Valentine’s Day: ಪ್ರೇಮಿಗಳ ದಿನದಂದು ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಈ ಟಿಪ್ಸ್ ಪಾಲಿಸಿ

ಪ್ರೇಮಿಗಳ ದಿನ, ಇದು ಪ್ರೇಮಿಗಳಿಗಾಗಿಯೇ ಮೀಸಲಾಗಿರುವ ದಿನವಾಗಿದೆ. ಈ ದಿನದಂದು ಕೆಲವರು ತಮ್ಮ ಮನಸ್ಸಿರುವ ಪ್ರೀತಿಯನ್ನು ಹೇಳಕೊಳ್ಳುವ ಮೂಲಕ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಇದೆ. ಪ್ರತಿಯೊಬ್ಬ ಪ್ರೇಮಿಯು ಫೆಬ್ರವರಿ 14 ರಂದು ತಮ್ಮ ಪ್ರೀತಿ ಪಾತ್ರರನ್ನು ಮೆಚ್ಚಿಸಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಈ ದಿನ ನಿಮ್ಮ ಪ್ರೇಮಿಯ ಅಥವಾ ಸಂಗಾತಿಯ ಮನಸ್ಸನ್ನು ಗೆಲ್ಲಬೇಕೆಂದುಕೊಂಡಿದ್ದರೆ ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಉತ್ತಮ.

Valentine's Day: ಪ್ರೇಮಿಗಳ ದಿನದಂದು ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಈ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Feb 07, 2024 | 11:42 AM

ಪ್ರೀತಿ ಎನ್ನುವುದು ಎರಡು ಅಕ್ಷರವಲ್ಲ, ಎರಡು ಮನಸ್ಸುಗಳ ಮಿಲನ. ಈ ಪ್ರೀತಿಯನ್ನು ಎಂದು ವಿವರಿಸಲು ಸಾಧ್ಯವಿಲ್ಲ. ಜೀವಕ್ಕಿಂತ ಜೀವ ಎನ್ನುವಂತೆ ಇರುವ ಎರಡು ಜೀವಗಳಿಗೆ ಈ ಫೆಬ್ರವರಿ 14 ಸಂಭ್ರಮದ ದಿನ. ಹೀಗಾಗಿ ಪ್ರೇಮಿಗಳ ದಿನದಂದು (Valentine’s Day) ಪ್ರೇಯಸಿಗೆ ಉಡುಗೊರೆಗಳನ್ನು ನೀಡುವುದು ಸಹಜ. ಆದರೆ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಈ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ನೀಡುವ ಕೆಲವು ಗಿಫ್ಟ್ ಗಳು ಮುಂದೊಂದು ದಿನ ಅವರ ಬದುಕಿನಲ್ಲಿ ಸುಂದರವಾದ ನೆನಪುಗಳಾಗಿ ಉಳಿಯುತ್ತವೆ. ಆದರೆ ಪ್ರೇಮಿಯಾಗಿ ಗೆಳತಿಯನ್ನು ವಿವಿಧ ರೀತಿಯಲ್ಲಿ ಮನಸ್ಸನ್ನು ಗೆಲ್ಲಬಹುದು.

ನಿಮ್ಮ ಪ್ರೇಯಸಿಯನ್ನು ಈ ರೀತಿಯಾಗಿ ಇಂಪ್ರೆಸ್ ಮಾಡಿ

* ಉಡುಗೊರೆಯಾಗಿ ರಿಂಗ್ ನೀಡಿ : ಉಂಗುರ ಪ್ರೀತಿಯ ಸಂಕೇತವಾಗಿದ್ದು, ಹೀಗಾಗಿ ನಿಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಉಂಗುರವನ್ನು ನೀಡಿ. ಉಂಗುರವನ್ನು ಆಯ್ಕೆಮಾಡಿಕೊಳ್ಳುವಾಗ ಟ್ರೆಂಡ್ ನಲ್ಲಿರುವ ರಿಂಗ್ ಗಳ ಡಿಸೈನ್ ನತ್ತ ಗಮನ ಕೊಡಿ. ಬೆಳ್ಳಿ ಅಥವಾ ಚಿನ್ನದ ಉಂಗುರ ನೀಡುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮ್ಮ ಪ್ರೇಯಸಿ ಅಥವಾ ಸಂಗಾತಿಗೆ ಈ ಗಿಫ್ಟ್ ಮೂಲಕ ಹೇಗೆ ಇಂಪ್ರೆಸ್ ಮಾಡುತ್ತೀರಿ ಎನ್ನುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

* ಗೇಮ್​​​ಗಳನ್ನು ಆಡಿಸಿ, ಗಿಫ್ಟ್ ನೀಡಿ : ಒಂದು ವೇಳೆ ನಿಮ್ಮ ಪ್ರೇಮಿ ಗೇಮ್ ಪ್ರಿಯರಾಗಿದ್ದರೆ ಒಂದಷ್ಟು ಚಟುವಟಿಕೆಗಳನ್ನು ಮಾಡಿಸುತ್ತ ಅವರಿಗಿಷ್ಟವಾದ ಉಡುಗೊರೆಗಳನ್ನು ನೀಡುತ್ತಾ ಹೋಗುವುದು ಒಳ್ಳೆಯದು. ಈ ಚಟುವಟಿಕೆಯೊಂದಿಗೆ ನೀಡುವ ಗಿಫ್ಟ್ ಪ್ರೇಯಸಿಯ ಖುಷಿಗೆ ಕಾರಣವಾಗುತ್ತದೆ.

* ಪ್ರೇಯಸಿಯೊಂದಿಗೆ ಔಟ್ ಹೋಗಿ: ವ್ಯಾಲೆಂಟೈನ್ಸ್ ಡೇಯಂದು ಪ್ರೇಯಸಿಯೊಂದಿಗೆ ಸಿನಿಮಾವನ್ನು ವೀಕ್ಷಿಸಲು ತೆರಳಿ. ಇಲ್ಲದಿದ್ದರೆ ಕ್ಯಾಂಡಲ್ ನೈಟ್ ಡಿನ್ನರ್, ಪಾರ್ಟಿ ಅರೆಂಜ್ ಮಾಡಿ ನಿಮ್ಮ ಮನದರಸಿಯನ್ನು ಸಂತೋಷ ಪಡಿಸಬಹುದು.

* ಕೆಲಸದ ಸ್ಥಳಕ್ಕೆ ಹೂಗುಚ್ಛಗಳನ್ನು ಕಳುಹಿಸಿ : ನಿಮ್ಮ ಸಂಗಾತಿ ಅಥವಾ ಪ್ರೇಯಸಿಯ ಮನಸ್ಸು ಗೆಲ್ಲಲು ಬಯಸಿದರೆ ಅವರಿಗೆ ಸರ್ಪ್ರೈಸ್ ಆಗಿ ಅವರು ಕೆಲಸ ಮಾಡುವ ಆಫೀಸಿಗೆ ಹೂಗುಚ್ಛಗಳನ್ನು ಕಳುಹಿಸಿಕೊಡಿ. ನೀವು ಹೀಗೆ ಮಾಡಿದ್ದಲ್ಲಿ ತಮಗಾದ ಸಂತೋಷವನ್ನು ತನ್ನ ಸಹದ್ಯೋಗಿಗಳ ಬಳಿ ಹೇಳಿಕೊಂಡು ಖುಷಿ ಪಡುತ್ತಾರೆ.

ಇದನ್ನೂ ಓದಿ: ನಿಮ್ಮಿಷ್ಟದವರಿಗೆ ಪ್ರಪೋಸ್ ಮಾಡುವಾಗ ಈ ಗಿಫ್ಟ್ ಕೊಟ್ಟು ಸರ್​ಪ್ರೈಸ್ ನೀಡಿ

* ಪ್ರೇಮ ಪತ್ರ ಬರೆಯಿರಿ: ಪ್ರೇಮಿಗಳ ದಿನದಂದು ಪ್ರೇಮ ಪತ್ರ ಬರೆದು ಪ್ರೇಯಸಿಗೆ ನೀಡುವುದರಿಂದ ಆಕೆಯು ಬೇಗನೇ ಇಂಪ್ರೆಸ್ ಆಗುತ್ತಾಳೆ. ಈ ಲವ್ ಲೆಟರ್ ನಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಆ ಪತ್ರವು ಓದಿದ ಕೂಡಲೇ ಗೆಳತಿಯು ಖುಷಿಯಾಗುವ ರೀತಿಯಿರಲಿ. ಈ ಪ್ರೇಮ ಪತ್ರದಲ್ಲಿ ಪ್ರೇಯಸಿ ಮನಸ್ಸು ಗೆಲ್ಲುವ ರೀತಿ ಕವನಗಳಿದ್ದರೆ ಇನ್ನು ಒಳ್ಳೆಯದು.

*ಟ್ರಿಪ್ ಕೈಗೊಳ್ಳಿ : ಪ್ರೇಮಿಗಳ ದಿನದಂದು ಗೆಳತಿಯೊಂದಿಗೆ ಟ್ರಿಪ್ ಹೋಗುವುದು ಒಳ್ಳೆಯದು. ಈ ವೇಳೆ ಪ್ರೇಯಸಿಯನ್ನು ಆಕೆಯ ಫೇವರಿಟ್ ಸ್ಥಳಕ್ಕೆ ಟ್ರಿಪ್ ಹೋಗಿ ಸರ್ಪ್ರೈಸ್ ನೀಡಿದರೆ ಬೇಗನೇ ಇಂಪ್ರೆಸ್ ಆಗುತ್ತಾಳೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Wed, 7 February 24