Viral Video : ನಿಮ್ಮ ಬಾಲ್ಯ ನೆನಪಿಸಿಕೊಳ್ಳಿ. ಒಂದು ಇಂಜೆಕ್ಷನ್ ತೆಗೆದುಕೊಳ್ಳಬೇಕೆಂದರೆ ನಿಮ್ಮ ಅಪ್ಪ ಅಮ್ಮ ಅದೆಷ್ಟು ಸರ್ಕಸ್ ಮಾಡಬೇಕಾಗುತ್ತಿತ್ತು. ದೊಡ್ಡವರಾದ ಮೇಲೆ ಕೂಡ ಅನೇಕರು ಇಂಜೆಕ್ಷನ್ ಎಂದರೆ ಹೆದರುತ್ತಾರೆ. ಇನ್ನು ಪುಟ್ಟ ಮಕ್ಕಳನ್ನು ಹೇಗೆ ಸಂಭಾಳಿಸುವುದು? ಸಾಮಾನ್ಯವಾಗಿ ಮಕ್ಕಳ ಡಾಕ್ಟರ್ ಅನ್ನು ನೀವು ಗಮನಿಸಿರುತ್ತೀರಿ. ಮಗುವಿನ ಗಮನ ಬೇರೆಡೆ ಸೆಳೆದು ಪಟ್ಟನೆ ಇಂಜೆಕ್ಷನ್ ಚುಚ್ಚಿ ಉಕ್ಕುವ ಕಣ್ಣೀರನ್ನು ಹಾಗೇ ಇಂಗಿಸಿಬಿಡುವುದು. ಈಗ ವೈರಲ್ ಆಗಿರುವ ಈ ವಿಡಿಯೋ ಅಂಥದ್ದೇ.
ಮಕ್ಕಳ ವೈದ್ಯ ಡಾ ಸೈಯದ್ ಮುಜಾಹಿದ್ ಹುಸೇನ್ ಎನ್ನುವವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಆರು ತಿಂಗಳ ಮಗು ಮಾತ್ರ ಅದ್ಭುತ, ನಾವು ದೊಡ್ಡವರು ಅಂಜುಬುರುಕರು’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ತನಕ ಸುಮಾರು 9.8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಡಾಕ್ಟರ್ ಆಗಬೇಕೆಂದುಕೊಂಡಿರುವ ನನ್ನ ಅಂಕಲ್ ಮಗಳಿಗೆ ಈ ವಿಡಿಯೋ ತೋರಿಸಿದ್ದೇನೆ. ಈ ವಿಡಿಯೋ ನೋಡಿ ಆಕೆ ಬಹಳ ಸ್ಫೂರ್ತಿಗೊಂಡಿದ್ದಾರೆ. ನಿಮ್ಮಂತೆಯೇ ಆಗಲು ಆಕೆ ಇಚ್ಛಿಸಿದ್ದಾರೆ ಎಂದಿದ್ದಾರೆ ಒಬ್ಬರು. ನಿಮ್ಮ ಈ ಅದ್ಭುತ ಕೆಲಸಕ್ಕೆ ಧನ್ಯವಾದ ಸರ್ ಎಂದಿದ್ದಾರೆ ಇನ್ನೊಬ್ಬರು. ದೊಡ್ಡವರಿಗೂ ಹೀಗೆಯೇ ಇಂಜೆಕ್ಷನ್ ಮಾಡುವ ಹಾಗಿದ್ದರೆ… ಎಂದಿದ್ಧಾರೆ ಮತ್ತೊಬ್ಬರು.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:34 pm, Mon, 5 December 22