Ice Cream: ಜನರನ್ನು ಅಚ್ಚರಿಗೊಳಿಸಿದ ಬೆಳ್ಳುಳ್ಳಿ ಐಸ್​ಕ್ರೀಮ್ ವಿಡಿಯೋ

| Updated By: Rakesh Nayak Manchi

Updated on: Aug 21, 2022 | 9:28 AM

ಹಣ್ಣುಗಳೊಂದಿಗೆ ಸಂಯೋಜಿಸಿದ ಐಸ್​ಕ್ರೀಮ್​ಗಳನ್ನು ನೋಡಿದ್ದೀರಿ, ಆದರೆ ಬೆಳ್ಳುಳ್ಳಿಯಿಂದ ತಯಾರಿಸಿದ ಐಸ್​ಕ್ರೀಮ್ ಅನ್ನು ಎಂದಾದರು ನೋಡಿದ್ದೀರಾ? ವಿಲಕ್ಷಣ ಐಸ್​ಕ್ರೀಮ್ ವಿಡಿಯೋ ಇಲ್ಲಿದೆ ನೋಡಿ.

Ice Cream: ಜನರನ್ನು ಅಚ್ಚರಿಗೊಳಿಸಿದ ಬೆಳ್ಳುಳ್ಳಿ ಐಸ್​ಕ್ರೀಮ್ ವಿಡಿಯೋ
ಸಾಂಕೇತಿಕ ಚಿತ್ರ
Follow us on

ರುಚಿಕರವಾದ ಬಾಯಲ್ಲಿ ನೀರು ತರಿಸುವ ಐಸ್​ಕ್ರೀಮ್​ಗಳು ಒಂದಾ ಎರಡಾ, ವಿಧವಿಧವಾದ ಫ್ಲೇವರ್​ಗಳು ಲಭ್ಯವಾಗುತ್ತಿವೆ. ಈ ನಡುವೆ ಅನೇಕ ಆವಿಷ್ಕಾರಗಳು ಅದರಲ್ಲೂ ವಿಲಕ್ಷಣ ಆವಿಷ್ಕಾರಗಳನ್ನು ಕೂಡ ಕಾಣಬಹುದು. ಹಣ್ಣಿನ ಐಸ್​ಕ್ರೀಮ್ ಸಂಯೋಜನೆಯನ್ನು ನೋಡಿದ್ದೇವೆ, ಕೆಲವೊಂದು ತಿನ್ನಬಹುದಾದ ತರಕಾರಿಗಳ ಸಂಯೋಜನೆಯೊಂದಿಗೆ ತಯಾರಿಸಿದ ಐಸ್​ಕ್ರೀಂ ಅನ್ನು ಅಪರೂಪಕ್ಕೆ ನೋಡಿದ್ದೇವೆ. ಆದರೆ ಬೆಳ್ಳುಳ್ಳಿಯಿಂದ ಐಸ್​ಕ್ರೀಮ್ ಅನ್ನು ತಯಾರಿಸಿದ್ದು ನೀವು ಎಂದಾದರು ನೋಡಿದ್ದೀರಾ? ಕೇಳಿದ್ದೀರಾ? ಆದರೆ ಇದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ನೆಟ್ಟಿಗರನ್ನು ಅಚ್ಚರಿಗೊಳಿಸಿದೆ.

ವಿಡಿಯೋ ನೋಡಿ ದಂಗಾದ ಪೌಷ್ಟಿಕತಜ್ಞೆ ಮೇಘಾ, ಮೂಲ ವೀಡಿಯೊದೊಂದಿಗೆ ತನ್ನ ರೀಲ್ ಅನ್ನು ಮಾಡಿಕೊಂಡು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. “ಬೆಳ್ಳುಳ್ಳಿ ಐಸ್ ಕ್ರೀಮ್” ಎಂಬ ಶೀರ್ಷಿಕೆ ಬರೆದರು ಹಂಚಿಕೊಂಡ ರೀಲ್ಸ್​ನಲ್ಲಿ ಮೇಘಾ ಅವರು, “ಬೆಳ್ಳುಳ್ಳಿಯಲ್ಲಿ ಚಟ್ನಿ ಮಾಡುತ್ತಾರೆ, ಬೆಳ್ಳುಳ್ಳಿಯಿಂದ ಪಲ್ಯ ಮಾಡುತ್ತಾರೆ, ಈಗ ಬೆಳ್ಳುಳ್ಳಿಯಿಂದ ಐಸ್​ಕ್ರೀಮ್​ ಕೂಡ ತಯಾರಿಸುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.

ಬ್ಲಾಗರ್ ಸ್ಕಾಟ್ಸ್ ರಿಯಾಲಿಟಿ ಬೆಳ್ಳುಳ್ಳಿ ಐಸ್​ಕ್ರೀಮ್ ತಯಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಮೊದಲಿಗೆ ಬೆಳ್ಳುಳ್ಳಿಯನ್ನು ಗ್ಲಾಸ್​ ಒಂದಕ್ಕೆ ತುಂಬಿ ನೀರನ್ನು ಹಾಕಿ ಅದರಲ್ಲಿ ಒಂದು ಸಣ್ಣ ಚಮಚ ಇಟ್ಟು ಫ್ರಿಜ್​ನಲ್ಲಿ ಇಡುತ್ತಾನೆ, ಕೆಲವೇ ಸೆಕೆಂಡುಗಳಲ್ಲಿ ಫ್ರಿಜ್​ನಿಂದ ಹೊರತೆಗೆದು ಲೋಟದಿಂದ ಐಸ್​ಕ್ರೀಮ್​ ಅನ್ನು ತೆಗೆದು ಕಚ್ಚಿ ರುಚಿ ನೋಡುವುದನ್ನು ವಿಡಿಯೋ ತೋರಿಸುತ್ತದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ