Viral Video: ಮಾಂಸಕ್ಕಾಗಿ ಮೊಸಳೆಗಳ ನಡುವೆ ಬಿಗ್ ಫೈಟ್, ಜಗಳದಲ್ಲಿ ಒಂದು ಮೊಸಳೆ ಕಾಲು ಕಟ್​​​

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದ್ರಲ್ಲಿ ಪ್ರಾಣಿಗಳ ನಡುವಿನ ಕಾದಾಟದ ದೃಶ್ಯಾವಳಿಗಳಂತೂ ನೋಡಲು ತುಂಬಾನೇ ಭಯಾನಕವಾಗಿರುತ್ತದೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಮಾಂಸದ ತುಂಡನ್ನು ತಿನ್ನುವ ಸಲುವಾಗಿ ಮೊಸಳೆಗಳೆರಡು ಜಗಳಕ್ಕೆ ಇಳಿದಿವೆ. ಮೊಸಳೆಗಳ ಈ ಫೈಟಿಂಗ್ ಸೀನ್ ಕಂಡು ನೋಡುಗರು ಶಾಕ್ ಆಗಿದ್ದಾರೆ. 

Viral Video: ಮಾಂಸಕ್ಕಾಗಿ ಮೊಸಳೆಗಳ ನಡುವೆ ಬಿಗ್ ಫೈಟ್, ಜಗಳದಲ್ಲಿ ಒಂದು ಮೊಸಳೆ ಕಾಲು ಕಟ್​​​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 08, 2024 | 7:42 PM

ಮೊಸಳೆಗಳೆಂದರೆ ಬಹುತೇಕ ಎಲ್ಲರಿಗೂ ಭಯ. ಕಾಡಿನಲ್ಲಿರುವ ಸಿಂಹ ಚಿರತೆ, ಹುಲಿ ಎಷ್ಟು ಅಪಾಯಕಾರಿ ಜೀವಿಗಳೋ ಅದೇ ರೀತಿ ನೀರಿನಲ್ಲಿರುವ ಮೊಸಳೆಗಳು ಕೂಡಾ ತುಂಬಾನೇ ಅಪಾಯಕಾರಿ. ನೀರಿನ ದಡದಲ್ಲಿ ಆಹಾರಕ್ಕಾಗಿ ಕಾದು ಕೂರುವ ಈ ಅಪಾಯಕಾರಿ ಮೊಸಳೆಗಳು  ಅದರ ಬಲೆಗೆ ಬೀಳುವ ಪ್ರಾಣಿಗಳು, ಮನುಷ್ಯರನ್ನು   ಕ್ಷಣ ಮಾತ್ರದಲ್ಲಿ ನುಂಗಿ ನೀರು ಕುಡಿದು ಬಿಡುತ್ತವೆ.  ಪ್ರತಿಕ್ಷಣವೂ ಆಹಾರಕ್ಕಾಗಿ ಹೊಂಚು ಹಾಕಿಕೊಂಡು ನೀರಿನಡಿ ಅಡಗಿ ಕೂರುವ ಮೊಸಳೆಗಳು ಮನುಷ್ಯರಿಂದ ಹಿಡಿದು, ದೈತ್ಯ ಆನೆಯ ಮೇಲೂ ಆಕ್ರಮಣ ನಡೆಸಿರುವ ನಿದರ್ಶನಗಳಿವೆ. ಆದ್ರೆ ನೀವು ಎಂದಾದರೂ ಮೊಸಳೆಗಳ ನಡುವಿನ ಫೈಟಿಂಗ್ ನೋಡಿದ್ದೀರಾ? ಮೊಸಳೆಗಳು ಹಿಂಡಿನಲ್ಲಿದ್ದಾಗ ಅವುಗಳು ಕೂಡಾ ನಮ್ಮಂತೆಯೇ ಕಿತ್ತಾಡಿಕೊಳ್ಳುತ್ತಾ ಅಂತ ನೀವು ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಸಿ ಮಾಂಸದ ತುಂಡನ್ನು ತಿನ್ನುವ ಸಲುವಾಗಿ ಮೊಸಳೆಗಳೆರಡು ಜಗಳಕ್ಕೆ ಇಳಿದಿವೆ. ಈ ದೃಶ್ಯವನ್ನು ಕೆಲ ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಮೃಗಾಲಯವೊಂದರಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ  ಈ  ವಿಡಿಯೋವನ್ನು @InsaneReality ಎಂಬ ಹೆಸರಿನ  X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಮೃಗಾಲಯದ ನಿರ್ವಾಹಕರೊಬ್ಬರು ಮೊಸಳೆಗಳ ಹಿಂಡಿಗೆ ಹಸಿ ಮಾಂಸದ ತುಂಡನ್ನು ಎಸೆಯುತ್ತಾರೆ. ಅಲ್ಲೇ ದೂರ ದೂರ ಕುಳಿತಿದ್ದಂತ ಮೊಸಳೆಗಳು ಮಾಂಸ ಎಸೆಯುತ್ತಿದ್ದಂತೆ ವೇಗವಾಗಿ ಮಾಂಸದ ತುಂಡಿನ ಬಳಿ ಬರಲು ಆರಂಭಿಸುತ್ತದೆ. ಆ ಸಂದರ್ಭದಲ್ಲಿ ಹಸಿದ ಮೊಸಳೆಯೊಂದು, ನೀನೆಲ್ಲಿ ಹೋಗ್ತಿದ್ದೀಯಾ, ಇಲ್ಲಿಯೇ ಇದ್ರೆ ಸರಿ ಇವಾಗ ಅಂತ ಹೇಳಿ ಕೋಪದಿಂದ ಇನ್ನೊಂದು ಮೊಸಳೆಯ ಕಾಲನ್ನು ಕಚ್ಚಿ  ಹಿಡಿಯುತ್ತದೆ. ಮೊಸಳೆಗಳ ಈ ಫೈಟಿಂಗ್ ಸೀನ್ ನೋಡಿ, ಮೃಗಾಲಯದಲ್ಲಿ ನೆರೆದಿದ್ದ ಪ್ರವಾಸಿಗರು ಫುಲ್ ಆಗಿದ್ದಾರೆ.

ಇದನ್ನೂ ಓದಿ: ಉತ್ಪನ್ನಗಳ ಬಗ್ಗೆ 3 ಸೆಕೆಂಡ್​​ ವಿಮರ್ಶೆ, ವಾರದಲ್ಲಿ ಈಕೆಗೆ 120 ಕೋಟಿ ರೂ. ಆದಾಯ

ಫೆಬ್ರವರಿ 08 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 8 ಸಾವಿರಕ್ಕೂ ಅಧಿಕ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಬಂದಿವೆ. ಒಬ್ಬ ಬಳಕೆದಾರರು ʼಆ ಮೊಸಳೆ ಬಹಳ ಕೋಪಗೊಂಡಿದೆ, ಅದೇ ಕಾರಣಕ್ಕೆ ಇನ್ನೊಂದು ಮೊಸಳೆಯ ಮೇಲೆ ಅಟ್ಯಾಕ್ ಮಾಡಿದೆʼ  ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼನರಭಕ್ಷಕ ಮೊಸಳೆʼ ಎಂಬ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ಮೊಸಳೆಗೆ ತುಂಬಾನೇ ಹೊಟ್ಟೆ ಹಸಿದಿರಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಬ್ಬಬ್ಬಾ ದೇವ್ರೇ ಈ ದೃಶ್ಯ ತುಂಬಾನೇ ಭಯಾನಕವಾಗಿದೆ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:40 pm, Thu, 8 February 24

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು