ನಾವೆಲ್ಲ ಡ್ರೋನ್ಗಳು ಹಾರುವುದನ್ನು ನೋಡಿದ್ದೇವೆ. ಈಗ ಅದು ಸಾಮಾನ್ಯವಾಗಿದೆ ಆದರಲ್ಲೇನೂ ವಿಶೇಷವಿಲ್ಲ. ಆದರೆ ಡ್ರೋನ್ ಒಂದರ ಮೇಲೆ ನಿಂತ ಒಬ್ಬ ವ್ಯಕ್ತಿ ಯಾವುದೋ ಒಂದು ನಗರದ ಬೀದಿಗಳ ಮೇಲೆ, ಇಲ್ಲವೇ ಒಂದು ದೊಡ್ಡ ಮೈದಾನದ ಮೇಲೆ ಹಾರಾಡುವುದನ್ನು ನೋಡಿದ್ದೀರಾ? ಇಲ್ಲ, ಇದು ಭಾರತದಲ್ಲಿ ಆಗಿಲ್ಲ ಬಿಡಿ, ಆದರೆ, ಅಮೇರಿಕದ ನ್ಯೂ ಯಾರ್ಕ್ ನಗರದ ಟೈಮ್ಸ್ ಚೌಕದ ಮೇಲೆ ಹಾಗೆ ಹಾರಾಡುವ ವ್ಯಕ್ತಿಯನ್ನು ಜನ ನೋಡಿದ್ದಾರೆ. ಅನೇಕರು ಆ ಅಪರೂಪ ಮತ್ತು ಅಭೂತಪೂರ್ವ ಸನ್ನಿವೇಶವನ್ನು ತಮ್ಮ ಮೊಬೈಲ್ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು ಅದೀಗ ವೈರಲ್ ಆಗಿಬಿಟ್ಟಿದೆ. ಹಾಗೆ ಹಾರಾಡಿದ ವ್ಯಕ್ತಿಯನ್ನು ಹಂಟರ್ ಕೊವಾಲ್ಡ್ ಹೆಸರಿನ ಯೂಟ್ಯೂಬರ್ ಎಂದು ಗುರುತಿಸಲಾಗಿದ್ದು ಅವನಿಗೆ 23,400 ಪಾಲೋಯರ್ಸ್ ಇದ್ದಾರೆ.
ಈ ವಿಡಿಯೋವನ್ನು ಮೊದಲ ಬಾರಿಗೆ ಮೊರ್ಗನ್ ನೆವಿನ್ಸ್ ಎನ್ನುವವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದರು. ಅದಾದ ಮೇಲೆ ರೆಕ್ಸ್ ಚಾಪ್ಮನ್ ಎನ್ನುವ ವ್ಯಕ್ತಿ ಟ್ವಿಟ್ಟರ್ ಪ್ಲಾಟ್ಫಾರ್ಮ್ನಲ್ಲಿ ಶೇರ್ ಮಾಡಿದರು. ತಮ್ಮ 10 ಸೆಕೆಂಡುಗಳ ವಿಡಿಯೊಗೆ ಅವರು, ‘ಓಹ್ ಏನಿಲ್ಲ- ಒಬ್ಬ ವ್ಯಕ್ತಿ ನ್ಯೂ ಯಾರ್ಕ್ ನಗರದ ಮೇಲೆ ಹಾರಾಡುತ್ತಿದ್ದಾನೆ’ ಎಂಬ ಶೀರ್ಷಿಕೆ ನೀಡಿದ್ದರು. ಅವರ ವಿಡಿಯೊನಲ್ಲಿ ಕೆಮೆರಾ ಸುತ್ತಿರುವ ಹೆಲ್ಮೆಟ್ ಒಂದನ್ನು ಧರಿಸಿದ ವ್ಯಕ್ತಿ ಭೂಮಿಗಿಂತ 10 ಅಡಿ ಮೇಲೆ ಹಾರಾಡುತ್ತಿರುವುದನ್ನು ನೋಡಬಹುದಾಗಿದೆ.
I’m back from the future to introduce generation 2 of the #SkySurfer Hoverboard Aircraft
I’ve designed 20+ minutes of flight & 45% MORE power
Thankful for everyone who helped make this possible, weeks of work & planning? Journey on YouTube. #nyc #timessquare #skysurfer pic.twitter.com/10rEz4kyZs— Hunter Kowald (@hunterkowald) June 23, 2021
ನಗರದ ಬೀದಿಗಳಲ್ಲಿರುವ ಜನ ಅವನನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ. ಸದರಿ ವಿಡಿಯೊವನ್ನು ಜೂನ್ 19 ರಂದು ಶೂಟ್ ಮಾಡಲಾಗಿದೆ. ಚಾಪ್ಮನ್ ಶೇರ್ ಮಾಡಿರುವ ವಿಡಿಯೋಗೆ 70 ಲಕ್ಷ ವ್ಯೂಗಳು ಬಂದಿವೆ.
ಇನ್ಸೈಡ್ ಹೆಸರಿನ ಪತ್ರಿಕೆಯೊಂದರ ಜತೆ ಮಾತಾಡಿರುವ ಹಂಟರ್ ಕೊವಾಲ್ಡ್, ಹಾಗೆ ಹಾರುವುದನ್ನು ಸಾಧ್ಯವಾಗಿಸಲು ತನಗೆ ಹಲವಾರು ವರ್ಷ ಬೇಕಾದವು ಎಂದು ಹೇಳಿದ್ದಾನೆ. ‘ಉತ್ಕೃಷ್ಟ ಮಟ್ಟದ ಇಂಜಿನೀಯರಿಂಗ್ ತಂತ್ರಜ್ಞಾನದ ಮೂಲಕ ಈ ಉಪಕರಣವನ್ನು ತಯಾರಿಸಲಾಗಿದೆ. ಅದನ್ನು ಸೂಕ್ತ ಮತ್ತು ಸುರಕ್ಷಿತವಾಗಿ ಹಾರಿಸಲು ನಾನು ಹಲವಾರು ವರ್ಷಗಳ ಕಾಲ ಪ್ರಯತ್ನಪಟ್ಟಿದ್ದೇನೆ. ಡ್ರೋನ್ ತಯಾರಿಸುವಾಗ ಅದರ ಸುರಕ್ಷತೆಗೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಒಂದು ಪಕ್ಷ ಅದರ ಎರಡು ಮೋಟಾರ್ಗಳು ವಿಫಲಗೊಂಡರೂ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಬಲ್ಲೆ, ಎಂದು ಕೊವಾಲ್ಡ್ ಹೇಳಿದ್ದಾನೆ. ತನ್ನ ಸಾಹಸದ ವಿಡಿಯೊಗಳನ್ನು ಕೊವಾಲ್ಡ್ ಆಗಾಗ ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡುತ್ತಿರುತ್ತಾನೆ.
Spider-Man
3 May 2002 (USA) pic.twitter.com/OT6e6n3tnM
— Blockbuster Plus (@BlockbusterPlus) June 21, 2021
ಈ ಸ್ಟಂಟ್ಗೆ ಕೈ ಹಾಕುವ ಮೊದಲು ಅಗತ್ಯವಿದ್ದ ಸಕಲ ಅನುಮತಿಗಳನ್ನು ಪಡೆದುಕೊಳ್ಳಲಾಯಿತು ಎಂದು ಕೊವಾಲ್ಡ್ ಹೇಳಿದ್ದಾನೆ. ‘ಸಾಕಷ್ಟು ಮೊದಲೇ ಕೇಳಿ ಪಡೆದ ಅನುಮತಿ ನಮಗಿತ್ತು. ಈ ಸಾಹಸ ಸುರಕ್ಷಿತವಾಗಿ ನೇರವೇರಲಿ ಅಂತ ಎಲ್ಲರೂ ನಮಗೆ ಸಹಾಯ ಮಾಡಿದರು,’ ಎಂದು ಅವನು ಹೇಳಿದ್ದಾನೆ ಆದರೆ, ನ್ಯೂ ಯಾರ್ಕ್ ಪೊಲೀಸ್ ಇಲಾಖೆ (ಎನ್ ವೈ ಪಿ ಡಿ) ಸದರಿ ವಿಡಿಯೋವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದೆ.
@DarkVoltageBCA yooooo pic.twitter.com/UVTlgvT4Le
— Alex??⭐️⭐️ (@AlexChenevey) June 21, 2021
ನೆಟ್ಟಿಗರು ಕೊವಾಲ್ಡ್ ಸಾಹಸವನ್ನು ಸ್ಪೈಡರ್ಮ್ಯಾನ್ ಚಿತ್ರದಲ್ಲಿ ಗ್ರೀನ್ ಗೋಬ್ಲಿನ್ ಮಾಡಿದ ಸ್ಟಂಟ್ಗಳಿಗೆ ಹೋಲಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಮಾಹಿತಿ ಇಲ್ಲದವರಿಗೆ ಗ್ರೀನ್ ಗೋಬ್ಲಿನ್ ಆ ಚಿತ್ರದಲ್ಲಿ ಖಳನಾಯಕನಾಗಿದ್ದಾನೆ. ಚಿತ್ರದಲ್ಲಿ ವಿಲ್ಲೆಮ್ ಡಾಫೆಯ ಗ್ರೀನ್ ಗೋಬ್ಲಿನ್ ತನ್ನ ಹೋವರ್ಬೋರ್ಡ್ ಮೇಲೆ ನಗರದ ಮೇಲೆಲ್ಲ ಹಾರಾಡಿ ಸ್ಫೋಟಕಗಳನ್ನು ಡ್ರಾಪ್ ಮಾಡುವ ಸನ್ನಿವೇಶ ನೆಟ್ಟಿಗರಿಗೆ ನೆನಪಾಗುತ್ತಿದೆ.
ಇದನ್ನೂ ಓದಿ: Viral Video: ಈ ಡ್ರೋನ್ನಲ್ಲಿ ಮನುಷ್ಯರೂ ಕೂತು ಹಾರಬಹುದು! ವಿಡಿಯೋ ನೋಡಿ
ಇದನ್ನೂ ಓದಿ: Drones in Agriculture: ಭತ್ತದ ಕಣಜದಲ್ಲಿ ಕ್ರೀಮಿನಾಶಕ ಸಿಂಪಡಣೆಗಾಗಿ ಡ್ರೋನ್ಗೆ ಮೊರೆ ಹೋದ ರೈತರು