Video: ಕೃಷಿ ಕೆಲಸದಲ್ಲೇ ಈ ಜನರಿಗೆ ಖುಷಿ; ಇದು ಹಳ್ಳಿ ಬದುಕಿನ ಸುಂದರ ದೃಶ್ಯಕಾವ್ಯ

ಹಳ್ಳಿ ಯುವಕ ಯುವತಿಯರು ಆಧುನಿಕತೆಗೆ ತೆರೆದುಕೊಳ್ಳುತ್ತಾ ಓದು ಮುಗಿಯುತ್ತಿದ್ದಂತೆ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಕೃಷಿ ಮಾಡುವವರೇ ಇಲ್ಲದಂತಾಗಿದೆ. ಹೀಗಿರುವಾಗ ಹಳ್ಳಿ ಬದುಕು ಸುಂದರ, ರೈತಾಪಿ ವರ್ಗದ ಕಾಯಕವನ್ನು ತೆರೆದಿಟ್ಟಿದೆ ಈ ವಿಡಿಯೋ. ಹಳ್ಳಿಯ ಜನರು ಸೇರಿ ಕೃಷಿ ಕೆಲಸದಲ್ಲಿ ಖುಷಿ ಕಾಣುತ್ತಿದ್ದು, ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.

Video: ಕೃಷಿ ಕೆಲಸದಲ್ಲೇ ಈ ಜನರಿಗೆ ಖುಷಿ; ಇದು ಹಳ್ಳಿ ಬದುಕಿನ ಸುಂದರ ದೃಶ್ಯಕಾವ್ಯ
ಕೃಷಿ ಕಾಯಕ
Image Credit source: Instagram

Updated on: Nov 09, 2025 | 3:38 PM

ಹಳ್ಳಿ (Village) ಬದುಕೇ ಸುಂದರ. ಸರಳತೆ, ಪ್ರಕೃತಿಯೊಂದಿಗೆ ನಿಕಟತೆ, ಮತ್ತು ಬಲವಾದ ಸಮುದಾಯದ ಸಂಬಂಧಗಳನ್ನು ಒಳಗೊಂಡಿರುತ್ತದೆ. ಊರ ಮಂದಿ ಜೊತೆ ಸೇರಿ ಕೃಷಿ (agriculture) ಕಾಯಕದಲ್ಲಿ ತೊಡಗುವ ರೀತಿಯೇ ಚಂದ. ಆದರೆ ಇಂದಿನ ಯುವಜನರಿಗೆ ಕೃಷಿಯ ನಂಟು ಕಡಿಮೆಯೇ. ಬೀಜ ಬಿತ್ತಿ ಪೈರು ಬಂದು, ಕಟಾವು ಸೇರಿದಂತೆ ತೆನೆಯಿಂದ ಭತ್ತವನ್ನು ಬೇರ್ಪಡಿಸುವವರೆಗೂ ಪುರುಸೊತ್ತಿಲ್ಲದ ಕಾಯಕ ಹಳ್ಳಿ ಜನರದ್ದು. ಇದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹೌದು, ಕಟಾವು ಮಾಡಿದ ಪೈರನ್ನು ಗದ್ದೆಯಿಂದ ಮನೆಯಂಗಳಕ್ಕೆ ತಂದು ತೆನೆಯಿಂದ ಭತ್ತ ಬೇರ್ಪಡಿಸುತ್ತಾ ತಮ್ಮ ಕಾಯಕವನ್ನು ಆನಂದಿಸುತ್ತಿರುವ ಹಳ್ಳಿ ಜನರ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಬಳಕೆದಾರರು ಹಳ್ಳಿಯ ಬದುಕು ಕಣ್ಣ ಮುಂದೆ ಹಾದು ಹೋಯಿತು ಎಂದಿದ್ದಾರೆ.

ಇದು ಹಳ್ಳಿ ಬದುಕಿನ ಸುಂದರ ಚಿತ್ರಣ

ಜೆಬಿಬಡಕೆರೆ (jbbadakere official kundapura) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕೃಷಿ ಕಾಯಕದೊಂದಿಗೆ ಬೆಸೆದ ಹಳ್ಳಿಯ ಜನರ ಸ್ಪಷ್ಟ ಚಿತ್ರಣ ಇಲ್ಲಿದೆ. ಈ ವಿಡಿಯೋಗೆ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಕೆಂಚನೂರು ಸುಬ್ಬಣ್ಣ ಶೆಟ್ರು ಮನೆಯಲ್ಲಿ ಕಂಡು ಬಂದ ಸುಂದರ ದೃಶ್ಯ. ಸಂಸ್ಕೃತಿ ಸಂಪ್ರದಾಯ,ಆಚಾರ ವಿಚಾರ ಯಾವತ್ತೂ ಮರೆಯಬಾರದು. ಊರ್ಬದಿ ಸೊಬಗು ಎಂದು ಶೀರ್ಷಿಕೆ ನೀಡಲಾಗಿದೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋದಲ್ಲಿ ಹಳ್ಳಿ ಜನರು ಕೃಷಿ ಕೆಲಸದಲ್ಲಿ ನಿರತರಾಗಿರುವುದನ್ನು ಕಾಣಬಹುದು. ಕಟಾವು ಮಾಡಿದ ಭತ್ತದ ಪೈರನ್ನು ಬೇರ್ಪಡಿಸುತ್ತಿರುವುದನ್ನು ಕಾಣಬಹುದು. ಕೆಲವರು ಪೈರಿನಿಂದ ಭತ್ತವನ್ನು ಬೇರ್ಪಡಿಸುವ ಕೆಲಸದಲ್ಲಿ ಮಗ್ನನಾಗಿದ್ದರೆ, ಒಂದೆರಡು ಜನ ಮನೆಯ ಅಂಗಳದಲ್ಲಿ ಹುಲ್ಲಿನ ಮೂಟೆ ಮಾಡುತ್ತಿರುವುದನ್ನು ನೋಡಬಹುದು. ಕೃಷಿ ಕಾಯಕದ ಚಿತ್ರಣವು ಈ ವಿಡಿಯೋದಲ್ಲಿದೆ.

ಇದನ್ನೂ ಓದಿ:ನೋಡೋರಿಗೆ ಮನೋರಂಜನೆ; ಇದು ಸೈಕಲ್ ಸರ್ಕಸ್ ನಂಬಿಕೊಂಡ ಕುಟುಂಬದ ಹೋರಾಟದ ಬದುಕು

ಈ ವಿಡಿಯೋ ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಾನು ಇದನ್ನೆಲ್ಲಾ ಕಣ್ಣಾರೆ ನೋಡಿ ಬೆಳೆದದ್ದು, ಪುಣ್ಯ ಮಾಡಿದ್ದೀನಿ ಎಂದಿದ್ದಾರೆ. ಇನ್ನೊಬ್ಬರು ನಾವು ಚಿಕ್ಕವರು ಇದ್ದಾಗ ಮನೆಯಲ್ಲಿ ಈ ತರಹನೇ ಅಕ್ಕಿ ತೆನೆ ಬೇರೆ ಮಾಡುವ ವಿಧಾನ ಇತ್ತು. ಆದರೆ ಈಗ ತುಂಬಾ ಕಮ್ಮಿ ನೋಡೋದಕ್ಕೆ ಸಿಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಪ್ರತಿ ವರ್ಷದ ನಮ್ಮ ಕೆಲಸ, ಇದೊಂದು ಸುಗ್ಗಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 3:34 pm, Sun, 9 November 25