Viral Video: ಹೇರ್ ಸ್ಟೈಲ್ ಹೆಣ್ಮಕ್ಕಳಿಗೆ ಒಂದು ವರ, ಇದು ನೋಡಿ ಹೊಸ ಕುದುರೆ ಸ್ಟೈಲ್

ಈಗೀಗ ಸಾಮಾಜಿಕ ಜಾಲತಾಣದಲ್ಲಿ ಹಲವು ಬಗೆಯ ಫನ್ನಿ ವಿಡಿಯೋಗಳು ಕಾಣಸಿಗುತ್ತಿರುತ್ತವೆ.  ಇದೀಗ ಅಂತಹದ್ದೇ  ತಮಾಷೆಯ ವಿಡಿಯೋವೊಂದು ಹರಿದಾಡುತ್ತಿದ್ದು, ಕೇಶವಿನ್ಯಾಸಕರೊಬ್ಬರು ನಾವೇ ಬೇರೆ, ನಮ್ಮ ಸ್ಟೈಲೇ ಬೇರೆ  ಎನ್ನುತ್ತಾ ರೂಪದರ್ಶಿಯ ತಲೆಗೂದಲಲ್ಲಿ ಕುದುರೆಯ ಆರ್ಟ್ ವರ್ಕ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಹೊಸ ಬಗೆಯ ಹೇರ್ ಸ್ಟೈಲ್ ಕಂಡು ನೆಟ್ಟಿಗರು ಅಚ್ಚರಿಯಾಗಿದ್ದಾರೆ.

Viral Video: ಹೇರ್ ಸ್ಟೈಲ್ ಹೆಣ್ಮಕ್ಕಳಿಗೆ ಒಂದು ವರ, ಇದು ನೋಡಿ ಹೊಸ ಕುದುರೆ ಸ್ಟೈಲ್
ವೈರಲ್​​​ ವಿಡಿಯೋ
Edited By:

Updated on: Feb 09, 2024 | 5:52 PM

ಫ್ಯಾಷನ್ ಜಗತ್ತು ಎಂದ್ರೆ ಹಾಗೇನೆ. ಇಲ್ಲಿ ಫ್ಯಾಶನ್ ಸ್ಟೈಲ್ ದಿನದಿಂದ ದಿನಕ್ಕೆ ಅಪ್ಡೇಟ್ ಆಗುತ್ತಲೇ ಇರುತ್ತವೆ. ಡ್ರೆಸ್, ಶೂ, ಮೇಕ್ಅಪ್ ನಿಂದ ಹಿಡಿದು ಹೇರ್​​ಸ್ಟೈಲ್ ವರೆಗೂ ಫ್ಯಾಶನ್ ಸ್ಟೈಲ್ ಬದಲಾಗುತ್ತಲೇ ಇರುತ್ತದೆ. ಅದರಲ್ಲೂ ಎಲ್ಲರ ಗಮನ ತಮ್ಮತ್ತ ಸೆಳೆಯಬೇಕು ಎಂದು ಅಂದುಕೊಳ್ಳೋ ಜನರು ತಾವೇ ವಿಚಿತ್ರವಾಗಿರುವಂತಹ  ಫ್ಯಾಶನ್ ಟ್ರೆಂಡ್​​​ಗಳನ್ನು ಹುಟ್ಟು ಹಾಕ್ತಾರೆ. ಇಲ್ಲೊಬ್ಬ ಹೇರ್ ಸ್ಟೈಲಿಸ್ಟ್ ಕೂಡಾ ಮಾಡಿದ್ದು ಅದನ್ನೇ.  ಹೌದು ಕೇಶವಿನ್ಯಾಸಕರೊಬ್ಬರು ನಾವೇ ಬೇರೆ, ನಮ್ಮ ಸ್ಟೈಲೇ ಬೇರೆ ಎನ್ನುತ್ತಾ  ಮಾಡೆಲ್ ಒಬ್ಬರಿಗೆ ಕುದುರೆ ಥೀಮ್​​​ನ ಕೇಶ ವಿನ್ಯಾಸ ಮಾಡಿದ್ದಾರೆ. ಈಗೀಗ  ಕಾಲಕ್ಕೆ ತಕ್ಕಂತೆ ಬದಲಾವಣೆ ಎಂಬಂತೆ ಎಷ್ಟೆಷ್ಟೋ ಟ್ರೆಂಡಿಯಾಗಿರುವ ಹೇರ್ ಸ್ಟೈಲ್​​​ಗಳು ಪ್ರವರ್ಧಮಾನಕ್ಕೆ ಬರುತ್ತವಿವೆ. ನಮ್ಮದು ಸ್ವಲ್ಪ ಡಿಫರೆಂಟ್ ಆಗಿರ್ಲಿ ಅಂತ ಈ ಹೆರ್ ಸ್ಟೈಲಿಸ್ಟ್ ಕುದುರೆ ಥೀಮ್ ನ ಹೇರ್ ಆರ್ಟ್ ವರ್ಕ್ ಮಾಡಿದ್ದಾರೆ.   ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋವನ್ನು @ThebestFigen ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹೇರ್ ಆರ್ಟ್ ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವಿಡಿಯೋದಲ್ಲಿ ಕೇಶ ವಿನ್ಯಾಸಕ ಯುವತಿಯ ತಲೆಗೂದಲಿನಲ್ಲಿ ಕುದುರೆ ಥೀಮ್ ನ  ಆರ್ಟ್ ವರ್ಕ್ ಮಾಡಿರುವಂತಹ ದೃಶ್ಯವನ್ನು ಕಾಣಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಕೇಶವಿನ್ಯಾಸಕ ಯುವತಿಯೊಬ್ಬಳ ತಲೆಗೂದಲಿನಲ್ಲಿ ಸುಂದರವಾದ ಕುದುರೆಯ ಆರ್ಟ್ ಅನ್ನು ರಚಿಸಿ, ಕೊನೆಯಲ್ಲಿ ಸೆಟ್ಟಿಂಗ್ ಸ್ಪ್ರೇ ಹಾಕಿ ಕೂದಲನ್ನು ಸೆಟ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ಹೇರ್ ಆರ್ಟ್  ವರ್ಕ್ ನೋಡಿದಾಗ ಪುಟ್ಟದಾದ  ನೈಜ್ಯ ಕುದುರೆಯೇ ಆ ಯುವತಿಯ ತಲೆಯ ಮೇಲೆ ಕುಳಿತಂತೆ ಕಾಣುತ್ತದೆ.

ಇದನ್ನೂ ಓದಿ: ಸ್ಟೇಡಿಯಂನಲ್ಲಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕಪಾಳ ಮೋಕ್ಷ ಮಾಡಿದ ಯುವತಿ, ಯಾಕೆ ಗೊತ್ತಾ?   

ಫೆಬ್ರವರಿ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಈ ಹೊಸ ಬಗೆಯ ಹೇರ್ ಸ್ಟೈಲ್ ಕಂಡು ನೆಟ್ಟಿಗರು ತರಹೇವಾರಿ ಕಮೆಂಟ್ಸ್ಗಳನ್ನು ಮಾಡಿದ್ದಾರೆ.  ಒಬ್ಬ ಬಳಕೆದಾರರು ʼಈ ಹೇರ್ ಸ್ಟೈಲ್ ನೋಡಲು ತುಂಬಾ ಫನ್ನಿಯಾಗಿದೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜವಾಗಿಯೂ ಬೆರಗುಗೊಳಿಸುವಂತಹ ಕಲೆ. ಕೇಶವಿನ್ಯಾಸಕರ ಸೃಜನಶೀಲತೆ ಮತ್ತು ಕಲೆಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದ್ಭುತವಾದ ಹೇರ್ ಆರ್ಟ್ʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ತಮಾಷೆಯಾಗಿ ಕಂಡರೂ  ನಿಜಕ್ಕೂ ಈ ಹೇರ್ ಸ್ಟೈಲ್ ತುಂಬಾನೇ ಅದ್ಭುತವಾಗಿದೆ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us