ಇನ್ನು ಮುಂದೆ ಸಿಂಗಲ್​​ ಎಂಬ ಚಿಂತೆ ಬಿಟ್ಟು ಬಿಡಿ; ಈ ರಿಂಗ್​​​ ಧರಿಸಿದರೆ ನೀವು ಮಿಂಗಲ್​​ ಆಗುವುದಂತೂ ಫಿಕ್ಸ್​​

ಇನ್ನು ಮುಂದೆ ಗರ್ಲ್​ ಫ್ರೆಂಡ್ ಅಥವಾ ಬಾಯ್​​​ ಫ್ರೆಂಡ್​ ಇಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ. ಇದೀಗಾ ಮಿಂಗಲ್​​ ಆಗಲೆಂದು ಹೊಸ ಟ್ರೆಂಡ್​​ ಶುರುವಾಗಿದ್ದು, ಇದೀಗಾ ಎಲ್ಲೆಡೆ ವೈರಲ್​​ ಆಗಿದೆ.

ಇನ್ನು ಮುಂದೆ ಸಿಂಗಲ್​​ ಎಂಬ ಚಿಂತೆ ಬಿಟ್ಟು ಬಿಡಿ; ಈ ರಿಂಗ್​​​ ಧರಿಸಿದರೆ ನೀವು ಮಿಂಗಲ್​​ ಆಗುವುದಂತೂ ಫಿಕ್ಸ್​​
Pear Ring
Image Credit source: instagram

Updated on: Jul 09, 2023 | 12:37 PM

ಎಲ್ಲಾದರೊಂದು ಜೋಡಿನಾ ಕಂಡಾಕ್ಷಣ ನಂಗೂ ಗರ್ಲ್​ ಫ್ರೆಂಡ್​​​​​​ ಅಥವಾ ಬಾಯ್​​​ ಫ್ರೆಂಡ್​ ಬೇಕು ಅಂತ ಅನಿಸೋದು ಸಹಜ. ಆದರೆ ಇನ್ನೂ ಮುಂದೆ ಗರ್ಲ್​ ಫ್ರೆಂಡ್ ಇಲ್ಲ ಎಂದು ಕೊರಗುವ ಅವಶ್ಯಕತೆ ಇಲ್ಲ. ಇದೀಗಾ ಮಿಂಗಲ್​​ ಆಗಲೆಂದು ಹೊಸ ಟ್ರೆಂಡ್​​ ಶುರುವಾಗಿದ್ದು, ಇದೀಗಾ ಎಲ್ಲೆಡೆ ವೈರಲ್​​ ಆಗಿದೆ. ಹೌದು ಇತ್ತೀಚಿನ ದಿನಗಳಲ್ಲಿ ‘ಪಿಯರ್ ರಿಂಗ್ ​​​’ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಏನಿದು ಪಿಯರ್ ರಿಂಗ್ ?

ಪಿಯರ್ ರಿಂಗ್ ​​ ಎಂಬುದು ಒಂದು ಹಸಿರು ಬಣ್ಣದ ಉಂಗುರ. ಇದನ್ನು ನೀವು ಧರಿಸುವುದರಿಂದ ನೀವು ಮಿಂಗಲ್​​ ಆಗುವುದಂತೂ ಫಿಕ್ಸ್​​. ಯಾಕೆಂದರೆ ಈ ಹಸಿರು ಉಂಗುರ ಧರಿಸಿದರೆ ನೀವು ಸಿಂಗಲ್​​ ಆಗಿದ್ದು, ಸಂಗಾತಿಯನ್ನು ಬಯಸುತ್ತಿದ್ದೀರಿ ಎಂಬುದು ಇತರರಿಗೆ ತಿಳಿಯಲು ಸಾಧ್ಯವಾಗುತ್ತದೆ. ಉದಾಹರಣೆಗೆ ಅದೆಷ್ಟೋ ಜನರಿಗೆ ಕೆಲವರ ಮೇಲೆ ಪ್ರೀತಿ ಹುಟ್ಟಿಕೊಂಡಿರುತ್ತದೆ. ಆದರೆ ಪ್ರೀತಿಯನ್ನು ವ್ಯಕ್ತ ಪಡಿಸುವುದು ಹೇಗೆ ಮತ್ತು ಅವರು ವಿವಾಹಿತರೇ ಅಥವಾ ಬೇರೆ ಸಂಬಂಧದಲ್ಲಿ ಇದ್ದಾರೆಯೇ? ಎಂಬ ಸಾಕಷ್ಟು ಗೊಂದಲದಲ್ಲಿರುತ್ತಾರೆ. ಆದ್ದರಿಂದ ನೀವು ಸಿಂಗಲ್​​ ಆಗಿದ್ದು, ಸಂಗಾತಿಯನ್ನು ಬಯಸುತ್ತಿದ್ದರೆ, ಈ ಹಸಿರು ಬಣ್ಣದ ಪಿಯರಿಂಗ್​​ ಧರಿಸಿ. ಇದು ನೀವು ಸಿಂಗಲ್​​ ಎಂದು ಸೂಚಿಸುತ್ತದೆ.

ಇದನ್ನೂ ಓದಿ: ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್ ವಿಶ್ವದಾಖಲೆ ಕೈಬಿಟ್ಟಿದ್ದೇಕೆ?

ಪಿಯರ್ ರಿಂಗ್ ಬ್ರ್ಯಾಂಡ್ ವೆಬ್‌ಸೈಟ್‌ನ ಪ್ರಕಾರ, ಜಗತ್ತಿನಾದ್ಯಂತ 1.2 ಶತಕೋಟಿ ಸಿಂಗಲ್‌ಗಳು ತಮ್ಮ ಬೆರಳಿಗೆ ಹಸಿರು ಉಂಗುರವನ್ನು ಧರಿಸಿ ಅವರು ಅವಿವಾಹಿತರು ಎಂದು ತೋರಿಸಿದರೆ, ಯಾವುದೇ ಡೇಟಿಂಗ್ ಅಪ್ಲಿಕೇಶನ್‌ಗಳ ಅಗತ್ಯವಿರುವುದಿಲ್ಲ ಎಂದು ಹೇಳಿದೆ. ನೀವು ಈ ರಿಂಗ್ ಖರೀದಿಸಿದರೆ ಈ ಬ್ರ್ಯಾಂಡ್ ನಡೆಸುವ ಪಿಯರ್​ ಫೆಸ್ಟ್​ನಿಂದ ಆಹ್ವಾನ ಸಿಗಲಿದೆ ಎಂದು ಈ ಪಿಯರ್ ರಿಂಗ್ ತಯಾರಿಕಾ ಕಂಪನಿ ಹೇಳಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: