ರಷ್ಯಾ ದಾಳಿಕೋರರ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಸುತ್ತಿರುವ ಉಕ್ರೇನ್: ಅಮೆರಿಕ ಕಂಪನಿಗಳಿಂದ ನೆರವು

ಮುಖಲಕ್ಷಣಗಳ ಆಧಾರದ ಮೇಲೆ ವ್ಯಕ್ತಿಯ ಗುರುತು ಪತ್ತೆ ಮಾಡುವ ಶಕ್ತಿಶಾಲಿ ಸರ್ಚ್ ಎಂಜಿನ್ ಕ್ಲಿಯರ್​ವ್ಯೂ ತನ್ನ ತಂತ್ರಜ್ಞಾನವನ್ನು ಉಕ್ರೇನ್​ ಸರ್ಕಾರಕ್ಕೆ ಉಚಿತವಾಗಿ ಬಳಸಿಕೊಳ್ಳಲು ನೀಡಿದೆ.

ರಷ್ಯಾ ದಾಳಿಕೋರರ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಸುತ್ತಿರುವ ಉಕ್ರೇನ್: ಅಮೆರಿಕ ಕಂಪನಿಗಳಿಂದ ನೆರವು
ಮುಖ ಗುರುತಿಸುವ ತಂತ್ರಜ್ಞಾನವನ್ನು ಉಕ್ರೇನ್ ಬಳಸಿಕೊಳ್ಳುತ್ತಿದೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 14, 2022 | 11:54 AM

ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ರಷ್ಯಾ ಸೈನಿಕರು (Russia Ukraine Conflict) ಸಾಕಷ್ಟು ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಅವರ ಗುರುತು ಪತ್ತೆ ಮಾಡಲು ಉಕ್ರೇನ್ ರಕ್ಷಣಾ ಇಲಾಖೆಯು ಮುಖ ಗುರುತಿಸುವ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದೆ. ಅಮೆರಿಕದ ಸ್ಟಾರ್ಟ್​ಅಪ್ ಕ್ಲಿಯರ್​ವ್ಯೂ (Clearview) ಕಂಪನಿಯು ಈ ತಂತ್ರಜ್ಞಾನವನ್ನು ಉಕ್ರೇನ್​ಗೆ ಒದಗಿಸಿದೆ. ರಷ್ಯಾದ ದಾಳಿಕೋರರನ್ನು ಪತ್ತೆ ಮಾಡಲು ಮತ್ತು ಸುಳ್ಳುಸುದ್ದಿಗೆ ತಡೆಹಾಕುವ ಉದ್ದೇಶದಿಂದ ಈ ತಂತ್ರಜ್ಞಾನ ಬಳಕೆಗೆ ಉಕ್ರೇನ್ ಮುಂದಾಗಿದೆ. ಮುಖಲಕ್ಷಣಗಳ ಆಧಾರದ ಮೇಲೆ ವ್ಯಕ್ತಿಯ ಗುರುತು ಪತ್ತೆ ಮಾಡುವ ಶಕ್ತಿಶಾಲಿ ಸರ್ಚ್ ಎಂಜಿನ್ ಕ್ಲಿಯರ್​ವ್ಯೂ ತನ್ನ ತಂತ್ರಜ್ಞಾನವನ್ನು ಉಕ್ರೇನ್​ ಸರ್ಕಾರಕ್ಕೆ ಉಚಿತವಾಗಿ ಬಳಸಿಕೊಳ್ಳಲು ನೀಡಿದೆ. ಉಕ್ರೇನ್​ನ ಚೆಕ್​ಪೋಸ್ಟ್​ಗಳಲ್ಲಿ ಈ ತಂತ್ರಜ್ಞಾನ ಬಳಸಿಕೊಂಡು ಸಾಮಾನ್ಯ ನಾಗರಿಕರು ಮತ್ತು ರಷ್ಯಾ ಪರ ಇರುವ ಪ್ರತ್ಯೇಕತಾವಾದಿಗಳು ಹಾಗೂ ಸೈನಿಕರನ್ನು ಗುರುತಿಸಲು ಯತ್ನಿಸಲಾಗುತ್ತಿದೆ ಎಂದು ಅಮೆರಿಕದಲ್ಲಿರುವ ಕ್ಲಿಯರ್​ವ್ಯೂ ಕಂಪನಿಯ ಸಲಹೆಗಾರ ಲೀ ವೊಲೊಸ್ಕಿ ಹೇಳಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಹಾಲಿ ಅಧ್ಯಕ್ಷ ಜೋ ಬೈಡೆನ್ ಅವರ ಆಡಳಿತದಲ್ಲಿ ರಾಜತಾಂತ್ರಿಕ ಸಲಹೆಗಾರರಾಗಿ ಲಿ ವೊಲೊಸ್ಕಿ ಕೆಲಸ ಮಾಡಿದ್ದರು.

ರಷ್ಯಾ ಸೇನೆ ಉಕ್ರೇನ್​ ಮೇಲೆ ಆಕ್ರಮಣ ನಡೆಸಿದ ನಂತರದ ದಿನಗಳಲ್ಲಿ ಉಕ್ರೇನ್ ಸರ್ಕಾರಕ್ಕೆ ಕ್ಲಿಯರ್​ವ್ಯೂ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೋನ್ ಟೊನ್ ಪತ್ರ ಬರೆದಿದ್ದರು. ಅಗತ್ಯ ತಾಂತ್ರಿಕ ನೆರವು ಒದಗಿಸುವ ಭರವಸೆ ನೀಡಿದ್ದರು. ಈ ನೆರವನ್ನು ಉಕ್ರೇನ್​ಗೆ ಮಾತ್ರ ಒದಗಿಸಿದ್ದೇವೆ. ರಷ್ಯಾಕ್ಕೆ ಕೊಟ್ಟಿಲ್ಲ ಎಂದು ಕ್ಲಿಯರ್​ವ್ಯೂ ಹೇಳಿದೆ. ಈ ಕುರಿತು ಉಕ್ರೇನ್ ಆಡಳಿತವು ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ರಾಯಿಟರ್ಸ್ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಉಕ್ರೇನ್ ಸರ್ಕಾರದ ಡಿಜಿಟಲ್ ಆಡಳಿತ ವಿಭಾಗದ ವಕ್ತಾರರು, ‘ಕ್ಲಿಯರ್​ವ್ಯೂ ಸೇರಿದಂತೆ ಅಮೆರಿಕದ ಹಲವು ಕಂಪನಿಗಳು ಅಗತ್ಯ ನೆರವು ಒದಗಿಸುವುದಾಗಿ ಭರವಸೆ ನೀಡಿವೆ. ಇಂಟರ್ನೆಟ್​, ಸೈಬರ್ ಸೆಕ್ಯುರಿಟಿ ಮತ್ತಿತರರ ರೂಪದಲ್ಲಿ ನೆರವು ಹರಿದುಬರುತ್ತಿದೆ’ ಎಂದು ಹೇಳಿದ್ದಾರೆ.

ರಷ್ಯಾದ ಸಾಮಾಜಿಕ ಜಾಲತಾಣಗಳಿಂದ ಕಲೆಹಾಕಿರುವ ಸುಮಾರು 200 ಕೋಟಿ ಚಿತ್ರಗಳನ್ನು ಕ್ಲಿಯರ್ ವ್ಯೂ ಹಲವು ಹಂತಗಳಲ್ಲಿ ಪ್ರಕ್ರಿಯೆಗೆ ಒಳಪಡಿಸಿದೆ. ಸುಮಾರು 1000 ಕೋಟಿ ಚಿತ್ರಗಳನ್ನು ರಷ್ಯಾದ ಸಾಮಾಜಿಕ ಜಾಲತಾಣ VKontakte ಹೊಂದಿದೆ. ಈ ಕಂಪನಿಯ ಸಹಯೋಗದಲ್ಲಿ ಕ್ಲಿಯರ್​ವ್ಯೂ ಸಾಕಷ್ಟು ಚಿತ್ರಗಳನ್ನು ಪಡೆದುಕೊಂಡು ಪ್ರಕ್ರಿಯೆಗೆ ಒಳಪಡಿಸಿದೆ. ಶವಗಳನ್ನು ಪತ್ತೆಹಚ್ಚುವುದೇ ಇದೀಗ ಉಕ್ರೇನ್​ ಉಕ್ರೇನ್​ ಸರ್ಕಾರಕ್ಕೆ ದೊಡ್ಡಸವಾಲಾಗಿದೆ. ಕೈಬೆರಳು ಮುದ್ರೆಗಳು ಹಾಗೂ ಡಿಎನ್​ಎ ಮಾದರಿ ಸಂಗ್ರಹದಿಂದ ಶವಗಳನ್ನು ಪತ್ತೆಮಾಡಲು ಸಾಕಷ್ಟು ಸಮಯ ಹಿಡಿಯುವುದರಿಂದ ಕ್ಲಿಯರ್​ವ್ಯೂ ನೆರವು ಪಡೆಯಲು ಉಕ್ರೇನ್ ಮುಂದಾಗಿದೆ. ಮುಖಗಳು ಹರಿದು ಹೋಗಿದ್ದರೂ ಗುರುತು ಪತ್ತೆ ಮಾಡಲು ಈ ತಂತ್ರಜ್ಞಾನ ನೆರವಾಗುತ್ತದೆ.

ಯುದ್ಧದಿಂದಾಗಿ ಬೇರ್ಪಟ್ಟಿರುವ ಕುಟುಂಬಗಳನ್ನು ಒಗ್ಗೂಡಿಸಲೂ ಕ್ಲಿಯರ್​ವ್ಯೂ ನೆರವಾಗಲಿದೆ. ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದು, ರಷ್ಯಾ ಪರ ಪೋಸ್ಟ್​ಗಳನ್ನು ಹಾಕುತ್ತಿರುವವರನ್ನು ಗುರುತಿಸಿ, ಕ್ರಮ ಜರುಗಿಸಲು ಸರ್ಕಾರಕ್ಕೆ ಸಹಾಯ ಮಾಡಲಿದೆ. ಕ್ಲಿಯರ್​ವ್ಯೂ ತಂತ್ರಜ್ಞಾನವನ್ನು ನಿರ್ದಿಷ್ಟವಾಗಿ ಇಂಥ ಕಾರಣಕ್ಕೆ ಬಳಸುತ್ತಿದ್ದೇವೆ ಎಂದು ಉಕ್ರೇನ್ ರಕ್ಷಣಾ ಇಲಾಖೆ ಈವರೆಗೆ ಮಾಹಿತಿ ನೀಡಿಲ್ಲ. ಉಕ್ರೇನ್​ನ ಇತರ ಭಾಗಗಳಲ್ಲಿ ಹಾಗೂ ಇತರ ಇಲಾಖೆಗಳಲ್ಲಿಯೂ ಕ್ಲಿಯರ್​ವ್ಯೂ ತಂತ್ರಜ್ಞಾನ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ವೊಲೊಸ್ಕಿ ಹೇಳಿದ್ದಾರೆ.

ರಷ್ಯಾದಲ್ಲಿ ಜನಪ್ರಿಯವಾಗಿರುವ VKontakte ಸಾಮಾಜಿಕ ಜಾಲತಾಣದ ಚಿತ್ರಗಳು ಕ್ಲಿಯರ್​ವ್ಯೂಗೆ ಲಭ್ಯವಾಗಿರುವುದರಿಂದ ಇದರ ಮೂಲಕ ವ್ಯಕ್ತಿಗಳ ಹುಡುಕಾಟ ಹೆಚ್ಚು ಪರಿಣಾಮಕಾರಿ ಎನಿಸಿದೆ. ಈ ಕುರಿತು VKontakte ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಫೇಸ್​ಬುಕ್ ಮಾತ್ರ ತನ್ನ ಸರ್ವರ್​ಗಳಲ್ಲಿ ಸಂಗ್ರಹವಾಗಿರುವ ದತ್ತಾಂಶ ಸಂಗ್ರಹಿಸುವುದನ್ನು ಕ್ಲಿಯರ್​ವ್ಯೂ ನಿಲ್ಲಿಸಬೇಕು ಎಂದು ಆಗ್ರಹಿಸಿತ್ತು. ಮುಖ ಗುರುತಿಸುವ ತಂತ್ರಜ್ಞಾನಗಳು ಸರ್ಕಾರದ ಕೆಲಸ ಸುಲಭ ಮಾಡುತ್ತವೆಯಾದರೂ ಕೈಬೆರಳು ಮುದ್ರೆಯಷ್ಟು ಪರಿಣಾಮಕಾರಿಯಾಗಿ ವ್ಯಕ್ತಿಯನ್ನು ಪತ್ತೆಹಚ್ಚಲಾರದು. ತಪ್ಪಾಗಿ ಗುರುತು ಮಾಡಿದ ವ್ಯಕ್ತಿಯೊಬ್ಬರ ವಿರುದ್ಧ ದೌರ್ಜನ್ಯ ನಡೆಯುವ ಸಾಧ್ಯತೆಯೂ ಮಿಲಿಟರಿ ಕಾರ್ಯಾಚರಣೆ ಸಂದರ್ಭದಲ್ಲಿ ಹೆಚ್ಚಾಗಿ ಇರುತ್ತದೆ ಎಂದು ನಿಗಾವಣೆ ತಂತ್ರಜ್ಞಾನವನ್ನು ವಿಶ್ಲೇಷಿಸುವ ತಜ್ಞರಾದ ಆಲ್ಬರ್ಟ್ ಫಾಕ್ಸ್ ಕಾಹ್ನ್ ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್‌ನ ಪಶ್ಚಿಮ ಭಾಗಗಳಲ್ಲಿ ರಷ್ಯಾ ದಾಳಿ ನಂತರ ಭಾರತ ರಾಯಭಾರ ಕಚೇರಿ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರ

ಇದನ್ನೂ ಓದಿ: KSRTC: ಬಸ್ ಚಾಲನೆ ಮಾಡುವಾಗ ಚಾಲಕ ನಿದ್ರಿಸಿದರೂ ಅಪಘಾತವಾಗಲ್ಲ; ಕೃತಕ ಬುದ್ಧಿಮತ್ತೆ ಬಳಸಿ ಅಪಘಾತ ತಡೆಯಲಿದೆ ಕೆಎಸ್​ಆರ್​ಟಿಸಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು