Viral Video : ಹೇಳಿಕೇಳಿ ಮಗು. ನೆಟ್ಟಗೆ ನಿಂತ್ಕೋಳೋಕೂ ಬರಲ್ಲ. ಅದಕ್ಕೇನು ತಿಳಿಯಬೇಕು, ಬಿಯರ್ ಕ್ಯಾನಿಗಾದರೂ ತಿಳಿಯಬಾರದಾ? ತಾನು ಯಾರ ಕೈಯಲ್ಲಿದ್ದೀನಿ ಹೇಗಿರಬೇಕು ಅಂತ? ಈಗ ವಿಡಿಯೋ ನೋಡಿದ ನಿಮಗೋ ಇದೊಂದು ತಮಾಷೆ. ಮತ್ತೆ ಮತ್ತೆ ನೋಡ್ತಾ ಇರೋಬರೋವ್ರಿಗೆಲ್ಲ ಹಂಚತಾ ವೈರಲ್ ಮಾಡಿಡ್ತಿದೀರಿ. ಮತ್ತೆ ಮತ್ತೆ ನೋಡೋಹಾಗಿಲ್ಲ ಎಂದು ಪ್ರಮಾಣ ಮಾಡ್ತಾ ಇದೊಂದೇ ಸಲ ನೋಡಿಬಿಡಿ.
Rumbled ? #waitforit pic.twitter.com/Jb4rrlEUib
ಇದನ್ನೂ ಓದಿ— CCTV_IDIOTS (@cctv_idiots) January 1, 2023
ಮಗು ಎಂದರೆ ಮಗು ಅಷ್ಟೇ. 24 ತಾಸೂ ಅದರ ಮೇಲೊಂದು ಕಣ್ಣಿಟ್ಟಿರಲೇಬೇಕು. ನೀವು ನಿಮ್ಮ ನಿದ್ದೆ ನಿಮ್ಮ ಊಟ ನಿಮ್ಮ ವಿಶ್ರಾಂತಿ ನಿಮ್ಮ ಆಸೆ ನಿಮ್ಮ ಕನಸು ಎಲ್ಲವನ್ನೂ ಬದಿಗಿಟ್ಟು ಇಡೀ ನಿಮ್ಮನ್ನು ನೀವೇ ಅದಕ್ಕೇ ಧಾರೆ ಎರೆದು ನೋಡಿಕೊಳ್ಳುತ್ತಿರಬೇಕು. ಸ್ವಲ್ಪ ಎಚ್ಚರ ತಪ್ಪಿದಿರೋ ಅಷ್ಟೇ! ನೋಡಿದಿರಲ್ಲ ಈಗ ವಿಡಿಯೋದಲ್ಲಿ.
ಇದನ್ನೂ ಓದಿ : ‘ನಾಯಿಯಂತೆ ಕಾಣಲು ನಾನು ರೂ. 12 ಲಕ್ಷ ಖರ್ಚು ಮಾಡಿದ್ದೆ’ ವರ್ಷದ ಹಿಂದಿನ ರಹಸ್ಯ ಬಿಚ್ಚಿಟ್ಟ ವ್ಯಕ್ತಿ
ಎಲ್ಲವೂ ಕಣ್ಣು ಮಿಟುಕಿಸುವುದರೊಳಗೆ ನಡೆದುಬಿಡುತ್ತದೆ. ಒಂದು ಹೋಗಿ ಎರಡೇ ಆಗುವುದು. ಈಗ ನೋಡಿ ಈ ಮಗು ಬಿಯರ್ ಕುಡಿದದ್ದು ಒಂದು, ಇನ್ನು ಎದ್ದು ನಿಲ್ಲಲು ಹೋಗಿ ಹಿಂಬರಿಕೆಯಲ್ಲಿ ಬಿದ್ದಿದ್ದು ಇನ್ನೊಂದು. ಹಿಂದೇನಾದರೂ ಕಲ್ಲುಗಿಲ್ಲು ಇದ್ದಿದ್ದರೆ ಮೂರಾಗಿರೋದು. ಸದ್ಯ ಕ್ಯಾನ್ನಲ್ಲಿ ಬಿಯರ್ ಇಲ್ಲವೆಂದೇ ಎಂದುಕೊಳ್ಳೋಣ ನಮ್ಮ ಸಮಾಧಾನಕ್ಕೆ.
ಈ ವಿಡಿಯೋ ಮಾಡಿದವರು ಖಂಡಿತ ಮಗುವಿನ ಪೋಷಕರಾಗಿರಲಾರರು ಎನ್ನುತ್ತಿದೆ ನೆಟ್ಮಂದಿ. ನೀವೇನಂತೀರಿ?
ಅಣ್ಣೋವ್ರಂತೂ ಸರೀ ಪೋಸ್ ಕೊಟ್ಟಿದಾರೆ. ಹ್ಯಾಪ್ಪಿ ನ್ಯೂ ಇಯರ್!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:42 pm, Mon, 2 January 23