ದಿನನಿತ್ಯ ಸಂಗೀತ ಕೇಳುವ ಅಭ್ಯಾಸವಿದೆಯೇ? ಇದರಿಂದ ಆರೋಗ್ಯ ಪ್ರಯೋಜನಗಳು ಅಧಿಕ!
ಸಂಗೀತ ಯಾರಿಗೆ ಇಷ್ಟ ಹೇಳಿ? ಖುಷಿಯಾಗಲಿ, ದುಃಖವಾಗಲಿ ಈ ಸಮಯದಲ್ಲಿ ಹೆಚ್ಚಿನವರು ಸಂಗೀತವನ್ನು ಕೇಳಲು ಇಷ್ಟ ಪಡುತ್ತಾರೆ. ನೋವಿಗೆ ಸಂಗಾತಿಯಾಗಿ ನಿಲ್ಲುವುದು ಸಂಗೀತ. ದುಃಖದ ಸಮಯದಲ್ಲಿ ಸಂಗೀತ ಕೇಳುವುದರಿಂದ ಮನಸ್ಸು ನಿರಾಳವಾಗಿ, ರಿಫ್ರೆಶ್ ನೆಸ್ ಸಿಗುತ್ತದೆ. ಅದರಲ್ಲಿ ಒತ್ತಡದ ಜೀವನದ ನಡುವೆ ಬಿಡುವು ಮಾಡಿಕೊಂಡು ಸಂಗೀತ ಕೇಳಿದರೆ ಮನಸ್ಸು ನಿರಾಳವಾಗಿ ದೇಹವು ಹಗುರವಾದಂತೆ ಆಗುತ್ತದೆ.
ಸಂಗೀತ ಯಾರಿಗೆ ಇಷ್ಟ ಹೇಳಿ? ಖುಷಿಯಾಗಲಿ, ದುಃಖವಾಗಲಿ ಈ ಸಮಯದಲ್ಲಿ ಹೆಚ್ಚಿನವರು ಸಂಗೀತವನ್ನು ಕೇಳಲು ಇಷ್ಟ ಪಡುತ್ತಾರೆ. ನೋವಿಗೆ ಸಂಗಾತಿಯಾಗಿ ನಿಲ್ಲುವುದು ಸಂಗೀತ. ದುಃಖದ ಸಮಯದಲ್ಲಿ ಸಂಗೀತ ಕೇಳುವುದರಿಂದ ಮನಸ್ಸು ನಿರಾಳವಾಗಿ, ರಿಫ್ರೆಶ್ ನೆಸ್ ಸಿಗುತ್ತದೆ. ಅದರಲ್ಲಿ ಒತ್ತಡದ ಜೀವನದ ನಡುವೆ ಬಿಡುವು ಮಾಡಿಕೊಂಡು ಸಂಗೀತ ಕೇಳಿದರೆ ಮನಸ್ಸು ನಿರಾಳವಾಗಿ ದೇಹವು ಹಗುರವಾದಂತೆ ಆಗುತ್ತದೆ.
ಸಂಗೀತ ಕೇಳುವುದರಿಂದ ಆಗುವ ಪ್ರಯೋಜನಗಳಿವು:
ಒತ್ತಡಕ್ಕೆ ಮುಕ್ತಿ ದೊರೆಯುತ್ತದೆ:
ನಾವಿಂದು ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿದ್ದೇವೆ. ಹೀಗಾಗಿ ಬೇರೆಯವರ ಜೊತೆಗೆ ಬೆರೆಯಲು ಸಮಯವಿಲ್ಲದೇ ಒತ್ತಡದ ಜೀವನವನ್ನು ಅನುಭವಿಸುತ್ತಿದ್ದೇವೆ. ಒತ್ತಡ ನಡುವೆ ಪ್ರತಿನಿತ್ಯ ಸಂಗೀತವನ್ನು ಕೇಳುವುದರಿಂದ ಒತ್ತಡವು ಕಡಿಮೆಯಾಗಿ ಮನಸ್ಸು ನಿರಾಳವಾಗುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಒತ್ತಡದ ಹಾರ್ಮೋನ್ಗಳು ಕಡಿಮೆಯಾಗಿ ಆರಾಮದಾಯಕವೆನಿಸುತ್ತದೆ.
ಖಿನ್ನತೆಯು ದೂರವಾಗುತ್ತದೆ :
ಇತ್ತೀಚೆಗಿನ ಜನರು ತುಂಬಾ ಸೂಕ್ಷ್ಮ ಮನಸ್ಸಿನವರಾಗಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಂದ ಖಿನ್ನತೆಗೆ ಜಾರುತ್ತಿದ್ದಾರೆ. ರಾತ್ರಿ ಮಲಗುವ ಮುನ್ನ ಸಂಗೀತವನ್ನು ಕೇಳಿಕೊಂಡು ಮಲಗುವುದರಿಂದಲೂ ಮನಸು ನಿರಾಳವಾಗುತ್ತದೆ. ಖಿನ್ನತೆಯಿಂದ ಬಳಲುತ್ತಿರುವವರಿಗೆ ಸಂಗೀತವು ಔಷಧಿಯಾಗಿ ಕೆಲಸ ಮಾಡುತ್ತದೆ.
ಜ್ಞಾಪಕಶಕ್ತಿ ಹೆಚ್ಚಳಕ್ಕೆ ಸಹಕಾರಿ :
ದಿನನಿತ್ಯ ಸಂಗೀತ ಕೇಳುವ ಅಭ್ಯಾಸವನ್ನು ರೂಢಿಸಿಕೊಂಡರೆ ನೆನಪಿನ ಶಕ್ತಿಯು ವೃದ್ಧಿಸುತ್ತದೆ. ಈ ಸಂಗೀತವು ಮೆದುಳನ್ನು ಸಕ್ರಿಯಗೊಳಿಸಿ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಹೆಚ್ಚು ಹಸಿವಾಗುವಿಕೆಯನ್ನು ತಡೆಯುತ್ತದೆ :
ಕೆಲವು ವಿಪರೀತವಾಗಿ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ರಾತ್ರಿಯ ವೇಳೆಯಲ್ಲಿ ಊಟದ ಸಮಯದಲ್ಲಿ ಸಂಗೀತ ಕೇಳುತ್ತಿದ್ದರೆ ಆಹಾರ ಸೇವಿಸುವುದನ್ನು ಪ್ರಮಾಣವನ್ನು ಕಡಿಮೆ ಮಾಡಬಹುದು. ಸಂಗೀತ ಕೇಳುವುದರಿಂದ ಹೆಚ್ಚು ಕ್ಯಾಲೋರಿ ಇರುವ ಆಹಾರ ಸೇವನೆಯನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ಗಂಡನ ಬೆವರಿನ ವಾಸನೆ ತಡೆಯಲಾರದೆ ವಿಚ್ಛೇದನ ನೀಡಿದ ಪತ್ನಿ
ಸಂತೋಷದ ಹಾರ್ಮೋನು ಬಿಡುಗಡೆಗೆ ಸಹಕಾರಿ :
ಸಂಗೀತ ಕೇಳುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಈ ಸಂಗೀತವನ್ನು ಕೇಳುವುದರಿಂದ ಎಂಡಾರ್ಫಿನ್, ಆಕ್ಸಿಟೋಸಿನ್, ಸಿರೊಟೋನಿನ್, ಡೋಪಮೈನ್ ಇ ಹಾರ್ಮೋನ್‌ಗಳ ಮಟ್ಟ ಹೆಚ್ಚಾಗಿ ಸಂತೋಷವಾಗುತ್ತದೆ.
ನಿದ್ರಾಹೀನತೆ ಸಮಸ್ಯೆಯು ದೂರ:
ಕೆಲವರಿಗೆ ನಿದ್ರಾಹೀನತೆಯ ಸಮಸ್ಯೆಯು ಕಾಡುತ್ತಿರುತ್ತದೆ. ರಾತ್ರಿ ವೇಳೆ ನಿದ್ರೆ ಬಾರದೆ ಹೋದರೆ ಹಾಡನ್ನು ಕೇಳುವ ಅಭ್ಯಾಸವನ್ನು ಬೆಳೆಸಿಕೊಂಡರೆ ನಿದ್ರಾ ಹೀನತೆ ಸಮಸ್ಯೆಯು ನಿಧಾನವಾಗಿ ದೂರವಾಗುತ್ತದೆ.
ಏಕಾಗ್ರತೆಯು ಹೆಚ್ಚುತ್ತದೆ :
ಯಾವುದೇ ಕೆಲಸ ಮೇಲೆ ಗಮನ ಹರಿಸಲು ಸಾಧ್ಯವಿಲ್ಲ ಎನ್ನುವವರಿಗೆ ಈ ಸಂಗೀತ ಕೇಳುವ ಅಭ್ಯಾಸವು ಬೆಸ್ಟ್ ಹಾಡುಗಳನ್ನು ಕೇಳಿದರೆ ಸಾಕಾರಾತ್ಮಕ ವಾತಾವರಣವು ಸೃಷ್ಟಿಯಾಗಿ, ಕೆಲಸದ ಮೇಲೆ ಗಮನ ಹರಿಸಲು ಸಹಾಯಕವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ