Viral News: ಈ ದೇಶದಲ್ಲಿ ಅರ್ಧದಷ್ಟು ಹೆಣ್ಣುಮಕ್ಳು ಮದುವೆಯಾಗದೇ ತಾಯಿಯಾಗ್ತಾರೆ: 10ರಲ್ಲಿ 8 ಮದುವೆಗಳು ವಿಚ್ಛೇದನಲ್ಲಿ ಕೊನೆಗೊಳ್ಳುತ್ತಂತೆ!

|

Updated on: Mar 07, 2023 | 12:53 PM

ಈ ಆಧುನಿಕ ಯುಗದಲ್ಲಿ ಮದುವೆಯಂತಹ ಸಂಪ್ರದಾಯದ ಪ್ರಾಮುಖ್ಯತೆ ಕಡಿಮೆಯಾಗುತ್ತಿರುವ ಅನೇಕ ದೇಶಗಳಿವೆ. ಅವಿವಾಹಿತೆ ತಾಯಿಯಾಗುವುದು ಇಲ್ಲಿ ಅವಮಾನದ ವಿಷಯವಲ್ಲ.

Viral News: ಈ ದೇಶದಲ್ಲಿ ಅರ್ಧದಷ್ಟು ಹೆಣ್ಣುಮಕ್ಳು ಮದುವೆಯಾಗದೇ ತಾಯಿಯಾಗ್ತಾರೆ: 10ರಲ್ಲಿ 8 ಮದುವೆಗಳು ವಿಚ್ಛೇದನಲ್ಲಿ ಕೊನೆಗೊಳ್ಳುತ್ತಂತೆ!
Relationship
Follow us on

ಈ ಆಧುನಿಕ ಯುಗದಲ್ಲಿ ಮದುವೆಯಂತಹ ಸಂಪ್ರದಾಯದ ಪ್ರಾಮುಖ್ಯತೆ ಕಡಿಮೆಯಾಗುತ್ತಿರುವ ಅನೇಕ ದೇಶಗಳಿವೆ. ಅವಿವಾಹಿತೆ ತಾಯಿಯಾಗುವುದು ಇಲ್ಲಿ ಅವಮಾನದ ವಿಷಯವಲ್ಲ. ಇಲ್ಲಿ ಅರ್ಧದಷ್ಟು ಅವಿವಾಹಿತರು ತಾಯಿಯಾಗುತ್ತಾರೆ. ಈ ದೇಶದ ಸಮಾಜ ಎಷ್ಟು ಮುಕ್ತವಾಗಿದೆ ಎಂದರೆ 10 ರಲ್ಲಿ 8 ಮಂದಿ ವಿಚ್ಛೇದನ ಪಡೆಯುತ್ತಾರೆ. ಈ ದೇಶದ ಹೆಸರೇ ಪೋರ್ಚುಗಲ್.

ಈ ದೇಶವು ಒಂದು ಕಾಲದಲ್ಲಿ ಪ್ರಪಂಚದ ದೊಡ್ಡ ಪ್ರದೇಶವನ್ನು ಆಳಿತ್ತು, ಅವರು ಕೂಡ ಬ್ರಿಟಿಷರಂತೆಯೇ ತಮ್ಮದೇ ಆದ ಸಾಮ್ರಾಜ್ಯವನ್ನು ಹೊಂದಿದ್ದರು. ಆದರೆ ಇಂದು ಆ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿದೆ. ಈ ದೇಶದಲ್ಲಿ ಜನರು ಬಹುಶಃ ಹಗತ್ತಿನಲ್ಲೇ ಅತ್ಯಂತ ವೈಯಕ್ತಿಕ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಇಲ್ಲಿಯ ಜನರ ವೈಯಕ್ತಿಯ ಬದುಕಿನಲ್ಲಿ ಯಾರದ್ದೂ ಹಸ್ತಕ್ಷೇಪವೆಂಬುದೇ ಇರುವುದಿಲ್ಲ.

ಯುರೋಪಿನ ನೈಋತ್ಯದಲ್ಲಿ ನೆಲೆಗೊಂಡಿರುವ ಪೋರ್ಚುಗಲ್ ವಿಸ್ತೀರ್ಣದಲ್ಲಿ ಅದು ಬಿಹಾರ ರಾಜ್ಯಕ್ಕಿಂತ ಚಿಕ್ಕದ್ದು. ಇದು 92,212 ಚದರ ಕಿಲೋಮೀಟರ್​ನಷ್ಟು ಹರಡಿದೆ. ಮತ್ತು ಬಿಹಾರದ ವಿಸ್ತೀರ್ಣ 94,163 ಚದರ ಕಿ.ಮೀ ಆಗಿದೆ.

ಅಂದಹಾಗೆ, ಪೋರ್ಚುಗಲ್​ನ ಜನಸಂಖ್ಯೆ ತುಂಬಾ ಕಡಿಮೆ, ಇಲ್ಲಿ ಒಂದು ಕೋಟಿಗೂ ಅಧಿಕ ಜನ ವಾಸಿಸುತ್ತಿದ್ದಾರೆ. ಮತ್ತು ಬಿಹಾರದ ಜನಸಂಖ್ಯೆ 10 ಕೋಟಿಗೂ ಅಧಿಕ. ಇದು ಅತ್ಯಂತ ಆಧುನಿಕ ಹಾಗೂ ವಿದ್ಯಾವಂತ ದೇಶವಾಗಿದೆ. ಇಡೀ ದೇಶವು ಪ್ರಾಕೃತಿಕ ಸೌಂದರ್ಯದಿಂದ ತುಂಬಿದೆ. ಆದರೆ ಇಲ್ಲಿ ಮನುಷ್ಯನನ್ನು ಬಂಧಿಸುವ ಎಳೆ ತುಂಬಾ ದುರ್ಬಲವಾಗಿದೆ.
10 ರಲ್ಲಿ 8 ಮಂದಿ ವಿಚ್ಛೇದನ ಪಡೆಯುತ್ತಾರೆ.

ಮತ್ತಷ್ಟು ಓದಿ: China: ಜನಸಂಖ್ಯೆಯನ್ನು ಹೆಚ್ಚಿಸಲು ನವವಿವಾಹಿತರಿಗೆ 30 ದಿನಗಳ ವೇತನ ಸಹಿತ ರಜೆ ನೀಡುತ್ತಿರುವ ಚೀನಾ ಪ್ರಾಂತ್ಯ

ಪೋರ್ಷುಗಲ್ ಮುಕ್ತ ಸಮಾಜವನ್ನು ಹೊಂದಿದೆ, ಇಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸಮಾನತು. ಒಂದು ರೀತಿಯಲ್ಲಿ ಇಲ್ಲಿ ಯಾವ ಕ್ಷೇತ್ರದಲ್ಲೂ ಗಂಡು ಹೆಣ್ಣೆಂಬ ತಾರತಮ್ಯವೇ ಇಲ್ಲ. ಪುರುಷರಂತೆಯೇ ಮಹಿಳೆಯರು ಕೂಡ ಆರ್ಥಿಕವಾಗಿ ಶ್ರೀಮಂತರು.

ಇಲ್ಲಿ 10 ರಲ್ಲಿ 8 ಮದುವೆಗಳು ಮುರಿದುಬೀಳುತ್ತವೆ ಹಾಗಾದರೆ ಮರುಮದುವೆಯಾಗುವುದಿಲ್ಲ ಎಂದರ್ಥವಲ್ಲ, ವಿಚ್ಛೇದನ ಪಡೆದವರು ಬೇರೊಬ್ಬರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ. ತಮ್ಮ ಜೀವನ ಸಂಗಾತಿಯೊಂದಿಗೆ ತಮ್ಮ ಇಡೀ ಜೀವನವನ್ನು ಕಳೆದ ಕೆಲವೇ ಕೆಲವು ಜನರು ಇಲ್ಲಿ ಕಂಡುಬರುತ್ತಾರೆ. ಇಲ್ಲಿ ದಂಪತಿಗಳು ಸರಾಸರಿ 15 ವರ್ಷಗಳ ಕಾಲ ಸಂಬಂಧದಲ್ಲಿ ಇರುತ್ತಾರೆ, ನಂತರ ಅವರು ವಿಚ್ಛೇದನ ಪಡೆಯುತ್ತಾರೆ.

ಒಂದು ವರದಿಯ ಪ್ರಕಾರ, ಜೀವಿತಾವಧಿಯಲ್ಲಿ ಒಬ್ಬ ವ್ಯಕ್ತಿ (ಗಂಡು ಮತ್ತು ಹೆಣ್ಣು ಇಬ್ಬರೂ) ಸರಾಸರಿ ಏಳು ಜನರೊಂದಿಗೆ ದೈಹಿಕ ಸಂಬಂಧವನ್ನು ಹೊಂದುತ್ತಾರೆ.

ಇಲ್ಲಿ ಅವಿವಾಹಿತ ತಾಯಿಯಾಗಿರುವುದು ದೊಡ್ಡ ವಿಷಯವಲ್ಲ. ವರದಿಯೊಂದರ ಪ್ರಕಾರ ಇಲ್ಲಿನ ಅರ್ಧದಷ್ಟು ಮಹಿಳೆಯರು ಮದುವೆಯಾಗದೆ ತಾಯಂದಿರಾಗುತ್ತಾರೆ. ಮದುವೆಗೆ ಮುಂಚೆ ದೈಹಿಕ ಸಂಬಂಧ ಇಟ್ಟುಕೊಳ್ಳುವುದು ಇಲ್ಲಿ ಪಾಪವಲ್ಲ. ಇದು ಸಮಾಜದಲ್ಲಿ ಸ್ವೀಕಾರಾರ್ಹ.

ಇಲ್ಲಿನ ಬಹುತೇಕ ಯುವಕ-ಯುವತಿಯರು ಮದುವೆಯಾಗದೇ ಸಂಬಂಧದಲ್ಲಿ ಬದುಕುತ್ತಿದ್ದಾರೆ. ಅವರು ಮಕ್ಕಳನ್ನು ಕೂಡ ಹೊಂದಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 12:50 pm, Tue, 7 March 23