Viral Video: ಉತ್ಪನ್ನಗಳ ಬಗ್ಗೆ 3 ಸೆಕೆಂಡ್​​ ವಿಮರ್ಶೆ, ವಾರದಲ್ಲಿ ಈಕೆಗೆ 120 ಕೋಟಿ ರೂ. ಆದಾಯ

ಸಾಮಾಜಿಕ ಮಾಧ್ಯಮವು ಕಂಟೆಂಟ್ ಕ್ರಿಯೇಟರ್ಗಳಿಗೆ ಆದಾಯದ ಉತ್ತಮ ಮೂಲವಾಗಿದೆ. ಹೌದು ಅವರು ಪ್ರತಿನಿತ್ಯ ವ್ಲಾಗ್ಸ್ ಅಪ್ಲೋಡ್ ಮಾಡುವ ಮೂಲಕ ವಿವಿಧ ಉತ್ಪನ್ನಗಳ ಪ್ರಮೋಶನ್ ಮಾಡುವ ಮೂಲಕ ತಿಂಗಳಿಗೆ ಸಾಕಷ್ಟು ಹಣವನ್ನು ಸಂಪಾದನೆ ಮಾಡುತ್ತಾರೆ. ಅದರಲ್ಲಿ ಬೆರಳೆಣಿಕೆಯಷ್ಟು ಕ್ರಿಯೇಟರ್ಸ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಯಶಸ್ಸನ್ನು ಗಳಿಸುತ್ತಾರೆ. ಮತ್ತು ತಿಂಗಳಿಗೆ ಲಕ್ಷದಿಂದ ಹಿಡಿದು ಕೋಟ್ಯಾಂತರ ರೂಪಾಯಿಗಳವರೆಗೆ ಹಣವನ್ನು ಗಳಿಸುತ್ತಾರೆ. ಅದೇ ರೀತಿ ಚೀನಾದ ಈ ಮಹಿಳೆಯು ಕೂಡಾ ಸಾಮಾಜಿಕ ಮಾಧ್ಯಮದಿಂದ ವಾರಕ್ಕೆ 120 ಕೋಟಿ ರೂಪಾಯಿ ಹಣವನ್ನು ಗಳಿಸುತ್ತಾರೆ. 

Viral Video: ಉತ್ಪನ್ನಗಳ ಬಗ್ಗೆ 3 ಸೆಕೆಂಡ್​​ ವಿಮರ್ಶೆ, ವಾರದಲ್ಲಿ ಈಕೆಗೆ 120 ಕೋಟಿ ರೂ. ಆದಾಯ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 08, 2024 | 7:11 PM

ಆನ್ಲೈನ್ ಅಲ್ಲಿ ಜನರು ನಾನಾ ರೀತಿಯಲ್ಲಿ ಹಣ ಗಳಿಕೆ ಮಾಡುತ್ತಾರೆ.  ಕೆಲವರು ಯುಟ್ಯೂಬ್ ವ್ಲಾಗ್ಸ್ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಿದರೆ, ಇನ್ನೂ ಕೆಲವರು ಕೆಲವೊಂದು ಉತ್ಪನ್ನಗಳು, ಮಳಿಗೆಗಳ ಪ್ರಮೋಶನ್ ಮಾಡುವ ಮೂಲಕ ಹಣವನ್ನು ಗಳಿಸುತ್ತಾರೆ. ಸಾಮಾಜಿಕ ಮಾಧ್ಯಮಗಳು ಕೂಡಾ ಆದಾಯ ಗಳಿಕೆಯ ಪ್ರಮುಖ ಮೂಲವಾಗಿದ್ದು,  ಯುಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಇತ್ಯಾದಿ ಆನ್ಲೈನ್ ಪ್ಲಾಟ್ಫಾರ್ಮ್ ಗಳಿಂದ ಸಾಕಷ್ಟು ವಿಡಿಯೋ ಕ್ರಿಯೇಟರ್ಗಳು ತಿಂಗಳಿಗೆ ಸಾವಿರದಿಂದ ಲಕ್ಷಾಂತರ ರೂಪಾಯಿಗಳವರೆಗೆ ಹಣವನ್ನು ಸಂಪಾದನೆ ಮಾಡುತ್ತಾರೆ. ಅದರಲ್ಲಿ ಬೆರಳೆಣಿಕೆಯಷ್ಟು ಕ್ರಿಯೇಟರ್ಸ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಯಶಸ್ಸನ್ನು ಗಳಿಸಿ ಲಕ್ಷದಿಂದ ಹಿಡಿದು ಕೋಟ್ಯಾಂತರ ರೂಪಾಯಿಗಳವರೆಗೆ ಹಣವನ್ನು ಗಳಿಸುತ್ತಾರೆ. ಅದೇ ರೀತಿ ಚೀನಾದ ಈ ಮಹಿಳೆಯು ಕೂಡಾ ಆನ್ಲೈನ್ ಪ್ಲಾಟ್ಫಾರ್ಮ್ ಅಲ್ಲಿ ವಿವಿಧ  ಉತ್ಪನ್ನಗಳಿಗೆ ಕೇವಲ  ಮೂರು ಸೆಕೆಂಡುಗಳ ವಿಮರ್ಶೆಯನ್ನು ನೀಡುವ ಮೂಲಕ  ವಾರಕ್ಕೆ 120 ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.

ಹೌದು ಚೀನಾದ ಝೆಂಗ್ ಕ್ಸಿಯಾಂಗ್  ಎಂಬ ಮಹಿಳೆ ಆನ್ಲೈನ್ ಉತ್ಪನ್ನಗಳ ಪ್ರಚಾರದ ವಿಡಿಯೋಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಟಿಕ್ಟಾಕ್ ನ ಚೈನೀಸ್  ಆವೃತ್ತಿಯಾಗಿರುವ ಡೌಯಿನ್ ಅಲ್ಲಿ 5 ಮಿಲಿಯನ್ ಗಿಂತಲೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಝೆಂಗ್ ಕ್ಸಿಯಾಂಗ್ ಆನ್ಲೈನ್ ಉತ್ಪನ್ನಗಳ ತ್ವರಿತ ವಿಮರ್ಶೆಯಿಂದಲೇ ಕೋಟ್ಯಾಂತರ ಹಣವನ್ನು ಗಳಿಸುವ ಮೂಲಕ ಫೇಮಸ್ ಆಗಿದ್ದಾರೆ.

ಇದನ್ನೂ ಓದಿ: ಭಾರಿ ಹಿಮಪಾತದ ನಡುವೆಯೂ ಕೇದಾರ ಕಣಿವೆಯಲ್ಲಿ ಧ್ಯಾನಕ್ಕೆ ಕುಳಿತ ಸನ್ಯಾಸಿ; ಇಲ್ಲಿದೆ ನೋಡಿ ವಿಡಿಯೋ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by ASTRO XUAN (@xuan.com.my)

ಝೆಂಗ್ ಕ್ಸಿಯಾಂಗ್ ವಿವಿಧ ಉತ್ಪನ್ನಗಳಿಗೆ ತ್ವರಿತ ವಿಮರ್ಶೆಯನ್ನು ನೀಡುತ್ತಿರುವ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು @xuan.com.my ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “3 ಸೆಕೆಂಡುಗಳಲ್ಲಿ ವಿವಿಧ ಉತ್ಪನ್ನಗಳ ರಿವ್ಯೂ ನೀಡುವ ಮೂಲಕ ವಾರಕ್ಕೆ 120 ಕೋಟಿ ರೂಪಾಯಿ ಗಳಿಸುವ ಮಹಿಳೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ಝೆಂಗ್ ಕ್ಸಿಯಾಂಗ್  ಪ್ರತಿಯೊಂದು ಉತ್ಪನ್ನಗಳಿಗೂ 3 ಸೆಕೆಂಡುಗಳಲ್ಲಿ ತ್ವರಿತವಾಗಿ ರಿವ್ಯೂ ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:11 pm, Thu, 8 February 24

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು