ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು 21 ಲಕ್ಷ ರೂ.ಗಳಿಸಿದ ವ್ಯಕ್ತಿ

ಚೀನಾದ ಶಾಂಘೈನಲ್ಲಿ ಹುವಾನ್ ಕಂಗ್ ಎಂಬ ವ್ಯಕ್ತಿ ರಜಾದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ನೀಡುವ ಮತ್ತು ಆರೈಕೆ ಮಾಡುವ ಮೂಲಕ 21 ಲಕ್ಷ ರೂಪಾಯಿ ಗಳಿಸಿದ್ದಾರೆ. ಸಾಕುಪ್ರಾಣಿ ಆರೈಕೆ ಈಗ ಲಾಭದಾಯಕ ಉದ್ಯಮವಾಗಿ ಬೆಳೆದಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಹುವಾನ್ ಪ್ರತಿದಿನ ಬೆಳಿಗ್ಗೆ 3 ಗಂಟೆಗೆ ಹೊರಟು ರಾತ್ರಿ 11 ರವರೆಗೆ ಕೆಲಸ ಮಾಡಿ, 55 ಮನೆಗಳಿಗೆ ಭೇಟಿ ನೀಡಿ ಬೆಕ್ಕುಗಳ ಆರೈಕೆ ಮಾಡುತ್ತಾರೆ. ಅವರ ತಂಡ 20 ದಿನಗಳಲ್ಲಿ ಸುಮಾರು 2,000 ಬೆಕ್ಕುಗಳಿಗೆ ಸೇವೆ ಸಲ್ಲಿಸಿದೆ.

ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು 21 ಲಕ್ಷ ರೂ.ಗಳಿಸಿದ ವ್ಯಕ್ತಿ
ಬೆಕ್ಕು
Image Credit source: purina

Updated on: Mar 04, 2026 | 12:21 PM

ಚೀನಾ, ಮಾರ್ಚ್​ 04: ಸಾಮಾನ್ಯವಾಗಿ ಬೆಕ್ಕು(Cat) ಅಥವಾ ನಾಯಿಯನ್ನು ಬಹುತೇಕ ಎಲ್ಲರ ಮನೆಯಲ್ಲಿ ಸಾಕುತ್ತಾರೆ. ತಾವೇ ಆಹಾರ ಕೊಟ್ಟು ಮನೆಯ ಮಕ್ಕಳಂತೆ ಅವುಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಶ್ರೀಮಂತರು ಅವುಗಳಿಗಾಗಿ ಸಹಾಯಕರನ್ನು ನೇಮಿಸಿಕೊಂಡಿರುತ್ತಾರೆ. ಚೀನಾ ವ್ಯಕ್ತಿಯೊಬ್ಬರು ರಜಾ ದಿನಗಳಲ್ಲಿ ಬೆಕ್ಕುಗಳಿಗೆ ಆಹಾರ ಕೊಟ್ಟು ಬರೋಬ್ಬರಿ 21 ಲಕ್ಷ ರೂ. ಗಳಿಸಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಬೆಕ್ಕುಗಳನ್ನು ನೋಡಿಕೊಳ್ಳುವ ಮತ್ತು ಆಹಾರ ನೀಡುವ ಕೆಲಸವು ಉದ್ಯಮವಾಗಿ ಬೆಳೆದಿದೆ. ಅದರಲ್ಲಿ ಸಿಗುವ ಲಾಭವು ಅಂತಹ ಸೇವೆಗಳಿಗೆ ಹೆಚ್ಚಿನ ಬೇಡಿಕೆಯನ್ನು ಎತ್ತಿ ತೋರಿಸಿದೆ. 1991 ರಲ್ಲಿ ಜನಿಸಿದ ಮತ್ತು ಶಾಂಘೈನಲ್ಲಿ ವಾಸಿಸುವ ಹುವಾನ್ ಕಾಂಗ್ ಸಾಕುಪ್ರಾಣಿ ಆರೈಕೆ ಉದ್ಯಮ ಮಾಡಿಕೊಂಡಿದ್ದು, ಒಂಬತ್ತು ವರ್ಷಗಳಿಂದ ಮನೆ-ಮನೆಗೆ ಹೋಗಿ ಬೆಕ್ಕುಗಳಿಗೆ ಆಹಾರ ಸೇವೆಗಳಲ್ಲಿ ಪರಿಣತಿ ಹೊಂದಿದ್ದಾರೆ.

ಹುವಾನ್ ಮತ್ತು ಇತರ ನಾಲ್ವರು ಶಾಂಘೈನಲ್ಲಿಯೇ ಇದ್ದರು, ರಜಾದಿನಗಳಲ್ಲಿ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಅವುಗಳ ಮಾಲೀಕರಿಗೆ ಸಾಧ್ಯವಾಗಲಿಲ್ಲ, ಹಬ್ಬದ ಮೊದಲು ಮತ್ತು ನಂತರ 20 ದಿನಗಳ ಅವಧಿಯಲ್ಲಿ, ಅವರ ತಂಡವು ಮನೆ ಮನೆಗೆ ಹೋಗಿ ಸುಮಾರು 2,000 ಬೆಕ್ಕುಗಳಿಗೆ ಆಹಾರ ನೀಡುವ ಆರ್ಡರ್‌ಗಳನ್ನು ಪೂರೈಸಿತು.ಅವುಗಳಲ್ಲಿ ಸುಮಾರು 1,000 ಆರ್ಡರ್‌ಗಳನ್ನು ಹುವಾನ್ ಸ್ವತಃ ನಿರ್ವಹಿಸಿದ್ದರು.

ಮತ್ತಷ್ಟು ಓದಿ: Viral Video: ಬೆಕ್ಕು ಎಂದುಕೊಂಡು ಚಿರತೆ ಮೇಲೆ ನಾಯಿಗಳ ದಾಳಿ!

ರಜಾದಿನಗಳಲ್ಲಿ, ಹುವಾನ್ ಪ್ರತಿದಿನ ಬೆಳಗ್ಗೆ 3 ಗಂಟೆಗೆ ಮನೆಯಿಂದ ಹೊರಟು ರಾತ್ರಿ 10 ಅಥವಾ 11 ಗಂಟೆಗೆ ಮನೆ ಸೇರುತ್ತಿದ್ದರು. ಈ ಸಮಯದಲ್ಲಿ, ಅವರು ಸರಾಸರಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಮಾತ್ರ ನಿದ್ರಿಸಿದ್ದಾರೆ. ಒಂದು ದಿನದಲ್ಲಿ 55 ಆರ್ಡರ್‌ಗಳನ್ನು ಪೂರ್ಣಗೊಳಿಸಿದ್ದರು. ಒಂದು ಮನೆಗೆ ಹೋದರೆ ಅಲ್ಲಿ 10-15 ನಿಮಿಷಗಳ ಕಾಲ ಅಲ್ಲಿ ಇರುತ್ತಾರೆ.

ಬೆಕ್ಕುಗಳು ಮಲಗಿರುವ ಬಾಕ್ಸ್​ ಅನ್ನು ಸ್ವಚ್ಛಗೊಳಿಸುವುದು, ಬೆಕ್ಕುಗಳಿಗೆ ಆಹಾರ ಮತ್ತು ನೀರು ಹಾಕಬೇಕು.ಅವುಗಳ ಆರೋಗ್ಯವನ್ನು ಪರಿಶೀಲಿಸಬೇಕು, ಕಿಟಕಿಗಳು ಮತ್ತು ವಿದ್ಯುತ್ ಉಪಕರಣಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಕಸವನ್ನು ತೆಗೆಯಬೇಕು. ಈ ವಿಶಿಷ್ಟ ಸೇವೆಗೆ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us