
112 ವರ್ಷಗಳ ಕಾಲ ಬದುಕಿರುವ ಈ ವ್ಯಕ್ತಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್ನಲ್ಲಿ ಹೆಸರು ಪಡೆದಿದ್ದಾರೆ. ಗಿನ್ನಿಸ್ ವರ್ಡ್ ರೆಕಾರ್ಡ್ ಪ್ರಕಾರ, ಸ್ಪೇನ್ನಲ್ಲಿ 1019 ಫೆಬ್ರವರಿ 11ರಂದು ಸ್ಯಾಟರ್ನಿನೊ ಅವರು ಜನಿಸಿದರು. ಆದರೆ ಪ್ರತೀ ಬಾರಿ ಅವರು ತಮ್ಮ ಜನ್ಮ ದಿನವನ್ನು ಫೆಬ್ರವರಿ 8ರಂದು ಆಚರಿಸಿಕೊಳ್ಳುತ್ತಾರೆ. ಇದೀಗ ಸ್ಯಾಟರ್ನಿನೊ ಅವರಿಗೆ 112 ವರ್ಷ. ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಹೆಸರಾಗಿದ್ದಾರೆ.
ದೀರ್ಘಾಯುಷ್ಯದ ರಹಸ್ಯದ ಬಗ್ಗೆ ಅವರಲ್ಲಿ ಅಭಿಪ್ರಾಯ ಕೇಳಿದಾಗ ಉತ್ತರಿಸಿದ ಸ್ಯಾಟರ್ನಿನೊ, ಶಾಂತಿಯಿಂದ ಜೀವನ ನಡೆಸಿಕೊಂಡು ಬಂದೆ ಎಂದು ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 4.92 ಅಡಿ ಎತ್ತರವಿರುವ ಅವರು ಶೂ ತಯಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅತ್ಯಂತ ಪ್ರೀತಿಯಿಂದ ಶಾಂತಿಯಿಂದ ತಮ್ಮ ಪತ್ನಿಯೊಡನೆ ಜೀವನ ಸಾಗಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ನ್ಯೂಸ್ನಿಂದ ಮಾಹಿತಿ ಪಡೆಯಲಾಗಿದೆ.
ಫೂಟ್ಬಾಲ್ ಕ್ರೀಡೆಯ ಅಭಿಮಾನಿಯಾಗಿದ್ದು, ಯಾವಾಗಲೂ ಫೂಟ್ಬಾಲ್ ಆಟವನ್ನು ಆಡುತ್ತಿದ್ದೆ. ತಮ್ಮ ತಂಡವನ್ನೇ ರಚಿಸಿ ಆ ತಂಡದೊಡನೆ ಫೂಟ್ಬಾಲ್ ಆಟದಲ್ಲಿ ಸ್ಪರ್ಧಿಸತ್ತಿದ್ದ ಸಂತೋಷದ ದಿನಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಪ್ಯೂಂಟೆ ಕ್ಯಾಸ್ಟ್ರೋ ಕ್ಲಬ್ ಕೂಡಾ ಪ್ರಾರಂಭಿಸಿರುವ ಕುರಿತಾಗಿ ಹೇಳಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಪ್ಯೂಂಟೆ ಕ್ಯಾಸ್ಟ್ರೋದಲ್ಲಿ ಕ್ಲಬ್ನ ಹಿರಿಯ ಸದಸ್ಯ ಎಂದು ಗೌರವಿಸಲಾಗಿದೆ. ಸ್ಯಾಟರ್ನಿನೊ ಮತ್ತು ಪತ್ನಿ ಆ್ಯಂಟೋನಿನಾ ದಂಪತಿಗೆ ಏಳು ಜನ ಹೆಣ್ಣು ಮಕ್ಕಳು ಮತ್ತು ಓರ್ವ ಮಗನಿದ್ದಾನೆ. 14 ಮೊಮ್ಮಕ್ಕಳು ಜತೆಗೆ ಒಟ್ಟು 22 ಸದಸ್ಯರಿಂದ ತುಂಬಿದ ದೊಡ್ಡ ಕುಟುಂಬದ ಹಿರಿಯ ವ್ಯಕ್ತಿಯಾಗಿ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ:
Viral News: ಲೇಹ್ನಿಂದ ಮನಾಲಿಗೆ ಸೊಲೊ ಸೈಕ್ಲಿಂಗ್ ಮಾಡಿದ ಭಾರತೀಯ ಸೇನಾಧಿಕಾರಿ; ಗಿನ್ನಿಸ್ ದಾಖಲೆ
Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು
Published On - 12:34 pm, Mon, 4 October 21