Viral Video: ಸ್ಟೇಡಿಯಂನಲ್ಲಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕಪಾಳ ಮೋಕ್ಷ ಮಾಡಿದ ಯುವತಿ, ಯಾಕೆ ಗೊತ್ತಾ? 

ಹೆಚ್ಚಿನವರು ತಮ್ಮ ಪ್ರೇಯಸಿಗೆ ಬಹಳ ವಿಶೇಷವಾಗಿ ಲವ್ ಪ್ರಪೋಸ್ ಮಾಡಬೇಕೆಂಬ ಕನಸು ಕಂಡಿರುತ್ತಾರೆ. ಹಲವರು ಹೀಗೆ ವಿಶಿಷ್ಟ ರೀತಿಯಲ್ಲಿ ತಮ್ಮ ಗೆಳತಿಗೆ ಪ್ರಪೋಸ್ ಮಾಡುತ್ತಾರೆ. ಇಂತಹ ವಿಶಿಷ್ಟ ಪ್ರೇಮ ನಿವೇದನೆಗಳ ಕುರಿತ ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಕಿಕ್ಕಿರಿದ ಸ್ಟೇಡಿಯಂನಲ್ಲಿ ವಿಶೇಷವಾಗಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕೋಪಗೊಂಡು ಯುವತಿಯೊಬ್ಬಳು  ಕಪಾಳಮೋಕ್ಷ ಮಾಡಿದ್ದಾಳೆ.  ಅಷ್ಟಕ್ಕೂ ಆಕೆ ಪ್ರಿಯಕರನಿಗೆ ಕಪಾಳಮೋಕ್ಷ ಮಾಡಿದರ ಹಿಂದಿನ ಕಾರಣ ಏನ್ ಗೊತ್ತಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ

Viral Video: ಸ್ಟೇಡಿಯಂನಲ್ಲಿ ಪ್ರಪೋಸ್ ಮಾಡಿದ ಗೆಳೆಯನಿಗೆ ಕಪಾಳ ಮೋಕ್ಷ ಮಾಡಿದ ಯುವತಿ, ಯಾಕೆ ಗೊತ್ತಾ? 
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 09, 2024 | 4:32 PM

ತಾನು ಪ್ರೀತಿಸುವ ಜೀವಕ್ಕೆ ವಿಭಿನ್ನವಾಗಿ ಬಹಳ ವಿಶೇಷವಾಗಿ ಪ್ರಪೋಸ್ ಮಾಡಬೇಕು ಎಂದು ಪ್ರೇಮಿಗಳು ಯೋಚಿಸುವುದು ಸಹಜ. ಈಗಂತೂ ಲೈವ್ ಫುಟ್ಬಾಲ್, ಕ್ರಿಕೆಟ್ ಪಂದ್ಯಾವಳಿಗಳ ವೇಳೆ ಕಿಕ್ಕಿರಿದ ಸ್ಟೇಡಿಯಂನಲ್ಲಿ ಗೆಳತಿಗೆ ಪ್ರಪೋಸ್ ಮಾಡುವ, ಮಾಲ್​​​ನಲ್ಲಿ ಜನರ ಮುಂದೆ, ವಿಮಾನ ನಿಲ್ದಾಣದಲ್ಲಿ  ಪ್ರಪೋಸ್ ಮಾಡುವಂತಹ ಟ್ರೆಂಡ್ ಶುರುವಾಗಿದೆ. ಈ ಕುರಿತ ಹಲವಾರು ಫೋಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತಿರುತ್ತವೆ.  ಇದೀಗ ಅದೇ ರೀತಿಯ ವಿಡಿಯೋವೊಂದು ಹರಿದಾಡುತ್ತಿದ್ದು, ಕಿಕ್ಕಿರಿದ ಸ್ಟೇಡಿಯಂನಲ್ಲಿ ಮಂಡಿಯೂರಿ ಪ್ರಪೋಸ್ ಮಾಡಿದ ಗೆಳೆಯನಿಗೆ ಯುವತಿಯೊಬ್ಬಳು ಜೋರಾಗಿಯೇ ಕಪಾಳಮೋಕ್ಷ ಮಾಡಿದ್ದಾಳೆ. ಅಷ್ಟಕ್ಕೂ ಆಕೆ ಪ್ರಿಯಕರನಿಗೆ ಕಪಾಳ ಮೋಕ್ಷ ಮಾಡಿದರ ಹಿಂದಿನ ಕಾರಣ ಕೇಳಿದ್ರೆ ನೀವು ನಗೋದಂತೂ ಗ್ಯಾರಂಟಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸ್ಟೇಡಿಯಂನಲ್ಲಿ ಮಂಡಿಯೂರಿ ಪ್ರಪೋಸ್ ಮಾಡಿದ ಗೆಳೆಯನಿಗೆ ಯುವತಿಯೊಬ್ಬಳು ಕೋಪಗೊಂಡು ಕಪಾಳಮೋಕ್ಷ ಮಾಡಿದಂತಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು Wild content ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಅಸಹ್ಯ ವರ್ತನೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಕಿಕ್ಕಿರಿದ ಸ್ಟೇಡಿಯಂನಲ್ಲಿ ಯುವಕನೊಬ್ಬ ತನ್ನ  ಗೆಳತಿಗೆ ವಿಭಿನ್ನ ರೀತಿಯಲ್ಲಿ  ಪ್ರಪೋಸ್ ಮಾಡುವುದನ್ನು ಕಾಣಬಹುದು. ಮೊದಲಿಗೆ ಆಕೆಯನ್ನು ತಬ್ಬಿಕೊಂಡು ನಂತರ ಆತ ಮಂಡಿಯೂರಿ ಕುಳಿತು ರಿಂಗ್ ಬಾಕ್ಸ್ ಒಂದನ್ನು ಓಪನ್ ಮಾಡುತ್ತಾರೆ. ಈ ಉಂಗುರದ ಡಬ್ಬದಲ್ಲಿ ಖಂಡಿತವಾಗಿಯೂ ಚಿನ್ನ ಅಲ್ಲದಿದ್ದರೆ  ವಜ್ರದ ಉಂಗರು ಇದ್ದೇ ಇರುತ್ತೆ ಅಂತ ಆ ಯುವತಿಯಂತೂ ಫುಲ್ ಖುಷಿಯಿಂದ ನಿಂತಿರುತ್ತಾಳೆ. ಆದರೆ ಆತ  ಬಾಕ್ಸ್ ಓಪನ್ ಮಾಡಿ ತನ್ನ ಪ್ರೇಯಸಿಗೆ ವಜ್ರದ ಉಂಗುರ ತೊಡಿಸುವ ಬದಲು ತಮಾಷೆಯಾಗಿ ಕೆಂಪು ಬಣ್ಣದ  ಕ್ಯಾಂಡಿ ಉಂಗುರವನ್ನು ತೊಡಿಸಲು  ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಆ ಯುವತಿ ಮಂಡಿಯೂರಿ ಕುಳಿತಂತಹ ಗೆಳೆಯನಿಗೆ ಜೋರಾಗಿ ಕಪಾಳಮೋಕ್ಷ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಎ.ಐ ಟೂಲ್​​​ಗಳಿಗೆ ಮರಾಠಿ ಭಾಷೆ ಕಲಿಸಿ ಗಂಟೆಗೆ 400 ರೂ. ಗಳಿಸುತ್ತಿರುವ ಮಹಿಳೆ

ಫೆಬ್ರವರಿ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 17.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 41 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼಆಕೆ ಆ ರೀತಿ ವರ್ತನೆ ತೋರಿದ್ದು ಸರಿಯಲ್ಲʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅವನು ಆಕೆಯನ್ನು ಮಾದುವೆಯಾಗದಿದ್ದರೆಯೇ ಆತನಿಗೆ ತುಂಬಾ ಒಳ್ಳೆಯದುʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈಗೀಗ ಜನರು ಎಷ್ಟು ಅಸಭ್ಯ ಮತ್ತು ಅಗೌರವದ ವರ್ತನೆ ತೋರುತ್ತಿದ್ದಾರೆಯಲ್ಲವೇʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಆ ಯುವತಿಯ ವರ್ತನೆಯನ್ನು ಕಂಡು ಕೋಪಗೊಂಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ