ಬ್ರೆಜಿಲ್ನ 21 ವರ್ಷದ ಮೇಟಿಯುಸ್ ಫಾಸಿಯೊ ಎಂಬಾತ ಕಳೆದ ವರ್ಷದ ಡಿಸೆಂಬರ್ 31ರಂದು ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದ. ಪಾರ್ಟಿಯ ನಡುವೆ ಗಲಾಟೆ ಪ್ರಾರಂಭವಾಗಿದ್ದು, ಈತನ ತಲೆಯಿಂದ ರಕ್ತಸ್ರಾವವಾಗಲು ಪ್ರಾರಂಭವಾಗಿದೆ. ತಲೆಗೆ ಕಲ್ಲು ತಾಗಿದೆ ಎಂದು ಭಾವಿಸಿದ್ದ, ಈತನಿಗೆ ನಾಲ್ಕು ದಿನಗಳ ನಂತರ ತಲೆಯೊಳಗೆ ಬುಲೆಟ್ ಇರುವುದು ತಿಳಿದಿದೆ. ಡಿ.31ರಂದು ಚಿಕ್ಕ ಗಾಯಕ್ಕೆ ಚಿಕಿತ್ಸೆ ಪಡೆದಿದ್ದು, ಆರಾಮವಾಗಿದ್ದ ಈತನಿಗೆ ಜನವರಿ 4 ಆರೋಗ್ಯ ಸಮಸ್ಯೆ ಪ್ರಾರಂಭವಾಗಿದೆ.
ನಿದ್ದೆಯಿಂದ ಎದ್ದ ಮೇಟಿಯುಸ್ಗೆ ಎಡಗೈ ಎತ್ತಲು ಸಾಧ್ಯವಾಗದಂತಹ ಬಲಹೀನತೆಯ ಸಮಸ್ಯೆ ಪ್ರಾರಂಭವಾಗಿದ್ದು, ಆತಂಕಕ್ಕೊಳಗಾದ ಈತ ಬಟ್ಟೆ ಧರಿಸಿ ನೇರವಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋಗಿದ್ದಾನೆ.ಬಳಿಕ ಅಲ್ಲಿ ಅವರು ನಾಲ್ಕು ದಿನಗಳ ಹಿಂದೆ ತಲೆಗೆ ಕಲ್ಲು ತಾಗಿರುವ ಬಗ್ಗೆ ವೈದ್ಯರಿಗೆ ತಿಳಿಸಿದ್ದಾನೆ.ಆದರೆ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದಾಗ ತಲೆಗೆ ಹೊಡೆದಿದ್ದು ಕಲ್ಲು ಅಲ್ಲ ಗುಂಡು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ‘ಶ್ರೀಮಂತ ಹುಡುಗರನ್ನು ಸೆಳೆಯಲು ಯುವತಿಯರೇ ಈ ಸರ್ಜರಿ ಮಾಡಿಸಿ’; ಕಂಪನಿಗೆ ಕಂಟಕವಾದ ಈ ಜಾಹೀರಾತು
ವರದಿಗಳ ಪ್ರಕಾರ, ವೈದ್ಯರು ಮೆದುಳಿನಲ್ಲಿ ಸಿಲುಕಿರುವ 9 ಎಂಎಂ ಬುಲೆಟ್ ಅನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದು, ನಾಲ್ಕು ದಿನಗಳ ಬುಲೆಟ್ ಆತನ ತಲೆಯೊಳಗೆ ಇದ್ದಿದ್ದು ವೈದ್ಯರನ್ನೇ ಅಚ್ಚರಿಗೊಳಿಸಿದೆ. ಆದರೆ ಅದೃಷ್ಟವಶಾತ್ ಆಪರೇಷನ್ ಯಶಸ್ವಿಯಾಗಿದ್ದು ಮಟಿಯಾಸ್ ಪ್ರಾಣವನ್ನು ಉಳಿಸಲಾಗಿದೆ. ಸದ್ಯ ಈತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ