AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Memorable Love Proposal: ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ

ಪ್ರೇಮಿಗಳ ದಿನ ಇನ್ನೇನು ಹತ್ತಿರ ಬರುತ್ತಿದೆ. ಪ್ರಪಂಚದಾದ್ಯಂತ ಫೆಬ್ರುವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಜಗತ್ತಿನ ಎಲ್ಲಾ ಪ್ರೇಮಿಗಳಿಗೂ ವಿಶೇಷ. ಬ್ರಿಟನ್‌ನ ವ್ಯಕ್ತಿಯೊಬ್ಬರು ಕ್ರಿಯೇಟಿವ್​​ ಪ್ರಪೋಸಲ್​​ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿಯಲ್ಲಿದ್ದಾರೆ.

Memorable Love Proposal: ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ
Romantic Propose
ಅಕ್ಷತಾ ವರ್ಕಾಡಿ
|

Updated on: Feb 09, 2024 | 1:11 PM

Share

ಪ್ರೇಮಿಗಳ ದಿನ ಸಮೀಪಿಸುತ್ತಿದೆ. ಪ್ರೇಮ ಪಕ್ಷಿಗಳು ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುವ ಸುಂದರ ದಿನದಂದು ಬ್ರಿಟನ್‌ನ ವ್ಯಕ್ತಿಯೊಬ್ಬರು ಕ್ರಿಯೇಟಿವ್​​ ಪ್ರಪೋಸಲ್​​ನಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸುದ್ದಿಯಲ್ಲಿದ್ದಾರೆ. ಡರ್ಬಿಶೈರ್‌ನ ಜೋ ಮೂರ್(33) ತನ್ನ ತೊಡೆಯ ಮೇಲೆ “Will you marry me” ಎಂದು ಹಚ್ಚೆ ಹಾಕಿಸಿಕೊಂಡು ತನ್ನ ಪ್ರೇಯಸಿಗೆ ಪ್ರಪೋಸ್​​ ಮಾಡಿದ್ದಾನೆ. ಮೂರ್ ವೃತ್ತಿಯಲ್ಲಿ ಕ್ಷೌರಿಕ. ಅವನು ತನ್ನ ಗೆಳತಿಗೆ ಟ್ಯಾಟೂದಲ್ಲಿ ‘ಹೌದು’ ಮತ್ತು ‘ಇಲ್ಲ’ ಎಂಬ ಎರಡು ಆಯ್ಕೆಗಳನ್ನು ಇಟ್ಟುಕೊಂಡಿದ್ದ.

nypost ಪ್ರಕಾರ, ಮೂರ್ ಮತ್ತು 36 ವರ್ಷದ ಸಾರಾ ಗ್ರಹಾಂ ಕಳೆದ ಮೂರು ವರ್ಷಗಳಿಂದ ಪರಸ್ಪರ ಸಂಬಂಧ ಹೊಂದಿದ್ದಾರೆ. ಮೂರ್ ತನ್ನ ಗೆಳತಿಯನ್ನು ವಿಭಿನ್ನ ರೀತಿಯಲ್ಲಿ ಪ್ರಪೋಸ್​​ ಮಾಡಲು ಬಯಸಿದ್ದನು. ಆನ್‌ಲೈನ್ ವೀಡಿಯೊ ಕ್ಲಿಪ್ ನೋಡಿದ ನಂತರ ಟ್ಯಾಟೂ ಮೂಲಕ ಪ್ರಸ್ತಾಪಿಸುವ ಆಲೋಚನೆ ನನಗೆ ಬಂದಿತು ಎಂದು ಹೇಳಿದ್ದಾನೆ. ಮೂರ್ 10 ಇಂಚಿನ ಹಚ್ಚೆ ಹಾಕಿಸಿಕೊಂಡಿದ್ದಾರೆ, ಇದು ಕಾರ್ಟೂನ್ ಪಾತ್ರವಾಗಿದೆ. ಇದರಲ್ಲಿ ಒಬ್ಬ ಹುಡುಗ ತನ್ನ ಮೊಣಕಾಲುಗಳ ಮೇಲೆ ಕುಳಿತು ತನ್ನ ಪ್ರೇಯಸಿಗೆ ಪ್ರೇಮ ಪ್ರಸ್ತಾಪಿಸುವುದನ್ನು ಕಾಣಬಹುದು. ಇಷ್ಟು ಮುದ್ದಾದ ಪ್ರೇಮ ನಿವೇದನೆ ಕಂಡು ಯುವತಿ ಆತನನ್ನು ಮದುವೆ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಇವರಿಬ್ಬರ ಮುದ್ದಾದ ಪ್ರೇಮ ಪ್ರಸ್ತಾಪ ಪ್ರೇಮಿಗಳ ದಿನ ಸಮೀಪಿಸುತ್ತಿದ್ದಂತೆ ಎಲ್ಲೆಡೆ ವೈರಲ್​​ ಆಗಿದೆ.

ಇದನ್ನೂ ಓದಿ: ಉತ್ಪನ್ನಗಳ ಬಗ್ಗೆ 3 ಸೆಕೆಂಡ್​​ ವಿಮರ್ಶೆ, ವಾರದಲ್ಲಿ ಈಕೆಗೆ 120 ಕೋಟಿ ರೂ. ಆದಾಯ

2018 ರಲ್ಲಿ ಇದೇ ರೀತಿಯ ಸಾಹಸದಲ್ಲಿ, ಎಂಎಂಎ ಫೈಟರ್ ವಿನ್ಸ್ ಮುರ್ಡೋಕ್ ತನ್ನ ಗೆಳತಿ ಕಿರಾಗೆ ಮೊಣಕಾಲಿನ ಮೇಲೆ ಬರೆದು ಪ್ರೇಮ ಪ್ರಸ್ತಾಪಿಸಿದ್ದ. ಪ್ರೇಮ ನಿವೇದನೆ ಎನ್ನುವುದು ಒಂದು ರೀತಿಯಲ್ಲಿ ಮದುವೆಯಾಗಲು ನೀಡುವ ಪ್ರಸ್ತಾವನೆ ಆಗಿರುತ್ತದೆ. ಇದೊಂದು ರೀತಿ ಜೀವನದ ಮಹತ್ವದ ಮೈಲಿಗಲ್ಲು ಕೂಡಾ ಹೌದು. ಆದ್ದರಿಂದ ಪ್ರೇವಿಗಳ ದಿನ ಸಮೀಪಿಸುತ್ತಿದೆ. ನೀವು ಕೂಡ ನಿಮ್ಮ ಪ್ರೇಮದ ಬಗ್ಗೆ ನಿಮ್ಮ ಪ್ರೇಮಿಯೊಂದಿಗೆ ಮುಕ್ತವಾಗಿ ಮಾತಾಡಿ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ