Gobi Manchurian Ban: ಭಾರತದ ಈ ನಗರದಲ್ಲಿ ಗೋಬಿ ಮಂಚೂರಿಯನ್ ಮಾರಾಟ ನಿಷೇಧ
ಗೋಬಿ ಪ್ರಿಯರಿಗೆ ಸರ್ಕಾರ ಕಹಿ ಸುದ್ದಿಯೊಂದನ್ನು ನೀಡಿದೆ. ನಾಲಿಗೆಗೆ ರುಚಿಯನ್ನು ನೀಡುವ ಗೋಬಿಯನ್ನು ಪ್ರಮುಖ ಪ್ರವಾಸ ತಾಣವಾದ ಗೋವಾದ ಮಪುಸಾ ನಗರದಲ್ಲಿ ಮಾರಾಟ ಮಾಡದಂತೆ ನಿಷೇದ ಹೇರಲಾಗಿದೆ. ಇದಲ್ಲದೇ ನಿಯಮ ಉಲ್ಲಂಘಿಸಿ ಮಾರಾಟ ಮಾಡಿದರೆ,ವ್ಯಾಪಾರದ ಲೈಸೆನ್ಸ್ ಕೂಡ ರದ್ದಾಗಲಿದೆ ಎಂದು ಆದೇಶ ಹೊರಡಿಸಲಾಗಿದೆ.
ಗೋಬಿ ಮಂಚೂರಿಯನ್(Gobi Manchurian) ಸಾಕಷ್ಟು ಜನರ ಅಚ್ಚು ಮೆಚ್ಚಿನ ಫುಡ್. ಇದೀಗಾ ಗೋಬಿ ಪ್ರಿಯರಿಗೆ ಸರ್ಕಾರ ಕಹಿ ಸುದ್ದಿಯೊಂದನ್ನು ನೀಡಿದೆ. ಹೌದು, ಗೋವಾದ ಮಪುಸಾ ನಗರದಲ್ಲಿ ಯಾವುದೇ ಅಂಗಡಿಗಳಲ್ಲಿ ಗೋಬಿ ಮಂಚೂರಿಯನ್ ಮಾರಾಟ ಮಾಡುವಂತಿಲ್ಲ ಎಂದು ಮಪುಸಾ ಮುನ್ಸಿಪಲ್ ಕೌನ್ಸಿಲ್ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ. ಇದಲ್ಲದೇ ಮಾರಾಟ ನಿಷೇಧದ ನಿಯಮವನ್ನು ಮೀರಿ ಮಂಚೂರಿಯನ್ ಮಾರಾಟ ಮಾಡಿದರೆ,ವ್ಯಾಪಾರದ ಲೈಸೆನ್ಸ್ ಕೂಡ ರದ್ದಾಗಲಿದೆ ಎಂದು ಆದೇಶ ಹೊರಡಿಸಲಾಗಿದೆ.
ನಾಲಿಗೆಗೆ ರುಚಿಯನ್ನು ನೀಡುವ ಗೋಬಿ ಆರೋಗ್ಯಕ್ಕೆ ಎಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂಬದನ್ನು ತಿಳಿದು ಈ ನಿಷೇಧದ ತೀರ್ಮಾನಕ್ಕೆ ಸರ್ಕಾರ ಬಂದಿದೆ.
ಇದನ್ನೂ ಓದಿ: 1 ಕಪ್ ಬೇಳೆ ಸಾರಿನ ಬೆಲೆ 25 ಸಾವಿರ ರೂ. ಯಾಕಿಷ್ಟು ದುಬಾರಿ?; ವಿಡಿಯೋ ವೈರಲ್
ಗೋಬಿ ತಯಾರಿಕೆಯಲ್ಲಿ ಬಳಸುವ ರುಚಿಕಾರಕ, ಕೃತಕ ಬಣ್ಣ, ಕಡಿಮೆ ಬೆಲೆಯ ಸಾಸ್ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುವ ಪರಿಣಾಮ ಹಾಗೂ ಶುಚಿತ್ವ, ನೈರ್ಮಲ್ಯದ ಬಗ್ಗೆ ಹಲವು ದೂರುಗಳು ಆಧಾರದ ಮೇಲೆ ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗೋಬಿ ಮಂಚೂರಿಯನ್ ಮಾರಾಟ ನಿಷೇಧಿಸಿದ್ದು ಇದೇ ಮೊದಲೇನಲ್ಲಾ.2022 ರಲ್ಲಿ, ಗುಜರಾತ್ನ ಜುನಾಗಢ ಜಿಲ್ಲೆಯ ಶ್ರೀ ದಾಮೋದರ್ ದೇವಸ್ಥಾನದಲ್ಲಿ ವಾಸ್ಕೋ ಸಪ್ತಾಹ ಮೇಳದ ಸಂದರ್ಭದಲ್ಲಿ ಗೋಬಿ ಮಂಚೂರಿಯನ್ ಮಾರಾಟದ ಅಂಗಡಿಗಳನ್ನು ನಿರ್ಬಂಧಿಸಲು ಸೂಚನೆಗಳನ್ನು ನೀಡಲಾಗಿತ್ತು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ