AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕತ್ತೆ ಚಾಲಿತ ಫ್ಯಾನ್ ಹೇಗಿದೆ ನೋಡಿ, ಆದರೆ ಇದು ಮೂಕ ಪ್ರಾಣಿಗಳಿಗೆ ಹಿಂಸೆ

ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಫ್ಯಾನ್ ಅಥವಾ ಎಸಿ ಇಲ್ಲದೆ ಮನೆಯ ಒಳಗೆ ಕೂರಲು ಸಾಧ್ಯವೇ ಇಲ್ಲ. ಈ ಸಮಯದಲ್ಲಂತೂ  ಹೆಚ್ಚಿನವರ  ಮನೆಯಲ್ಲಿ ದಿನದ 24 ಗಂಟೆಯೂ ಫ್ಯಾನ್ ಚಾಲು ಆಗುತ್ತಲೇ ಇರುತ್ತೆ. ಆದ್ರೆ ಇಲ್ಲೊಂದು ಪಾಕಿಸ್ತಾನಿ ಕುಟುಂಬವೊಂದು ಇಡೀ ದಿನ ಫ್ಯಾನ್ ಚಾಲು ಮಾಡಿದರೆ ಕರೆಂಟ್ ಬಿಲ್ ಕಟ್ಟುವವರ್ಯಾರು  ಎಂದು ದೇಸಿ ಉಪಾಯ ಮಾಡಿ, ಕತ್ತೆ ಚಾಲಿತ ಫ್ಯಾನ್ ಒಂದನ್ನು ತಯಾರಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಈ ವಿಡಿಯೋವನ್ನು ನೋಡಿ ಮೂಕ ಪ್ರಾಣಿಗಳಿಗೆ ತೊಂದರೆ ಕೊಡುವುದು ಎಷ್ಟು ಸರಿ ಎಂದು ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. 

Viral Video: ಕತ್ತೆ ಚಾಲಿತ ಫ್ಯಾನ್ ಹೇಗಿದೆ ನೋಡಿ, ಆದರೆ ಇದು ಮೂಕ ಪ್ರಾಣಿಗಳಿಗೆ ಹಿಂಸೆ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 08, 2024 | 2:02 PM

ಜುಗಾಡ್ ಐಡಿಯಾಗಳಿಗೆ ಸಂಬಂಧಿಸಿದ ವಿಡಿಯೋಗಳು ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತವೆ. ಕೆಲವರು ತಮ್ಮ  ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಭಿನ್ನ ಶೈಲಿಯ ಜುಗಾಡ್ ಐಡಿಯಾಗಳನ್ನು ಉಪಯೋಸಿಕೊಂಡು ಖರ್ಚಿಲ್ಲದೆ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಈ ಹಿಂದೆ ವ್ಯಕ್ತಿಯೊಬ್ಬ ಕೆಟ್ಟುಹೋದ ನೀರಿನ ಟ್ಯಾಂಕ್ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಶೌಚಾಲಯವನ್ನು ತಯಾರಿಸಿದಂತಹ, ವ್ಯಕ್ತೊಯೊಬ್ಬ ಯಾವುದೇ ಖರ್ಚಿಲ್ಲದೆ ಸೈಕಲ್ ಚಕ್ರದಿಂದ ಡೈನಿಂಗ್ ಟೇಬಲ್ ತಯಾರಿಸಿದಂತಹ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅಂತಹದ್ದೇ ದೇಸಿ ಜುಗಾಡ್ ವಿಡಿಯೋವೊಂದು ವೈರಲ್ ಆಗಿದ್ದು, ಪಾಕಿಸ್ತಾನಿ ಕುಟುಂಬವೊಂದು ಕತ್ತೆ ಚಾಲಿತ ಫ್ಯಾನ್ ಒಂದನ್ನು ತಯಾರಿಸಿದ್ದಾರೆ. ಹೌದು ವಿಶೇಷವಾಗಿ ಈ ಬೇಸಿಗೆಯಲ್ಲಿ ಫ್ಯಾನ್ ಇಲ್ಲದೆ ಮನೆಯೊಳಗೆ ಒಂದು ನಿಮಿಷವೂ ಇರಲು ಸಾಧ್ಯವಿಲ್ಲ. ದಿನದ 24 ಗಂಟೆಯು ಫ್ಯಾನ್ ಚಾಲು ಮಾಡಿದರೆ ಕರೆಂಟ್ ಬಿಲ್ ಕಟ್ಟುವವರ್ಯಾರು ಎಂಬ ಕಾರಣಕ್ಕೆ, ಈ ಕುಟುಂಬವು ಯಾವುದೇ ವೆಚ್ಚವಿಲ್ಲದೆ ಕತ್ತೆ ಚಾಲಿತ ಫ್ಯಾನ್ ಒಂದನ್ನು ತಯಾರಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಪ್ರಾಣಿ ಹಿಂಸೆ ಮಾಡಿದ್ದಕ್ಕಾಗಿ ಇವರುಗಳ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನದ ಹಳ್ಳಿಯೊಂದರಲ್ಲಿ, ಬಿಸಿಲಿನ ತಾಪದಿಂದ ಪಾರಾಗಲು ಕುಟುಂಬವೊಂದು ವಿನೂತನ ಪ್ರಯೋಗವನ್ನು ಮಾಡಿರುವುದನ್ನು ಕಾಣಬಹುದು. ಈ ಕುರಿತ ವಿಡಿಯೋವನ್ನು @singer.bhau.nath.ji ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಪೋಸ್ಟ್ ಮಾಡಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಪಾಕಿಸ್ತಾನದ ಹಳ್ಳಿಯೊಂದರಲ್ಲಿ ಕುಟುಂಬವೊಂದು ಬಯಲು ಪ್ರದೇಶದಲ್ಲಿ ಮಂಚದ ಮೇಲೆ ಮಲಗಿರುವುದನ್ನು ಕಾಣಬಹುದು. ಮತ್ತು ಬಿಸಿಲಿನ ತಾಪದಿಂದ ಪಾರಾಗಲು ದೇಸಿ ಫ್ಯಾನ್ ಅನ್ನು ಕೂಡಾ ಚಾಲು ಮಾಡಿದ್ದರು. ಕತ್ತೆಯು ತಿರುಗುತ್ತಿದ್ದಂತೆ ನಿಧಾನಕ್ಕೆ ಈ ಫ್ಯಾನ್ ಕೂಡಾ ಗಾಳಿ ಬೀಸುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಇಲ್ಲಿ ಇವರುಗಳು ನೆಮ್ಮದಿಯಿಂದ ಮಲಗಲು ಕತ್ತೆಗೆ ತೊಂದರೆ ಕೊಟ್ಟಿದ್ದಕ್ಕಾಗಿ ಹಲವರು ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಇದು ಪ್ರಪಂಚದಲ್ಲೇ ಅತ್ಯಂತ ಅಗ್ಗದ ದೇಸಿ ಡೈನಿಂಗ್ ಟೇಬಲ್, ಹೇಗಿದೆ ನೋಡಿ

ಜನವರಿ 29 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.8 ಮಿಲಿಯನ್ ವೀಕ್ಷಣೆಗಳನ್ನು  ಹಾಗೂ 90 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಯಾಕೆ ಈ ರೀತಿ ಪ್ರಾಣಿ ಹಿಂಸೆ ಮಾಡುತ್ತಿದ್ದಾರೆ, ನಿಜವಾಗಿಯೂ ಇದು ತಮಾಷೆಯ ರೀತಿ ಕಾಣೋದಿಲ್ಲʼ ಅಂತ ಕಿಡಿ ಕಾರಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮೂಕ ಪ್ರಾಣಿಗಳಿಗೆ ನೋವು ನೀಡಿ, ಇವರುಗಳು ನೆಮ್ಮದಿಯಿಂದ ಮಲಗಿದ್ದಾರೆ. ಒಂದು ಚೂರು ಕರುಣೆ ಬೇಡವೇʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪಾಪ ಆ ಕತ್ತೆ ಏನು ತಪ್ಪು ಮಾಡಿತ್ತು, ಅದಕ್ಕೆ ಯಾಕಿಷ್ಟು ನೋವು ಕೊಡುತ್ತೀರಿʼ ಅಂತ ಕೇಳಿದ್ದಾರೆ. ಇನ್ನೂ ಅನೇಕರು ಪ್ರಾಣಿ ಹಿಂಸೆ ಮಾಡುವುದು ಎಷ್ಟು ಸರಿ ಎಂದು ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ