ನವದೆಹಲಿ: ವೈದ್ಯಕೀಯ ವರದಿಗಳ ಪ್ರಕಾರ ಅವಳು ಹೆಣ್ಣು ಅಲ್ಲ (Wife’s Not Female) ಎಂಬ ಕಾರಣಕ್ಕಾಗಿ ವಿಚ್ಛೇದನ (Divorce) ಕೋರಿ ಗಂಡ ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾನೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಅವರು ಕಳೆದ ವರ್ಷ ಜುಲೈ 29 ರ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿರುವ ಅರ್ಜಿಗೆ ಉತ್ತರವನ್ನು ಸಲ್ಲಿಸುವಂತೆ ಶುಕ್ರವಾರ ಮಹಿಳೆಗೆ ಸೂಚಿಸಿದ್ದಾರೆ. ಮಹಿಳೆಯ ವೈದ್ಯಕೀಯ ದಾಖಲೆಗಳು ಶಿಶ್ನ ಮತ್ತು ಅಪೂರ್ಣ ಹೈಮೆನ್ನ್ನು ಹೊಂದಿದೆ. ಆದ್ದರಿಂದ ಅವಳು ಹೆಣ್ಣು ಅಲ್ಲ. ಈ ಕುರಿತಾಗಿ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಆಕೆಗೆ ನೋಟಿಸ್ ಜಾರಿ ಮಾಡಿದೆ. ದಂಪತಿಗಳು 2016 ರಲ್ಲಿ ವಿವಾಹವಾಗಿದ್ದಾರೆ. ಆದರೆ ಅವರ ಪತ್ನಿ ತಮಗೆ ಋತುಚಕ್ರವಾಗಿದೆ ಎಂದು ಹೇಳಿಕೊಂಡು ಕೆಲವು ದಿನಗಳವರೆಗೆ ಮುಂದುಡಲಾಗಿದೆ ಎಂದು ವ್ಯಕ್ತಿಯ ಅರ್ಜಿಯಲ್ಲಿ ಹೇಳಲಾಗಿದೆ.
ಪುರುಷನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಲು ಪ್ರಯತ್ನಿಸಿದಾಗ, ಅವನು ಯೋನಿಯ ಬದಲಾಗಿ ಅವಳು ಮಗುವಿನಂತ ಸಣ್ಣ ಶಿಶ್ನವನ್ನು ಹೊಂದಿದ್ದಳು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿದಾರರು ತಮ್ಮ ಪತ್ನಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ದದ್ದು, ಆಕೆಗೆ ಇಂಪರ್‌ಫೊರೇಟ್ ಹೈಮೆನ್ ಎಂಬ ವೈದ್ಯಕೀಯ ಸಮಸ್ಯೆ ಇದೆ ಎಂಬುದು ನಿರ್ಣಯವಾಗಿತ್ತು. ಇಂಪರ್ಫೊರೇಟ್ ಹೈಮೆನ್ ಎನ್ನುವುದು ಕನ್ಯಾಪೊರೆಯು ಯೋನಿಯ ತೆರೆಯುವಿಕೆಯನ್ನು ಆವರಿಸುವ ಸ್ಥಿತಿಯಾಗಿದೆ. ಆಕೆಯ ಸ್ಥಿತಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲು ತನ್ನ ಹೆಂಡತಿಗೆ ಸಲಹೆ ನೀಡಲಾಯಿತು ಆದರೆ ಗರ್ಭಧಾರಣೆಯ ಸಾಧ್ಯತೆಗಳು ಅಸಾಧ್ಯವೆಂದು ವೈದ್ಯರು ಹೇಳಿದರು.
ಅರ್ಜಿದಾರರು ತಾನು ಮೋಸ ಹೋಗಿದ್ದೇನೆ ಎಂದು ಭಾವಿಸಿ ತನ್ನ ಮಾವನಿಗೆ ಕರೆ ಮಾಡಿ, ತನ್ನ ಮಗಳನ್ನು ವಾಪಸ್ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಅರ್ಜಿಯ ಪ್ರಕಾರ, ಮಹಿಳೆಯು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು ಮತ್ತು ನಂತರ ಆಕೆಯ ತಂದೆ ತನ್ನ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದರಿಂದ ಪತಿ ಮನೆಗೆ ಮರಳಿದಳು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:
ರಷ್ಯಾ ದಾಳಿಕೋರರ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಸುತ್ತಿರುವ ಉಕ್ರೇನ್: ಅಮೆರಿಕ ಕಂಪನಿಗಳಿಂದ ನೆರವು
Published On - 12:06 pm, Mon, 14 March 22