
ಗುಜರಾತ್, ಆಗಸ್ಟ್ 07: ರೀಲ್ಸ್ ರೀಲ್ಸ್ ರೀಲ್ಸ್… ಎಲ್ಲಿ ನೋಡಿದ್ರೂ ರೀಲ್ಸ್ (reels) ವಿಡಿಯೋಗಳದ್ದೇ ಹವಾ. ಈ ಯುವಕರು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ರೀಲ್ಸ್ ಮಾಡಿ ಫೇಮಸ್ ಆಗುವ ಭರದಲ್ಲಿ ಹುಚ್ಚು ಸಾಹಸಕ್ಕೆ ಕೈ ಹಾಕುತ್ತಾರೆ. ಈಗಾಗಲೇ ಸಾರ್ವಜನಿಕರಿಗೆ ತೊಂದರೆ ಕೊಡುವ ಇಲ್ಲವಾದ್ರೆ ಪ್ರಾಣಕ್ಕೆ ಅಪಾಯ ತಂದೊಡ್ಡುವ ರೀಲ್ಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದವರೇ ಹೆಚ್ಚು. ಇಲ್ಲೊಬ್ಬ ಬೇಟೆಯನ್ನು ತಿನ್ನುತ್ತಿದ್ದ ಸಿಂಹದ ಹತ್ತಿರ ಹೋಗಿ ವಿಡಿಯೋ ಮಾಡಲು ಹೋಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ಘಟನೆಯೂ ಗುಜರಾತಿನ ಭಾವನಗರದಲ್ಲಿ (Bhavnagar of Gujarat) ನಡೆದಿದೆ ಎನ್ನಲಾಗಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಯುವಕನ ರೀಲ್ಸ್ ಹುಚ್ಚಾಟ ನೋಡಿ
@TheSiasatDaily ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಸಿಂಹವೊಂದು ತಾನು ಬೇಟೆಯಾಡಿದ ಪ್ರಾಣಿಯನ್ನು ತಿನ್ನುವುದರಲ್ಲಿ ಬ್ಯುಸಿಯಾಗಿದೆ. ಈ ವೇಳೆಯಲ್ಲಿ ಯುವಕನೊಬ್ಬನು ಸಿಂಹದ ಹತ್ತಿರ ಮೊಬೈಲ್ ಹಿಡಿದುಕೊಂಡು ವಿಡಿಯೋ ಹೋಗುತ್ತಿರುವುದನ್ನು ನೋಡಬಹುದು. ತನ್ನ ಹತ್ತಿರ ಬಂದ ಯುವಕನನ್ನು ನೋಡುತ್ತಿದ್ದಂತೆ ಸಿಂಹವು ಒಂದೊಂದೇ ಹೆಜ್ಜೆಯನ್ನು ಮುಂದಕ್ಕೆ ಹಾಕುತ್ತಾ ಈತನ ಕಡೆಗೆ ಓಡೋಡಿ ಬರುತ್ತಿದೆ. ಈ ವೇಳೆಯಲ್ಲಿ ಅಲ್ಲೇ ಇದ್ದ ಜನರು ಈತನಿಗೆ ಹಿಂದಕ್ಕೆ ಹೋಗುವಂತೆ ಎಚ್ಚರಿಕೆ ನೀಡುತ್ತಿರುವುದನ್ನು ನೋಡಬಹುದು.
A man from Gujarat’s Bhavnagar district has been arrested after a video showed him dangerously close to a lion while it fed on its prey. The incident occurred in the Sim area between Bambhor and Talli villages in Talaja.
Identified as Gautam, the man was seen filming the lion at… pic.twitter.com/AtClI5N2OJ
— The Siasat Daily (@TheSiasatDaily) August 6, 2025
ಆದರೆ ಈ ಯುವಕನು ಹಿಂದಕ್ಕೆ ಸರಿಯುತ್ತಿದ್ದರೂ ವಿಡಿಯೋ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ವಿಡಿಯೋ ಮಾಡುತ್ತಲೇ ಹಿಂದಕ್ಕೆ ಸರಿಯುತ್ತಿರುವುದನ್ನು ಕಾಣಬಹುದು. ಅದೃಷ್ಟವಶಾತ್ ಈ ಯುವಕನು ಸಿಂಹಕ್ಕೆ ಆಹಾರವಾಗದೇ ಪ್ರಾಣಾಪಾಯದಿಂದ ಪಾರಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಯುವಕನನ್ನು ಗೌತಮ್ ಎಂದು ಗುರುತಿಸಲಾಗಿದೆ. ಈ ಯುವಕ ಈ ರೀತಿ ಹುಚ್ಚಾಟ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Video: ರೆಸ್ಟೋರೆಂಟ್‌ನ ವೆಜ್ ಬಿರಿಯಾನಿಯಲ್ಲಿ ಪತ್ತೆಯಾಯ್ತು ಮೂಳೆ, ಇದರ ಅಸಲಿ ವಿಚಾರ ಬೇರೇನೇ ಇದೇ ನೋಡಿ
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಆಗಸ್ಟ್ 6 ರಂದು ಶೇರ್ ಮಾಡಲಾದ ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಇಂತಹ ಹುಚ್ಚು ಸಾಹಸ ಮಾಡಿ ನೀವು ಪಡೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, ಈ ರೀತಿ ಹುಚ್ಚಾಟ ಆಡುವ ಯುವಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಯುವಕರು ರೀಲ್ಸ್ ಮಾಡುವ ಭರದಲ್ಲಿ ಅತಿರೇಕವಾಗಿ ಆಡುತ್ತಿದ್ದಾರೆ. ಈ ಯುವಕನ ಆಯಸ್ಸು ಗಟ್ಟಿಯಿತ್ತು ಕಾಣಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ