Video: ನೀವು ಭಾರತಕ್ಕೆ ಒಮ್ಮೆ ಬಂದ್ರೆ ಹುಟ್ಟೂರಿಗೆ ಹೋಗಲ್ಲ; ಅಸಲಿ ಕಾರಣ ತಿಳಿಸಿದ ಜಪಾನೀಸ್ ಮಹಿಳೆ
ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಜನರು ನೀಡುವ ಪ್ರೀತಿಗೆ, ಕಾಳಜಿಗೆ ಕಳೆದೇ ಹೋಗ್ತಾರೆ. ಇದೀಗ ಜಪಾನೀಸ್ ಮಹಿಳೆಯೊಬ್ಬರು ಈ ಕೆಲವು ವಿಷ್ಯಗಳನ್ನು ಉಲ್ಲೇಖಿಸಿ ಭಾರತಕ್ಕೆ ಹೋಗಲೇಬೇಡಿ ಎಂದು ಹೇಳಿದ್ದಾರೆ. ಹಾಗಾದ್ರೆ ಈ ವಿದೇಶಿ ಮಹಿಳೆ ನೀಡಿದ ಕಾರಣಗಳನ್ನು ತಿಳಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಭಾರತದ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಇಷ್ಟ ಪಟ್ಟು ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇಲ್ಲಿನ ಜನರ ಅತಿಥ್ಯಕ್ಕೆ ಕಳೆದೇ ಹೋಗ್ತಾರೆ. ಇದೀಗ ಭಾರತಕ್ಕೆ ಭೇಟಿ ನೀಡಿದ ಜಪಾನೀಸ್ ಮಹಿಳೆ ನಿಮ್ಗೆ ಭಾರತ ಅಂದ್ರೆ ಇಷ್ಟವೇ, ದಯವಿಟ್ಟು ಇಂಡಿಯಾಗೆ ಹೋಗ್ಬೇಡಿ ಎಂದು ಹೇಳಿದ್ದಾರೆ. ವಿದೇಶಿ ಮಹಿಳೆ ಹೀಗೆನ್ನಲು ಕೆಲವು ಕಾರಣ ನೀಡಿದ್ದಾರೆ. ಈ ಕಾರಣಗಳಿಂದ ನೀವು ಮತ್ತೆ ನಿಮ್ಮ ಹುಟ್ಟೂರಿಗೆ ಮರಳುವ ಮನಸ್ಸು ಮಾಡಲ್ಲ ಎನ್ನುವುದು ಇಲ್ಲಿ ಉಲ್ಲೇಖಿಸಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ಹೋಗೋ ಮುನ್ನ ಯೋಚ್ನೆ ಮಾಡಿ
ಇಂಡಿಯಾ ಮೋಮೋ (Indiamomo) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಜಪಾನೀಸ್ ಮಹಿಳೆ, ಭಾರತೀಯರು ನಿಮ್ಮನ್ನು ಕುಟುಂಬದಂತೆ ನೋಡಿಕೊಳ್ತಾರೆ. ಇಲ್ಲಿನ ದೋಸೆ ತುಂಬಾ ರುಚಿಕರವಾಗಿರುತ್ತದೆ. ಸೀರೆ ಉಟ್ಟರೆ ಎಲ್ಲರೂ ಕ್ಯೂಟ್ ಆಗಿ ಕಾಣ್ತಾರೆ. ಇನ್ನು ಮನೆಯ ಮುದ್ದಿನ ಶ್ವಾನವು ನೋಡಲು ಮುದ್ದಾಗಿರುತ್ತದೆ. ಈ ಎಲ್ಲಾ ಕಾರಣದಿಂದ ನೀವು ಒಮ್ಮೆ ಭಾರತಕ್ಕೆ ಬಂದ್ರೆ ಈ ದೇಶವನ್ನು ಮಾತ್ರ ನೀವು ಬಿಟ್ಟು ಬರಲ್ಲ. ಹೀಗಾಗಿ ಭಾರತಕ್ಕೆ ನೀವು ಹೋಗ್ಬೇಡಿ ಎಂದು ಹೇಳಿರುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ವಿದೇಶಿ ಮಹಿಳೆಗೆ ಸೀರೆ ಉಡಿಸಿದ ಮಹಿಳಾ ಜವಳಿ ವ್ಯಾಪಾರಿ, ವೈರಲ್ ಆಯ್ತು ದೃಶ್ಯ
ವಿದೇಶಿ ಮಹಿಳೆಯ ಮಾತಿಗೆ ನೆಟ್ಟಿಗರು ಫಿದಾ
ಈ ವಿಡಿಯೋ ಇಪ್ಪತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಹೌದು, ಭಾರತೀಯರು ಇರೋದೇ ಹಾಗೆ, ಯಾರೇ ಬಂದ್ರೂ ನಾವು ತುಂಬು ಹೃದಯದಿಂದ ಅವರನ್ನು ಸ್ವಾಗತಿಸುತ್ತೇವೆ, ನಮ್ಮ ಕುಟುಂಬದಂತೆ ನೋಡಿಕೊಳ್ಳುತ್ತೇವೆ. ಹೀಗಾಗಿ ನಿಮಗೆ ನಮ್ಮ ದೇಶಕ್ಕೆ ಸದಾ ಸ್ವಾಗತ ಎಂದು ಹೇಳಿದ್ದಾರೆ. ಮತ್ತೊಬ್ಬರು, ನಿಮ್ಗೆ ದೋಸೆ ಅಂದ್ರೆ ಅಷ್ಟೊಂದು ಇಷ್ಟನಾ ಎಂದು ಕೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಭಾರತೀಯರಿಗೆ ಅತಿಥಿ ದೇವೋ ಭವ ಎಂದು ನಂಬಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




