ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ ಮತ್ತು ತಮ್ಮ ಫಾಲೋವರ್ಗಳ ಜೀವನಕ್ಕೆ ಸ್ಪೂರ್ತಿ ತುಂಬುವ ವಿಡಿಯೋಗಳನ್ನು, ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಆನಂದ್ ಮಹೀಂದ್ರಾ ಅವರು ಇತ್ತೀಚೆಗೆ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದಕ್ಕೆ ಕೆಲವು ನೆಟ್ಟಿಗರು ನೀವು ಅನಿವಾಸಿ ಭಾರತೀಯರಾ? ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಆನಂದ್ ಮಹೀಂದ್ರಾ ಅವರು ನೀಡಿದ ಉತ್ತರ ಇಂಟರ್ನೆಟ್ ಬಳಕೆದಾರರ ಗಮನಸೆಳೆಯುತ್ತಿದೆ.
ಜುಲೈ 4 ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆದ ಆಚರಣೆಗಳ ಚಿತ್ರಗಳನ್ನು ಒಳಗೊಂಡಿರುವ ವಿಡಿಯೋ, ಫೋಟೋಗಳನ್ನು ಆನಂದ್ ಮಹೀಂದ್ರಾ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. “ಮ್ಯಾನ್‌ಹ್ಯಾಟನ್ 4ನೇ ಜುಲೈ ಸ್ಕೈಲೈನ್” ಎಂದು ಪೋಸ್ಟ್ಗೆ ಶೀರ್ಷಿಕೆ ನೀಡಿದ್ದರು. ಮ್ಯಾನ್ಹ್ಯಾಟನ್ ಸುತ್ತಲೂ ನಡೆದ ಆಚರಣೆಗಳನ್ನು ತೋರಿಸುವ ವಿಡಿಯೋ, ಫೋಟೋ ಇದಾಗಿದೆ.
Manhattan 4th of July. 2022 Skyline erupts. (2/3) pic.twitter.com/rmHvUSZ3mz
— anand mahindra (@anandmahindra) July 5, 2022
ಅವರ ಒಂದು ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಬಳಕೆದಾರರು ಉದ್ಯಮಿಗೆ “ನೀವು ಅನಿವಾಸಿ ಭಾರತೀಯರಾ (NRI)?” ಎಂದು ಪ್ರಶ್ನಿಸಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಅನೇಕ ಬಳಕೆದಾರರು ಇಂತಹ ಪ್ರಶ್ನೆಗಳಿಗೆ ಗಮನ ಕೊಡಬೇಡಿ ಎಂದು ಮಹೀಂದ್ರಾ ಅವರ ಜೊತೆ ಮನವಿ ಮಾಡಿದ್ದಾರೆ. ಅದಾಗ್ಯೂ ಆನಂದ್ ಮಹೀಂದ್ರಾ ಅವರು ಬಳಕೆದಾರರ ಪ್ರಶ್ನೆಗೆ ಸಖತ್ ಆಗಿಯೇ ಉತ್ತರವನ್ನು ನೀಡಿದ್ದಾರೆ.
Just visiting family in New York. So am an HRI. Heart (always) resident in India….? https://t.co/ydzwTux9vr
— anand mahindra (@anandmahindra) July 5, 2022
ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿದ ಉದ್ಯಮಿ, ”ನ್ಯೂಯಾರ್ಕ್‌ನಲ್ಲಿರುವ ಕುಟುಂಬವನ್ನು ಭೇಟಿ ಮಾಡುತ್ತಿದ್ದೇನೆ. ಹಾಗಾಗಿ ನಾನು HRI. ಹೃದಯ (ಯಾವಾಗಲೂ) ಭಾರತದಲ್ಲೇ ನೆಲೆಸಿದೆ” ಎಂದು ಹೇಳಿದ್ದಾರೆ. ಈ ಟ್ವೀಟ್ ನೆಟ್ಟಿಗರ ಕಣ್ಣಿಗೆ ಬೀಳುತ್ತಿದ್ದಂತೆ ಬೆಂಬಲವಾಗಿ ಮಾತನಾಡಿದ್ದಾರೆ. ಬಳಕೆದಾರರೊಬ್ಬರು, “ಇದು ಒಳ್ಳೆಯದಾಗಿದೆ… ನಾನು ಎಚ್‌ಆರ್‌ಐ ಆಗಿದ್ದೇನೆ, ಇದನ್ನು ನಾಚಿಕೆಯಿಲ್ಲದೆ ಹೇಳುತ್ತೇನೆ” ಎಂದು ಪ್ರತಿಕ್ರಿಯಿಸಿದ್ದೇನೆ.
Published On - 11:49 am, Thu, 7 July 22