Viral Video: ಭಾರಿ ಹಿಮಪಾತದ ನಡುವೆಯೂ ಕೇದಾರ ಕಣಿವೆಯಲ್ಲಿ ಧ್ಯಾನಕ್ಕೆ ಕುಳಿತ ಸನ್ಯಾಸಿ; ಇಲ್ಲಿದೆ ನೋಡಿ ವಿಡಿಯೋ
ಪ್ರತಿವರ್ಷ ಚಳಿಗಾಲದಲ್ಲಿ ಹಿಮಪಾತದಿಂದಾಗಿ ಕೇದಾರನಾಥದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಏರಲಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಇದೀಗ ಭಕ್ತರ ಪ್ರವೇಶಕ್ಕೆ ನಿರ್ಬಂಧ ಏರಲಾಗಿದ್ದು, ಈ ಪವಿತ್ರ ಸ್ಥಳವೇ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದೆ. ಈ ಹಿಮಪಾತ ಮತ್ತು ಮೈ ಕೊರೆಯುವ ಚಳಿಯ ನಡುವೆಯೂ ಲಲಿತ ಮಹಾರಾಜ ಎಂಬ ಸನ್ಯಾಸಿ ಕೇದಾರನಾಥ ಧಾಮದಲ್ಲಿಯೇ ನೆಲೆಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಖಂಡದ ರಾಜ್ಯದಲ್ಲಿನ ಹಿಮಾಲಯದ ತಪ್ಪಲಿನಲ್ಲಿ ನೆಲೆಗೊಂಡಿರುವ ಕೇದಾರನಾಥ ಹಿಂದೂಗಳ ಪವಿತ್ರ ಯಾತ್ರಾ ಸ್ಥಳ. ಪ್ರತಿವರ್ಷ ಶಿವನ ದರ್ಶನ ಪಡೆಯಲು ಭಕ್ತರು ಸಾಗರೋಪಾದಿಯಲ್ಲಿ ಕೇದಾರನಾಥಕ್ಕೆ ಯಾತ್ರೆ ಹೋಗುತ್ತಾರೆ. ಕೇದಾರನಾಥ ಯಾತ್ರೆ ಸುಲಭವಲ್ಲ, ಕಠಿಣ ಹಾದಿ ಸವೆಸಬೇಕು. ಈ ಕಷ್ಟದ ಹಾದಿಯ ನಡುವೆಯೂ ಭಕ್ತರು ಸರ್ವರೂಪಿಯೂ ಸರ್ವವ್ಯಾಪಿಯೂ ಆಗಿರುವ ಶಿವನನ್ನು ಅರಸಿಕೊಂಡು ಭಕ್ತಿಯಿಂದ ಕೇದಾರನಾಥಕ್ಕೆ ಹೋಗುತ್ತಾರೆ. ಆದರೆ ಚಳಿಗಾಲದಲ್ಲಿ ಚಳಿ ಹವಾಮಾನದಿಂದ ಉಂಟಾಗುವ ಹಿಮಪಾತದಿಂದಾಗಿ ಸುರಕ್ಷತಾ ದೃಷ್ಟಿಯಿಂದ ಕೇದಾರನಾಥದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತದೆ. ಅಷ್ಟೇ ಅಲ್ಲದೆ ಕೇದಾರ ಕಣಿವೆಯೂ ಸಂಪೂರ್ಣವಾಗಿ ಹಿಮದಿಂದ ಆವೃತ್ತವಾಗಿರುತ್ತದೆ. ಹೀಗಿರುವಾಗ ಈ ಸಮಯದಲ್ಲಿ ಇಲ್ಲಿ ಸಾಮಾನ್ಯ ಜನರು ವಾಸಿಸಲು ಕೂಡಾ ಕಷ್ಟಸಾಧ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಅಷ್ಟು ಕೊರೆಯುವ ಚಳಿಯಿದ್ದರೂ, ಹಿಮಪಾತವಿದ್ದರೂ ಈ ಹಿಮಪಾತದ ನಡುವೆಯೇ ಕೇದಾರ ಕಣಿವೆಯ ಭೈರವ ಮಂದಿರದಲ್ಲಿ ಲಲಿತ್ ಮಹಾರಾಜ್ ಸನ್ಯಾಸಿ ವಾಸಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಮಪಾತದ ಸಮಯದಲ್ಲಿ ಕೇದಾರನಾಥ ದೇವಾಲಯ, ಕೇದಾರ ಕಣಿವೆ ಸಂಪೂರ್ಣವಾಗಿ ಹಿಮದಿಂದ ಆವೃತ್ತವಾಗಿರುತ್ತದೆ.ಅಂತಹ ಪರಿಸ್ಥಿತಿಯಲ್ಲಿ ಅಷ್ಟು ಕೊರೆಯುವ ಚಳಿಯಿದ್ದರೂ, ಹಿಮಪಾತದ ನಡುವೆ ಧ್ಯಾನ ಮಾಡುತ್ತಾ ಋಷಿಮುನಿಗಳು ಮತ್ತು ಸಂತರು ಇಲ್ಲಿಯೇ ಇರುತ್ತಾರೆ. ಈ ಸಂತರಲ್ಲಿ ಲಲಿತ್ ಮಹಾರಾಜ್ ಕೂಡಾ ಒಬ್ಬರು. ಅವರು ಈ ಕೊರೆಯುವ ಚಳಿ ಮತ್ತು ಹಿಮಪಾತದ ನಡುವೆಯೂ ಮಹದೇವನನ್ನು ಸ್ಮರಿಸುತ್ತಾ ಪೂಜೆ, ಧ್ಯಾನದ ಮಾಡುತ್ತಾ ಕಳೆದ 1 ವರ್ಷದಿಂದ ಇಲ್ಲೇ ಭೈರವ ಮಂದಿರದಲ್ಲಿ ನೆಲೆಸಿದ್ದಾರೆ.
ಇದನ್ನೂ ಓದಿ: ಕತ್ತೆ ಚಾಲಿತ ಫ್ಯಾನ್ ಹೇಗಿದೆ ನೋಡಿ, ಆದರೆ ಇದು ಮೂಕ ಪ್ರಾಣಿಗಳಿಗೆ ಹಿಂಸೆ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Lalit Maharaj Ji at Bhairav Mandir who spends 12 months in Kedar valley pic.twitter.com/Ow8rpzAVrI
— Weatherman Shubham (@shubhamtorres09) February 8, 2024
ಲಲಿತ್ ಮಹಾರಾಜ್ ಸನ್ಯಾಸಿಯ ಕುರಿತ ಈ ವಿಡಿಯೋವನ್ನು @shubhamtorres09 ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಭಾರಿ ಹಿಮಪಾತ ಹಾಗೂ ಕೊರೆಯುವ ಚಳಿಯ ನಡುವೆಯೂ ಲಲಿತ್ ಮಹರಾಜ್ ಅನ್ನೋ ಸನ್ಯಾಸಿ ಭೈರವ ಮಂದಿರದ ಬಳಿ ನಡೆದುಕೊಂಡು ಬರುತ್ತಿರುವಂತಹ ದೃಶ್ಯಾವಳಿಯನ್ನು ಕಾಣಬಹುದು. ಕೊರೆಯುವ ಚಳಿಯಲ್ಲಿ ಒಂದು ದಿನ ಜಿವಿಸೋದೇ ಬಹಳ ಕಷ್ಟ, ಅಂತದ್ರಲ್ಲಿ ಈ ಸನ್ಯಾಸಿ ಕೊರೆಯುವ ಚಳಿ ಹಾಗೂ ಹಿಮಪಾತದ ನಡುವೆಯೂ ಅಲ್ಲೇ ನೆಲೆಸಿದ್ದಾರೆ ಅಂದ್ರೆ ಇದು ನಿಜಕ್ಕೂ ಅಚ್ಚರಿ ಅಂತ ನೆಟ್ಟಿಗರು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:49 pm, Thu, 8 February 24