Viral Video: ಅಮ್ಮನ ಮಮತೆಯಲ್ಲಿ ಯಾವುದೇ ಭೇದವಿಲ್ಲ, ತನ್ನ ಮರಿಗಳೊಂದಿಗೆ ಬೆಕ್ಕಿನ ಮರಿಗೂ ಹಾಲುಣಿಸಿದ ಶ್ವಾನ…

ಬೆಕ್ಕು ಮತ್ತು ನಾಯಿ ಪರಮ ಶತ್ರುಗಳು ಎಂದು ಹೇಳಲಾಗುತ್ತದೆ. ನಿಜವಾಗಿಯೂ ಈ ನಾಯಿ ಮತ್ತು ಬೆಕ್ಕು ಮುಖಾ ಮುಖಿಯಾದರೆ ಕಿತ್ತಾಡಿಕೊಂಡು, ಹೊಡೆದಾಡಿಕೊಂಡು ಇರುತ್ತವೆ. ಈ ಎರಡು ಪ್ರಾಣಿಗಳ ನಡುವಿನ ಸುಂದರ ಬಾಂಧವ್ಯಕ್ಕೆ ಸಂಬಂಧಿಸಿದ ದೃಶ್ಯಗಳು ಕಾಣ ಸಿಗುವುದೇ ತೀರಾ ಅಪರೂಪ. ಆದರೆ ಇದೀಗ ಅಂತಹದ್ದೊಂದು ಹೃದಯಸ್ಪರ್ಶಿ ವಿಡಿಯೋ ಹರಿದಾಡುತ್ತಿದ್ದು, ತಾಯಿ ಶ್ವಾನ ತನ್ನ ಮರಿಗಳ ಜೊತೆಗೆ ಬೆಕ್ಕಿನ ಮರಿಗೂ ಕೂಡಾ ಹಾಲುಣಿಸಿದೆ. ಈ ಮುದ್ದಾದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.

Viral Video: ಅಮ್ಮನ ಮಮತೆಯಲ್ಲಿ ಯಾವುದೇ ಭೇದವಿಲ್ಲ, ತನ್ನ ಮರಿಗಳೊಂದಿಗೆ ಬೆಕ್ಕಿನ ಮರಿಗೂ ಹಾಲುಣಿಸಿದ ಶ್ವಾನ…
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 09, 2024 | 4:17 PM

ಬೆಕ್ಕು ಮತ್ತು ನಾಯಿಗಳನ್ನು ಹೆಚ್ಚಿನವರು ಸಾಕಲು ಇಷ್ಟಪಡುತ್ತಾರೆ. ಈ ಎರಡೂ ಪ್ರಾಣಿಗಳು ಮನೆಯಲ್ಲಿ ಜೊತೆಗಿದ್ದರಂತೂ ಹಾವು ಮುಂಗಿಸಿಗಳಂತೆ ಕಾದಾಡುತ್ತಿರುತ್ತವೆ. ಇಲ್ಲ ಅಂದ್ರೆ ಈ ಎರಡೂ ಪ್ರಾಣಿಗಳು ತುಂಟಾಟವಾಡಿಕೊಂಡು, ಜಗಳವಾಡುತ್ತಾ ಇರುತ್ತವೆ. ಈ ಎರಡೂ ಸಾಕು ಪ್ರಾಣಿಗಳ ಕುರಿತ ಸಾಕಷ್ಟು ವಿಡಿಯೋಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದರಲ್ಲಿ ಹೆಚ್ಚಿನವು ನಾಯಿ ಮತ್ತು ಬೆಕ್ಕುಗಳ ನಡುವಿನ ತುಂಟಾಟ ಮತ್ತು ಜಗಳಗಳಿಗೆ ಸಂಬಂಧಪಟ್ಟ ವಿಡಿಯೋಗಳೇ ಇರುತ್ತವೆ. ಇವುಗಳ ನಡುವಿನ ಸುಂದರ ಬಾಂಧವ್ಯ, ಪ್ರೀತಿ, ಕಾಳಜಿಗೆ ಸಂಬಂಧಿಸಿದ ದೃಶ್ಯಗಳು ಕಾಣ ಸಿಗುವುದೇ ತೀರಾ ಅಪರೂಪ. ಈ ನಡುವೆ ಅಂತಹದ್ದೊಂದು ಹೃದಯಸ್ಪರ್ಶಿ ವಿಡಿಯೋ ಹರಿದಾಡುತ್ತಿದ್ದು, ತಾಯಿ ಶ್ವಾನವು ತನ್ನ ಮರಿಗಳೊಂದಿಗೆ ಬೆಕ್ಕಿನ ಮರಿಗೂ ಕೂಡಾ ಹಾಲುಣಿಸಿದೆ. ಮಕ್ಕಳ ಹಸಿವನ್ನು ತಾಯಿ ಮಾತ್ರವೇ ನೀಗಿಸಲಬಲ್ಲಳು ಎಂಬುದಕ್ಕೆ ಈ ಶ್ವಾನವೇ ಸಾಕ್ಷಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿ ಮರಿಗಳೊಂದಿಗೆ ಒಂದು ಪುಟ್ಟ ಬೆಕ್ಕಿನ ಮರಿಯೂ ಕೂಡಾ ತನ್ನ ಹಸಿವನ್ನು ನೀಗಿಸಲು ತಾಯಿ ಶ್ವಾನದ ಎದೆಹಾಲು ಕುಡಿಯುತ್ತಿರುವ ದೃಶ್ಯವನ್ನು ಕಾಣಬಹುದು. ಈ ಮುದ್ದಾದ ವಿಡಿಯೋವನ್ನು @Yoda4ever ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ತಾಯಿ ಶ್ವಾನವು ತನ್ನ ಮರಿಗಳಿಗೆ ಹಾಲುಣಿಸುತ್ತಿರುವ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ಹೊಟ್ಟೆ ಹಸಿವಿನಿಂದ ಬಂದಂತಹ ಬೆಕ್ಕಿನ ಮರಿಯೊಂದು ಶ್ವಾನವನ್ನೇ ತನ್ನ ತಾಯಿಯೆಂದು ಭಾವಿಸಿ, ನಾಯಿ ಮರಿಗಳೊಂದಿಗೆ ಈ ಮುದ್ದಾದ ಬೆಕ್ಕಿನ ಮರಿಯೂ ಕೂಡಾ ತಾಯಿ ಶ್ವಾನದ ಎದೆ ಹಾಲು ಕುಡಿಯುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ

ಫೆಬ್ರವರಿ 07 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 47 ಸಾವಿರಕ್ಕೂ ಹೆಚ್ಚಿನ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಅಯ್ಯೋ ಆ ಬೆಕ್ಕಿನ ಮರಿ ತನ್ನನ್ನು ತಾನು ನಾಯಿ ಮರಿ ಎಂದು ಭಾವಿಸಿದೆʼ ಎಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ನಿಜಕ್ಕೂ ಅದ್ಭುತವಾಗಿದೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಶ್ವಾನಗಳು ನಿಜವಾಗಿಯೂ ಮೃದು ಸ್ವಾಭಾವದವು, ಇದಕ್ಕಾಗಿಯೇ ನಾನು ಶ್ವಾನಗಳನ್ನು ಅತಿಯಾಗಿ ಪ್ರೀತಿಸುತ್ತೇನೆʼ ಎಂಬ ಕಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಈ ದೃಶ್ಯ ತುಂಬಾನೇ ಮುದ್ದಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Fri, 9 February 24

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ