AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದು ಪ್ರಪಂಚದಲ್ಲೇ ಅತ್ಯಂತ ಅಗ್ಗದ ದೇಸಿ ಡೈನಿಂಗ್ ಟೇಬಲ್, ಹೇಗಿದೆ ನೋಡಿ 

ಸೈಕಲ್ ಚಕ್ರದಿಂದಲೂ  ಡೈನಿಂಗ್ ಟೇಬಲ್ ತಯಾರಿಸಲು ಸಾಧ್ಯ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಅರೇ ಸೈಕಲ್ ಚಕ್ರದಿಂದ ಅದು ಹೇಗೆ ಡೈನಿಂಗ್ ಟೇಬಲ್ ತಯಾರಿಸಲು ಸಾಧ್ಯ ಅಂತ ನೀವು ಯೋಚನೆ ಮಾಡಬಹುದು. ಆದ್ರೆ   ಇಲ್ಲೊಬ್ಬ ವ್ಯಕ್ತಿ ಅಂತಹ ಸಾಹಸಕ್ಕೆ ಕೈ ಹಾಕಿದ್ದಾನೆ. ಹೌದು ಆತ ಸೈಕಲ್ ಚಕ್ರವನ್ನು ಬಳಸಿಕೊಂಡು ಹೊಸದಾದ ಡೈನಿಂಗ್  ಡೇಬಲ್ ಒಂದನ್ನು ತಯಾರಿಸಿದ್ದಾನೆ.  ಈತನ ಕ್ರಿಯೇಟಿವಿಟಿ ನೋಡಿ ನಮ್ಮ ದೇಶದಲ್ಲಿ ಈ ರೀತಿಯ ಐಡಿಯಾಗಳಿಗೆ ಯಾವುದೇ ಕೊರತೆಯಿಲ್ಲ ಬಿಡಿ ಅಂತ ನೆಟ್ಟಿಗರು ಹೇಳಿದ್ದಾರೆ.

Viral Video: ಇದು ಪ್ರಪಂಚದಲ್ಲೇ ಅತ್ಯಂತ ಅಗ್ಗದ ದೇಸಿ ಡೈನಿಂಗ್ ಟೇಬಲ್, ಹೇಗಿದೆ ನೋಡಿ 
ಮಾಲಾಶ್ರೀ ಅಂಚನ್​
| Edited By: |

Updated on: Feb 07, 2024 | 6:09 PM

Share

ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ, ಜುಗಾಡ್ ಐಡಿಯಾಗಳಿಗೇನೂ ಕೊರತೆಯಿಲ್ಲ. ಮನೆಯಲ್ಲಿ ಯಾವುದಾದರೂ ವಸ್ತುಗಳು ಕೆಟ್ಟು ಹೋದರೆ ಆ ವಸ್ತುವನ್ನು ಉಪಯೋಗಿಸಿಕೊಂಡು, ಅದ್ರಲ್ಲಿ ಇನ್ನೇನಾದರೂ ಹೊಸ ವಸ್ತುಗಳನ್ನು ತಯಾರಿಸುತ್ತಾರೆ. ಹೌದು ಹಲವರು ಕೆಲವೊಂದು ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಭಿನ್ನ ಶೈಲಿಯ ದೇಸಿ ಐಡಿಯಾಗಳನ್ನು ಉಪಯೋಗಿಸಿಕೊಂಡು ಕಡಿಮೆ ಖರ್ಚಿನಲ್ಲಿ ಆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇಂತಹ ಜುಗಾಡ್ ಐಡಿಯಾಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಹಿಂದೆ ವ್ಯಕ್ತಿಯೊಬ್ಬ ಕೆಟ್ಟು ಹೋದ ನೀರಿನ ಟ್ಯಾಂಕ್ ನಿಂದ ಬೈಕ್ ಶೆಡ್ ತಯಾರಿಸಿದಂತಹ, ನೀರಿನ ಟ್ಯಾಂಕ್ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಶೌಚಾಲಯವನ್ನು ತಯಾರಿಸಿದಂತಹ ವಿಡಿಯೋಗಳು ವೈರಲ್ ಆಗಿದ್ದವು. ಈಗ ಅದೇ ರೀತಿಯ ವಿಭಿನ್ನ ಶೈಲಿಯ ದೇಸಿ ಉಪಾಯದ ಕುರಿತ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಎಪ್ಪತ್ತು ಎಂಬತ್ತುಸಾವಿರ ರೂಪಾಯಿ ಖರ್ಚು ಮಾಡಿ ಡೈನಿಂಗ್ ಟೇಬಲ್ ಖರೀದಿಸುವ ಬದಲು ಕಡಿಮೇ ಖರ್ಚಲ್ಲಿಯೇ ಸಿಂಪಲ್ ಆಗಿರುವ ಡೈನಿಂಗ್ ಟೇಬಲ್ ತಯಾರಿಸುತ್ತೇನೆ ಎಂದು ಸೈಕಲ್ ಚಕ್ರದಿಂದ ವಿಶೇಷ ಡೈನಿಂಗ್ ಟೇಬಲ್ ಒಂದನ್ನು ತಯಾರಿಸಿದ್ದಾನೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ನಮ್ಮ ದೇಶದಲ್ಲಿ ಈ ರೀತಿಯ ಐಡಿಯಾಗಳಿಗೆ ಯಾವುದೇ ಕೊರತೆಯಿಲ್ಲ ಬಿಡಿ ಎಂದು ನೆಟ್ಟಿಗರು ಹೇಳಿದ್ದಾರೆ.

ಕೆಲವರಿಗೆ ನೆಲದ ಮೇಲೆ ಕೂತು ಊಟ ಮಾಡುವುದಕ್ಕಿಂತ  ಡೈನಿಂಗ್ ಟೇಬಲ್ ಮೇಲೆ ಕೂತು ಊಟ ಮಾಡುವುದೆಂದರೆ ಇಷ್ಟ. ಇಷ್ಟ ಅನ್ನೋದಕ್ಕಿಂತ ಅದೊಂತರ ಕಂಫರ್ಟೇಬಲ್ ಅಂತಾನೇ ಹೇಳಬಹುದು. ಇಲ್ಲೊಬ್ಬ ವ್ಯಕ್ತಿ ಅರಾಮವಾಗಿ ಕೂತು ಊಟ ಮಾಡಲು ಡೈನಿಂಗ ಟೇಬಲ್ ಇಲ್ಲ ಎಂಬ ಕಾರಣಕ್ಕೆ ಕಡಿಮೆ ಖರ್ಚಿನಲ್ಲಿ ಸೈಕಲ್ ಚಕ್ರದಿಂದ ಸಿಂಪಲ್ ಡೈನಿಂಗ್ ಟೇಬಲ್ ಒಂದನ್ನು ತಯಾರಿಸಿದ್ದಾನೆ. ಈ ವಿಡಿಯೋವನ್ನು @charaZila ಎಂಬ X ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇದು ವಿಶ್ವದ ಅತ್ಯುತ್ತಮ ದೇಸಿ ಡೈನಿಂಗ್ ಟೇಬಲ್” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೈಕಲ್ ಚಕ್ರವನ್ನೇ ಡೈನಿಂಗ್ ಟೇಬಲ್ ಮಾಡಿಕೊಂಡು ಅದ್ರಲ್ಲಿ  ಬಗೆ ಬಗೆಯ ಅಡುಗೆಗಳನ್ನು ಇಟ್ಟು, ತನಗೆ ಬೇಕಾದ ಪದಾರ್ಥಗಳನ್ನು ಪ್ಲೇಟ್ ಗೆ ಬಡಿಸಿ ಅರಾಮವಾಗಿ ಕುಳಿತುಕೊಂಡು ಊಟ ಮಾಡುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಫೋನ್ ಪೇ ಸ್ಕ್ಯಾನರ್ ಪ್ರಭಾವ ಎಷ್ಟಿದೆ ನೋಡಿ, ಇವರು ಡಿಜಿಟಲ್ ಭಿಕ್ಷುಕ 

ಫೆಬ್ರವರಿ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಒಂದು ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ.   ಒಬ್ಬ ಬಳಕೆದಾರರು ʼಇದು ಉತ್ತಮ ಜುಗಾಡ್ ಐಡಿಯಾʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದ್ಭುತʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಇದು ತುಂಬಾ ಕೂಲ್ ಐಡಿಯಾʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ನಮ್ಮ ದೇಶದಲ್ಲಿ ಇಂತಹ ಪ್ರತಿಭೆಗಳಿಗೆ ಯಾವುದೇ ರೀತಿಯ ಕೊರತೆಯಿಲ್ಲ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ