Safer Internet Day: ಫೆ. 6 ಅಂತರ್ಜಾಲ ಸುರಕ್ಷಿತ ದಿನ; ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲ

ಆಧುನಿಕ ಜಗತ್ತಿಗೆ ಒಗ್ಗಿಕೊಂಡಿರುವ ನಾವುಗಳು ಎಲ್ಲದರಲ್ಲಿ ಹೊಸತನವನ್ನು ಬಯಸುತ್ತಿದ್ದೇವೆ. ಅಭಿವೃದ್ಧಿ ಹೊಂದುತ್ತಿದ್ದಂತೆ ಅಂತರ್ಜಾಲವು ಜನರ ಜೀವನದ ಬಹುಮುಖ್ಯ ಅಂಗವಾಗಿದೆ. ಕುಳಿತಲ್ಲಿಯೇ ಎಲ್ಲಾ ದೇಶದ ಜನರ ಜೊತೆಗೆ ಸಂಪರ್ಕ ಹೊಂದುವ ಮಟ್ಟಿಗೆ ಅಭಿವೃದ್ಧಿ ಹೊಂದಿದ್ದೇವೆ. ಹೀಗಾಗಿ ಪ್ರತಿ ವರ್ಷವು ಫೆಬ್ರವರಿ ತಿಂಗಳ ಎರಡನೇ ವಾರದ ಎರಡನೇ ದಿನ ಮಂಗಳವಾರದಂದು ಅಂತರ್ಜಾಲ ಸುರಕ್ಷಿತ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 6 ರಂದು ಅಂತರ್ಜಾಲ ಸುರಕ್ಷಿತ ದಿನವನ್ನು ಆಚರಿಸಲಾಗುತ್ತಿದೆ.

Safer Internet Day: ಫೆ. 6 ಅಂತರ್ಜಾಲ ಸುರಕ್ಷಿತ ದಿನ; ಜನರ ಜೀವನದ ಅವಿಭಾಜ್ಯ ಅಂಗವಾಗಿರುವ ಅಂತರ್ಜಾಲ
Safer Internet Day Image Credit source: Pinterest
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Feb 05, 2024 | 6:12 PM

ಅಭಿವೃದ್ಧಿ ಹೊಂದುತ್ತ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆ ಜನರ ಜೀವನದಲ್ಲಿ ಬದಲಾವಣೆಗಳು ಆಗಿವೆ. ಈ ಆಧುನಿಕ ಯುಗದಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆಯು ಹೆಚ್ಚಾಗುತ್ತಿವೆ. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸ್ಮಾರ್ಟ್ ಫೋನ್ ಗಳ ಬಳಸುತ್ತಿದ್ದಂತೆ ಅಂತರ್ಜಾಲ ಎನ್ನುವುದು ವ್ಯಾಪಾಕವಾಗಿ ಬೆಳೆದಿದೆ. ಜಾಗತಿಕ ಅನುಪಾತಕ್ಕೆ ಹೋಲಿಕೆ ಮಾಡಿದರೆ ಭಾರತೀಯರು ಇಂಟರ್ನೆಟ್ ಬಳಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂತರ್ಜಾಲ ಜನಜೀವನದಲ್ಲಿ ಸೇರಿಕೊಂಡ ಬಳಿಕವಂತೂ ಎಲ್ಲರ ಜೀವನ ಕ್ರಮವೇ ಬದಲಾಗಿವೆ. ಆದರೆ ಅಂತರ್ಜಾಲದಲ್ಲಿ ಒಳಿತು ಹಾಗೂ ಕೆಡುಕುಗಳ ಬಗ್ಗೆ ತಿಳಿದಿದ್ದರೂ ಬಳಕೆ ಮಾಡುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ “ಸುರಕ್ಷಿತ ಅಂತರ್ಜಾಲ ದಿನ’ವನ್ನು ಆಚರಿಸಲಾಗುತ್ತಿದೆ.

ಅಂತರ್ಜಾಲ ಸುರಕ್ಷಿತ ದಿನದ ಇತಿಹಾಸ:

ಈ ವರ್ಷ ಫೆಬ್ರವರಿ 6 ರಂದು ಅಂತರ್ಜಾಲ ಸುರಕ್ಷಿತ ದಿನವನ್ನು ಆಚರಿಸಲಾಗುತ್ತಿದೆ. 2004 ರಲ್ಲಿ EU ಸೇಫ್‌ಬಾರ್ಡರ್ಸ್ ಪ್ರಾಜೆಕ್ಟ್‌ನ ಉಪಕ್ರಮವಾಗಿ ಈ ದಿನವನ್ನು ಪ್ರಾರಂಭಿಸಲಾಯಿತು. ಇದನ್ನು ಇನ್‌ಸೇಫ್ ನೆಟ್‌ವರ್ಕ್ ತನ್ನ ಆರಂಭಿಕ ಕ್ರಮಗಳಲ್ಲಿ ಒಂದಾಗಿ 2005 ರಲ್ಲಿ ತೆಗೆದುಕೊಂಡಿತು. ಈ ದಿನವನ್ನು ಜಗತ್ತಿನಾದ್ಯಂತ ಸುಮಾರು 180 ಕ್ಕೂ ಅಧಿಕ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಆಚರಿಸುತ್ತಿದೆ. ಈ ದಿನದಂದು ಆನ್‌ಲೈನ್ ಸಮಸ್ಯೆಗಳು ಮತ್ತು ಇದರ ಬಳಕೆಯಿಂದ ಬಳಕೆದಾರರ ಮೇಲಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ಇದನ್ನೂ ಓದಿ: 1 ಕಪ್​​​​ ಬೇಳೆ ಸಾರಿನ ಬೆಲೆ 25 ಸಾವಿರ ರೂ. ಯಾಕಿಷ್ಟು ದುಬಾರಿ?; ವಿಡಿಯೋ ವೈರಲ್

ಅಂತರ್ಜಾಲ ಸುರಕ್ಷಿತ ದಿನದ ಮಹತ್ವ:

ಪ್ರತಿ ವರ್ಷವು ಫೆಬ್ರವರಿ ತಿಂಗಳ ಎರಡನೇ ವಾರದ ಎರಡನೇ ದಿನ ಮಂಗಳವಾರದಂದು ಅಂತರ್ಜಾಲ ಸುರಕ್ಷಿತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಫೆಬ್ರವರಿ 6 ರಂದು ಅಂತರ್ಜಾಲ ಸುರಕ್ಷಿತ ದಿನವನ್ನು ಆಚರಿಸಲಾಗುತ್ತಿದೆ. ಲಕ್ಷಾಂತರ ಬಳಕೆದಾರರು ಪ್ರತಿದಿನ ಸಾವಿರಾರು ಹೊಸ ವೆಬ್‌ಸೈಟ್‌ಗಳಲ್ಲಿ ಮಾಹಿತಿಯನ್ನು ಕಲೆ ಹಾಕುತ್ತಾರೆ. ಆದರೆ ಆಧುನಿಕ ಯುಗದಲ್ಲಿ ಇಂಟರ್ನೆಟ್ ಒಳಿತು ಕೆಡುಕುಗಳ ಬಗ್ಗೆ ತಿಳಿದಿರುವುದು ಅತ್ಯಗತ್ಯ. ಈ ದಿನವನ್ನು ಉತ್ತಮ ಇಂಟರ್ನೆಟ್‌ಗಾಗಿ ಒಟ್ಟಿಗೆ ಎನ್ನುವ ಥೀಮ್‌ನೊಂದಿಗೆ, ಇಂಟರ್ನೆಟ್ ಅನ್ನು ಎಲ್ಲರಿಗೂ ಸುರಕ್ಷಿತ ಮತ್ತು ಉತ್ತಮ ಸ್ಥಳವನ್ನಾಗಿ ಮಾಡುವುದು. ವಿಶೇಷವಾಗಿ ಮಕ್ಕಳು ಮತ್ತು ಯುವಜನರಿಗೆ ಒಟ್ಟಿಗೆ ಸೇರಿಸಲು ಪ್ರಯತ್ನಿಸಲಾಗುತ್ತಿದೆ. ಆನ್‌ಲೈನ್ ಸುರಕ್ಷತೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವುದಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್