೆಕೆಂಡುಗಳ ಒಳಗೆ A ಯಿಂದ Z ವರೆಗೆ ಟೈಪ್​ ಮಾಡಿ ಗಿನ್ನೆಸ್ ದಾಖಲೆ ಬರೆದ ಭಾರತೀಯ
Guinness Book of World Records
Follow us on

ಹೈದರಾಬಾದ್: ಪ್ರತೀ ದಿನ ಕಂಪ್ಯೂಟರ್​ ಮುಂದೆ ಕುಳಿತು ಟೈಪ್​ ಮಾಡಿ ಮಾಡಿ ಬೋರಾಗಿದ್ಯಾ? ಹಾಗಿದ್ರೆ ಈ ಚಾಲೆಂಜ್​ ಪ್ರಯತ್ನಿಸಿ. ಹೌದು ಹೈದರಾಬಾದ್​​ನ ಎಸ್‌ಕೆ ಅಶ್ರಫ್ ಎಂಬ ವ್ಯಕ್ತಿಯೊಬ್ಬರು ಕ್ಷಣಾರ್ಧದಲ್ಲಿ ಅಂದರೆ ಕೇವಲ 3 ಸೆಕೆಂಡ್ ಒಳಗೆ ಇಂಗ್ಲೀಷ್​ನ A-Z ಒಟ್ಟು 26 ಅಕ್ಷರಗನ್ನು ಟೈಪ್​​ ಮಾಡಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಇವರ ಸಾಧನೆಯನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ.

ಕೇವಲ ಮೂರು ಸೆಕೆಂಡುಗಳ ಒಳಗೆ ಒಟ್ಟು 26 ಅಕ್ಷರಗಳನ್ನು ಟೈಪ್​​ ಮಾಡಿದ್ದು, ಇವರ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಣ್ಣು ಮಿಟುಕುವಷ್ಟರ ಒಳಗಡೆ Aಯಿಂದ Z ವರೆಗೆ ಟೈಪ್​​ ಮಾಡಿದ್ದು, ಇವರ ಈ ಸಾಧನೆಯ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ಚಲಿಸುತ್ತಿರುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿ, ಥಳಿಸಿ ಪರಾರಿಯಾದ ಪತಿ

ವಿಡಿಯಯೋದಲ್ಲಿ ಅಶ್ರಫ್ ಅವರು ಟೈಪ್​ ಮಾಡಲು ಸಿದ್ಧವಾಗಿ ಕುಳಿತಿರುವುದನ್ನು ಕಾಣಬಹುದು. ಸಮಯ ಪ್ರಾರಂಭವಾಗುತ್ತಿದ್ದಂತೆ 3 ಸೆಕೆಂಡ್​​ಗಳ ಒಳಗೆ Zನಿಂದ ಪ್ರಾರಂಭಿಸಿ A ವೆರೆಗೆ ಟೈಪ್​ ಮಾಡಿರುವುದು ಸೆರೆಯಾಗಿದೆ.

ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಅವರ ಅದ್ಭುತ ಪ್ರದರ್ಶನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಮೇ 2 ರಂದು ಹಂಚಿಕೊಳ್ಳಲಾದ ವೀಡಿಯೊ ಈಗಾಗಲೇ 41 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಇದಲ್ಲದೇ ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ