Viral Story: ಗುವಾಹಾಟಿ ಅಧಿಕಾರಿಯ ವಿಚಿತ್ರ ಸಹಿ ವೈರಲ್​; ಮುಳ್ಳು ಹಂದಿಗೆ ಹೋಲಿಸಿದ ನೆಟ್ಟಿಗರು

ಗುವಾಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಯ ಸಹಿ ಈಗ ವೈರಲ್​ ಆಗಿದೆ. ಇದು ಬರಹದಂತೆ ಕಾಣುತ್ತದೆ. ಸಹಿಯು ಹಲವಾರು ಲಂಬ ಮತ್ತು ಓರೆಯಾದ ಗೆರೆಗಳನ್ನು ಹೊಂದಿದೆ.

Viral Story:  ಗುವಾಹಾಟಿ ಅಧಿಕಾರಿಯ ವಿಚಿತ್ರ ಸಹಿ ವೈರಲ್​; ಮುಳ್ಳು ಹಂದಿಗೆ ಹೋಲಿಸಿದ ನೆಟ್ಟಿಗರು
ವೈರಲ್​ ಆದ ಸಹಿ
Edited By:

Updated on: Mar 23, 2022 | 3:20 PM

ಸಾಮಾನ್ಯವಾಗಿ ಇಂಗ್ಲೀಷ್​ ಪದಗಳನ್ನು ಬಳಸಿ ಪತ್ರ, ದಾಖಲೆಗಳಿಗೆ ಸಹಿ (Signature) ಮಾಡಲಾಗುತ್ತದೆ.  ಸಹಿ ಎಂದರೆ ಹೆಸರಿನ ಶಾರ್ಟ್​ ಕಟ್​ಒಬ್ಬರ ಸಹಿ ಇನ್ನೊಬ್ಬರಿಗೆ ಕಷ್ಟ. ಹಾಗೊಂದು ವೇಳೆ ನಕಲು ಮಾಡಿದರೂ ಕಾನೂನಾತ್ಮಕವಾಗಿ ಅದು ಅಪರಾಧ. ಹೀಗಿದ್ದಾಗ ಸಹಿಯನ್ನೇ ವಿಚಿತ್ರವಾಗಿ ಹಾಕವುದನ್ನು ಅಭ್ಯಾಸಮಾಡಿಕೊಂಡರೆ ರಗಳೆ ಇರವುದಿಲ್ಲ ಎನ್ನುವುದು ಹಲವರ ಮಾತು. ಅರೇ ಇದೇನಿದು ಸಹಿ ವಿಚಾರಲದಲ್ಲೇನಿದೆ ಎನ್ನುತ್ತೀರಾ? ಸಾಮಾಜಿಕ ಜಾಲತಾಣದಲ್ಲಿ ಒಂದು ಸಹಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಅದನ್ನು ನೊಡಿದವರೇ ದಂಗಾಗಿದ್ದಾರೆ. ಹೌದು, ಮುಳ್ಳು ಹಂದಿಯ ಬೆನ್ನಿನ ಮೇಲೆ ಇರುವ ಮುಳ್ಳಿನಂತೆ ಗೆರೆಗಳನ್ನು ಎಳೆದು ವ್ಯಕ್ತಿಯೊಬ್ಬ ಸಹಿ ಮಾಡಿದ್ದು ಸಹಿಯ ಫೋಟೋ ಈಗ ಸಖತ್​ ವೈರಲ್​ ಆಗಿದೆ.

ಗುವಾಹಾಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಯ ಸಹಿ ಈಗ ವೈರಲ್​ ಆಗಿದೆ. ಇದು ಬರಹದಂತೆ ಕಾಣುತ್ತದೆ. ಸಹಿಯು ಹಲವಾರು ಲಂಬ ಮತ್ತು ಓರೆಯಾದ ಗೆರೆಗಳನ್ನು ಹೊಂದಿದೆ ಮತ್ತು ಒಂದೇ ಒಂದು ಅಕ್ಷರವೂ ಗೋಚರಿಸುವುದಿಲ್ಲ. ವೈರಲ್ ಚಿತ್ರದಲ್ಲಿ ಕಂಡುಬರುವಂತೆ, ಮಾರ್ಚ್ 4, 2022 ರಂದು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ರಿಜಿಸ್ಟ್ರಾರ್ ಅವರ ಸೀಲ್‌ನ ಮೇಲೆ ಸಹಿ ಕಂಡುಬರುತ್ತದೆ. ಟ್ವಿಟರ್ ಬಳಕೆದಾರರು ರಮೇಶ್ ಅವರು ವಿಶಿಷ್ಟವಾದ ಸಹಿಯ ಚಿತ್ರವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದು, ನಾನು ಅನೇಕ ಸಹಿಗಳನ್ನು ನೋಡಿದ್ದೇನೆ ಆದರೆ ಇದು ಅತ್ಯುತ್ತಮವಾಗಿದೆ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ಸದ್ಯ ಬಳಕೆದಾರರು ಈ ಸಹಿಯನ್ನು ಮುಳ್ಳುಹಂದಿಗೆ ಹೋಲಿಸಿದ್ದಾರೆ. ವೈರಲ್​ ಆದ ಸಹಿಯ ಫೋಟೋ  11 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು ಸಾವಿರಕ್ಕೂ ಹೆಚ್ಚು ಮಂದಿ ಶೇರ್​ ಮಾಡಿದ್ದಾರೆ.  ಸಹಿಯನ್ನು ನೋಡಿ ಬಳಕೆದಾರರೊಬ್ಬರು ಬ್ಯಾಂಕ್​ನಲ್ಲಿ ಸಹಿಯನ್ನು ಹೇಗೆ ಪರಿಶೀಲನೆ ಮಾಡಲಾಗುತ್ತದೆ. ಅಷ್ಟಕ್ಕೂ ಪ್ರತೀ ಬಾರಿ ಇದೇ ರೀತಿ ಗೆರೆಗಳನ್ನು ಎಳೆದು ಸಹಿ ಹಾಕಲು ಹೇಗೆ ಸಾಧ್ಯ? ಎಂದಿದ್ದಾರೆ.

ಇದನ್ನೂ ಓದಿ:

Viral Video: ತರಗತಿಯಲ್ಲಿ ಪಾಠ ಮಾಡುವ ವೇಳೆ ಟೀಚರ್​ ಚಿತ್ರವನ್ನೇ ಬಿಡಿಸಿದ ವಿದ್ಯಾರ್ಥಿನಿ; ಆಮೇಲೆ ಆಕೆ ಮಾಡಿದ್ದೇನು ಗೊತ್ತಾ?

Published On - 3:19 pm, Wed, 23 March 22