
HR (Human resources) ಕಂಪನಿಯಲ್ಲಿ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಲು ಇರುವವರು, ಒಂದು ವೇಳೆ ಕಂಪನಿಯ ರೂಲ್ಸ್ಗಳನ್ನು ಫಾಲೋ ಮಾಡದ್ದಿದ್ದರೆ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಅಂತಹದೇ ಒಂದು ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕ ಮೂಲದ ಕಂಪನಿಯ ಭಾರತೀಯ ಎಚ್ಆರ್ ತನ್ನ ಉದ್ಯೋಗಿಗೆ ಕಂಪನಿಯ ನೀತಿ-ನಿಯಮದ ಬಗ್ಗೆ ಪಾಠ ಮಾಡಿರುವ ಪೋಸ್ಟ್ವೊಂದು ವೈರಲ್ ಆಗಿದೆ. ಪೋಸ್ಟ್ನಲ್ಲಿ ಉದ್ಯೋಗಿಯೊಬ್ಬರು ಕೆಲಸದ ಸಮಯ ಮುಗಿಯುವ ಮೊದಲೇ ಲಾಗ್ಔಟ್ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಬಗ್ಗೆ ಸೋಶಿಯಲ್ ಮೀಡಿಯದಲ್ಲಿ ಚರ್ಚೆಗಳು ನಡೆಯುತ್ತಿದೆ.
ವೈರಲ್ ಆಗಿರುವ ಪೋಸ್ಟ್ನಲ್ಲಿ ಹೀಗಿವೆ, ” ಇಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ, 6:30 ಕ್ಕಿಂತ ಮೊದಲು ಯಾಕೆ ಲಾಗ್ ಔಟ್ ಆಗಿದ್ದೀರಿ? ಎಂದು ನನ್ನ ಎಚ್ಆರ್ ಕೇಳಿದ್ದಾರೆ. ಇದಕ್ಕೆ ನಾನು, ಸರ್ ನನ್ನ ಕೆಲಸ 4 ನಿಮಿಷಕ್ಕೆ ಮುಗಿದ್ದಿದೆ, ಲಾಗಿನ್ ಸಮಯ ಬೆಳಿಗ್ಗೆ 9:18ಕ್ಕೆ ಎಂದು ಹೇಳಿದೆ, ಆದರೆ ಎಚ್ಆರ್ ಇಲ್ಲ ಇದನ್ನು ಕೇಳಲು ನಾನು ತಯಾರಿಲ್ಲ, ನೀವು ನಿಮ್ಮ ಇಚ್ಛೆಯಂತೆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ನಿಮ್ಮ ಶಿಫ್ಟ್ 6:30 ಕ್ಕೆ ಕೊನೆಗೊಳ್ಳುತ್ತದೆ, ಅದ್ರೂ ಯಾಕೆ ಬೇಗ ಲಾಗ್ಔಟ್ ಆಗಿದ್ದೀರಾ? ಎಂದು ಕೇಳಿದ್ದಾರೆ. ಎಚ್ಆರ್ ಅವರ ಈ ಪ್ರಶ್ನೆ ನನಗೆ ಸ್ವಲ್ಪ ಕೋಪ ಬಂತು, ಸರ್ ಇತರರು ಸಹ ಬೇಗನೆ ಕೆಲಸ ಮುಗಿಸುತ್ತಾರೆ. ಆದ್ರೂ ಎಲ್ಲರೂ 6:30 ಕ್ಕೆ ಲಾಗ್ಔಟ್ ಆಗುತ್ತಾರೆ ಎಂದು ಉತ್ತರಿಸಿದೆ. ಆದ್ರೂ ನಮ್ಮ ಎಚ್ಆರ್ ಈ ಯಾವುದನ್ನೂ ಕೂಡ ಕಿವಿಗೆ ಹಾಕಿಕೊಳ್ಳದೇ, ಇತರರಂತೆ ನಿಮ್ಮ ಶಿಫ್ಟ್ ಸಮಯದಲ್ಲೇ ಬನ್ನಿ ಎಂದು ಎಚ್ಆರ್ ಹೇಳಿದ್ದಾರೆ. ಆದರೆ ನಾನು 9 ಗಂಟೆ ಕೆಲಸ ಮಾಡಿಯೇ ಮಾಡುತ್ತೇನೆ. ಯಾವ ಟೈಮ್ ಆದ್ರೆ ಏನು? ಎಂದು ಪೋಸ್ಟ್ನಲ್ಲಿ ಉದ್ಯೋಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಈ ಟೈಮ್‌ನಲ್ಲಿ ಕೆಲ್ಸದಿಂದ ವಜಾಗೊಳಿಸಿದ್ರೆ ತೊಂದರೆಯೇ ಹೆಚ್ಚು ಎಂದ ಸಾಫ್ಟ್‌ವೇರ್ ಇಂಜಿನಿಯರ್
ಉದ್ಯೋಗಿ ನಾನು ಈಗಲೇ ರಾಜೀನಾಮೆಯನ್ನು ನೀಡುತ್ತೇನೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ಪೋಸ್ಟ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಭಿನ್ನ ರೀತಿಯಲ್ಲಿ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ ಇದು ಎಚ್ಆರ್ ಅವರ ಅನಗತ್ಯ ನಿರ್ವಹಣೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನನ್ನ ಮೊದಲ ಕಂಪನಿಯಲ್ಲಿ ಈ ನಿಯಮವಿತ್ತು ಮತ್ತು ಬಹುತೇಕ ಎಲ್ಲರೂ ಅದನ್ನು ಅನುಸರಿಸಿದರು ಎಂದು ಹೇಳಿದ್ದಾರೆ. ನನ್ನ ಕಂಪನಿ ಈ ರೀತಿ ಸಮಯವನ್ನು ಟ್ರ್ಯಾಕ್ ಮಾಡಿದ್ರೆ, ನಾನು ಜೈಲಿನಲ್ಲಿರುತ್ತೇನೆ. ದಯವಿಟ್ಟು ರಾಜೀನಾಮೆ ನೀಡಿ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ