White strawberry: ಬಿಳಿ ಸ್ಟ್ರಾಬೆರಿಯ ಬಗ್ಗೆ ನಿಮಗೆಷ್ಟು ಗೊತ್ತು? 1ಕೆಜಿಯ ಬೆಲೆ ಎಷ್ಟು ಗೊತ್ತಾ?
ಬಿಳಿ ಸ್ಟ್ರಾಬೆರಿಯನ್ನು ಮೊದಲು ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಪರಿಚಯಿಸಲಾಯಿತು. ಈ ಸ್ಟ್ರಾಬೆರಿಯ ಹೆಸರು ಫ್ಲೋರಿಡಾ ಪರ್ಲ್.ಈ ಬಿಳಿ ಸ್ಟ್ರಾಬೆರಿಯನ್ನು ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೆಳೆಸಲಾಗುತ್ತಿದೆ. ಶೀಘ್ರದಲ್ಲೇ ಈ ವಿಶೇಷ ಬಿಳಿ ಸ್ಟ್ರಾಬೆರಿ ಆನ್‌ಲೈನ್‌ನಲ್ಲಿಯೂ ಲಭ್ಯವಿರಲಿದೆ.
ಕೆಂಪು ಸ್ಟ್ರಾಬೆರಿಗಳು ಸಾಮಾನ್ಯವಾಗಿದೆ. ಆದರೆ ಬಿಳಿ ಸ್ಟ್ರಾಬೆರಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಅನಾದಿ ಕಾಲದಿಂದಲೂ ಬಿಳಿ ಸ್ಟ್ರಾಬೆರಿಗಳು ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಲ್ಲಿದೆ. 2010 ರ ದಶಕದ ಆರಂಭದಲ್ಲಿ ಬಿಳಿ ಸ್ಟ್ರಾಬೆರಿಗಳು ಹೆ್ಚು ಜನಪ್ರಿಯವಾಗಿವೆ. ಇವುಗಳು ಸಾಮಾನ್ಯವಾಗಿ ಬಿಳಿ ಮತ್ತು ತಿಳಿ ಗುಲಾಬಿ ಬಣ್ಣದಲ್ಲಿರುತ್ತವೆ. ಕೆಂಪು ಸ್ಟ್ರಾಬೆರಿಗಳಿಗಿಂತ ಈ ಬಿಳಿ ಸ್ಟ್ರಾಬೆರಿಗಳು ಹೆಚ್ಚು ಸಿಹಿ ರಸಭರಿತವಾಗಿದೆ. ಇದೀಗಾ ನಮ್ಮ ದೇಶದ ರೈತರೂ ಕೂಡ ಬಿಳಿ ಸ್ಟ್ರಾಬೆರಿ ಕೃಷಿ ಪ್ರಾರಂಭಿಸಿದ್ದಾರೆ.
ಮಹಾರಾಷ್ಟ್ರದ ರೈತರೊಬ್ಬರು ವಿಶೇಷ ಬಿಳಿ ಸ್ಟ್ರಾಬೆರಿ ಬೆಳೆದು ಭಾರೀ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಹಾಬಲೇಶ್ವರ, ಭಿಲಾರ್ ಪ್ರದೇಶಗಳಲ್ಲಿ ಸ್ಟ್ರಾಬೆರಿಗಳನ್ನು ಬೆಳೆಯಲಾಗುತ್ತದೆ. ಮೊತ್ತ ಮೊದಲ ಬಾರಿಗೆ ಸತಾರಾದ ಫುಲೇನಗರದ ರೈತ ಉಮೇಶ್ ಖಮ್ಕರ್ ಅರ್ಧ ಎಕರೆಯಲ್ಲಿ ಬಿಳಿ ಸ್ಟ್ರಾಬೆರಿ ಪ್ರಯೋಗ ಮಾಡಿದರು. ಅವರು ಮಾರುಕಟ್ಟೆಯಲ್ಲಿ ಈ ಸ್ಟ್ರಾಬೆರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಶೀಘ್ರದಲ್ಲೇ ಈ ವಿಶೇಷ ಬಿಳಿ ಸ್ಟ್ರಾಬೆರಿ ಆನ್‌ಲೈನ್‌ನಲ್ಲಿಯೂ ಲಭ್ಯವಿರಲಿದೆ.
ಬಿಳಿ ಸ್ಟ್ರಾಬೆರಿ ವಿಶೇಷತೆ:
ಈ ಸ್ಟ್ರಾಬೆರಿಯ ವಿಶೇಷತೆ ಎಂದರೆ ಇದರ ಬೆಲೆ ಕೆಜಿಗೆ 1000 ರಿಂದ 1500 ರೂಪಾಯಿಗಳವರೆಗೆ ಇರುತ್ತದೆ. ಈ ಸ್ಟ್ರಾಬೆರಿ ಇಳುವರಿ ಆರು ಪಟ್ಟು ಅಧಿಕವಾಗಿದ್ದು, ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಬಿಳಿ ಸ್ಟ್ರಾಬೆರಿ ಸಿಹಿಯಾಗಿದ್ದು ಅನಾನಸ್ ಪರಿಮಳವನ್ನು ಹೋಲುತ್ತದೆ.
ಇದನ್ನೂ ಓದಿ: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿಯನ್ ಮಾರಾಟ ನಿಷೇಧ
ಈ ಬಿಳಿ ಸ್ಟ್ರಾಬೆರಿಗಳ ಮೇಲೆ ಪ್ರಯೋಗ:
ಈ ಬಿಳಿ ಸ್ಟ್ರಾಬೆರಿಯನ್ನು ಮೊದಲು ಅಮೆರಿಕ ಮತ್ತು ಇಂಗ್ಲೆಂಡ್‌ನಲ್ಲಿ ಪರಿಚಯಿಸಲಾಯಿತು. ಈ ಸ್ಟ್ರಾಬೆರಿಯ ಹೆಸರು ಫ್ಲೋರಿಡಾ ಪರ್ಲ್.ಈ ಬಿಳಿ ಸ್ಟ್ರಾಬೆರಿಯನ್ನು ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಬೆಳೆಸಲಾಗುತ್ತಿದೆ. ಶೀಘ್ರದಲ್ಲೇ ಈ ಬಿಳಿ ಸ್ಟ್ರಾಬೆರಿ ಕೃಷಿಯನ್ನು ಇತರ ಪ್ರದೇಶಗಳಲ್ಲಿಯೂ ಪ್ರಾರಂಭಿಸಲಾಗುವುದು. ಸತಾರಾ ವಾಯ್‌ನ ರೈತ ಉಮೇಶ್ ಖಮ್ಕರ್ ಅವರು ಭಾರತದಲ್ಲಿ ಬಿಳಿ ಸ್ಟ್ರಾಬೆರಿಗಳನ್ನು ಬೆಳೆದ ಮೊದಲ ರೈತ ಎಂದು ಪ್ರಸಿದ್ಧರಾಗಿದ್ದಾರೆ. ಇದಕ್ಕಾಗಿ ಅವರು ಫ್ಲೋರಿಡಾ ವಿಶ್ವವಿದ್ಯಾಲಯದಿಂದ ರಾಯಲ್ಟಿ ಹಕ್ಕುಗಳನ್ನು ಖರೀದಿಸಿದ್ದರು. ಈಗ ಯಾರಾದರೂ ಅದನ್ನು ಭಾರತದಲ್ಲಿ ಬೆಳೆಸಲು ಬಯಸಿದರೆ ಆ ರೈತರು ವೈಟ್ ಸ್ಟಾಬ್ರರಿ ಕೃಷಿ ಮಾಡಲು ಉಮೇಶ್ ಖಮ್ಕರ್ ಅವರ ಬಳಿಯೇ ಖರೀದಿಸಬೇಕು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ