Optical Illusion: ಈ ಚಿತ್ರದಲ್ಲಿರುವ ನಾಣ್ಯ 30 ಸೆಕೆಂಡ್​​ಗಳ ಒಳಗೆ ನಿಮ್ಮ ದೃಷ್ಟಿಯಿಂದ ಮಾಯವಾಗುತ್ತದೆ; ಅದು ಹೇಗೆ? ಇಲ್ಲಿದೆ ನೋಡಿ

Viral News: ಇಲ್ಲಿ ಕೆಳಗೆ ನೀಡಲಾಗಿರುವ ಚಿತ್ರವನ್ನು ಗಮನಿಸಿ. ಅದರಲ್ಲಿ ಕಪ್ಪು ಬಣ್ಣದ ಚಿಹ್ನೆಯಿದೆ. ಆ ಚಿಹ್ನೆಯನ್ನೇ ದಿಟ್ಟಿಸಿ ನೋಡಿ. ಸುಮಾರು 30 ಸೆಕೆಂಡ್​ಗಳ ಒಳಗಾಗಿ ನಿಮಗೆ ಚಿತ್ರದಲ್ಲಿರುವ ನಾಣ್ಯದ ಬಣ್ಣ ಮಾಯವಾಗುತ್ತದೆ. ಬದಲಾಗಿ ಎಲ್ಲವೂ ಒಂದೇ ಬಣ್ಣವಾಗಿ ಕಾಣಿಸುತ್ತದೆ. ಇದು ಹೇಗೆ ಸಾಧ್ಯವಾಯಿತು? ಇಲ್ಲಿದೆ ಉತ್ತರ.

Optical Illusion: ಈ ಚಿತ್ರದಲ್ಲಿರುವ ನಾಣ್ಯ 30 ಸೆಕೆಂಡ್​​ಗಳ ಒಳಗೆ ನಿಮ್ಮ ದೃಷ್ಟಿಯಿಂದ ಮಾಯವಾಗುತ್ತದೆ; ಅದು ಹೇಗೆ? ಇಲ್ಲಿದೆ ನೋಡಿ
30 ಸೆಕೆಂಡ್​ಗಳ ಒಳಗೆ ಕಾಯಿನ್ ನಾಪತ್ತೆಯಾಗುವ ಚಿತ್ರ
Edited By:

Updated on: May 08, 2022 | 4:03 PM

ನೀವು ಮ್ಯಾಜಿಕ್​ಗಳಲ್ಲಿ (Magic) ನಂಬಿಕೆ ಇಡದವರಿರಬಹುದು. ಆದರೆ ಈ ಚಿತ್ರ ನೋಡಿದರೆ ಮಾತ್ರ ನೀವು ನಿಮ್ಮ ಕಣ್ಣುಗಳ ಬಗ್ಗೆಯೇ ಬೆಕ್ಕಸಬೆರಗಾಗುತ್ತೀರಿ. ನಿಮ್ಮ ಕಣ್ಣಮುಂದೆಯೇ ನೀವು ನೋಡುತ್ತಿರುವ ವಸ್ತು ಮಾಯವಾದರೆ ಏನಾಗುತ್ತದೆ? ಸಾಮಾನ್ಯವಾಗಿ ಕೆಲವರಿಗೆ ಭಯವಾಗುತ್ತದೆ. ಅಥವಾ ಏನೋ ಅಗೋಚರ ಶಕ್ತಿಯಿರಬೇಕು ಎಂದು ಭಾವಿಸುತ್ತಾರೆ. ಆದರೆ ಇಲ್ಲಿ ಅದ್ಯಾವುದೂ ಅಲ್ಲ. ನೀವು ನೋಡುತ್ತಿರುವ ಆಪ್ಟಿಕಲ್ ಇಲ್ಯೂಶನ್ ಚಿತ್ರದಿಂದ (Optical Illusion) ಬಣ್ಣವೊಂದು ಮಾಯವಾಗುತ್ತದೆ. ಎಲ್ಲವೂ ಒಂದೇ ಬಣ್ಣದಂತೆ ಕಾಣಿಸಲು ಆರಂಭವಾಗುತ್ತದೆ. ನಿಮ್ಮ ನೋಡನೋಡುತ್ತಿರುವಂತೆಯೇ ಅದು ಹೇಗೆ ಬದಲಾಗುತ್ತದೆ? ಅಷ್ಟಕ್ಕೂ ಇದೆಲ್ಲಾ ಹೇಗೆ ಸಾಧ್ಯವಾಯಿತು? ಈ ಚಮತ್ಕಾರವನ್ನು ನೀವೂ ಅನುಭವಿಸಬೇಕೇ? ಹಾಗಾದರೆ ಈ ಇಲ್ಲಿದೆ ಮಾಹಿತಿ.

ಇಲ್ಲಿ ಕೆಳಗೆ ನೀಡಲಾಗಿರುವ ಚಿತ್ರವನ್ನು ಗಮನಿಸಿ. ಅದರಲ್ಲಿ ಕಪ್ಪು ಬಣ್ಣದ ಚಿಹ್ನೆಯಿದೆ. ಆ ಚಿಹ್ನೆಯನ್ನೇ ದಿಟ್ಟಿಸಿ ನೋಡಿ. ಸುಮಾರು 30 ಸೆಕೆಂಡ್​ಗಳ ಒಳಗಾಗಿ ನಿಮಗೆ ಚಿತ್ರದಲ್ಲಿರುವ ನಾಣ್ಯದ ಬಣ್ಣ ಮಾಯವಾಗುತ್ತದೆ. ಬದಲಾಗಿ ಎಲ್ಲವೂ ಒಂದೇ ಬಣ್ಣವಾಗಿ ಕಾಣಿಸುತ್ತದೆ.

ಚಿತ್ರ ಇಲ್ಲಿದೆ:

ಇದನ್ನೂ ಓದಿ
Viral Video: ಕಾಡಿನ ರಾಜ ಸಿಂಹವನ್ನು ಬರಿಯ ಕೋಲಿನಿಂದ ಅಟ್ಟಿದ ವ್ಯಕ್ತಿ; ವೈರಲ್ ಆಯ್ತು ವಿಡಿಯೋ
‘ಸಾಕ್ಷಿಗಳನ್ನು ಮಂಗ ಹೊತ್ತೊಯ್ದಿದೆ’; ಕೊಲೆ ಪ್ರಕರಣದ ವಿಚಾರಣೆಯಲ್ಲಿ ನ್ಯಾಯಾಲಯದ ಮುಂದೆ ಪೊಲೀಸರ ಹೇಳಿಕೆ
Optical Illusions: ಈ ಚಿತ್ರದಲ್ಲಿ ಸ್ತ್ರೀ ಆಕೃತಿಯನ್ನು ಗುರುತಿಸಬಲ್ಲಿರಾ? ಈ ಕಲಾಕೃತಿಯ ವಿಶೇಷತೆ ಇಲ್ಲಿದೆ
ಈ ಮಾವಿನ ಹಣ್ಣುಗಳ ನಡುವೆ ಗಿಳಿಯೊಂದು ಅಡಗಿ ಕುಳಿತಿದೆ; ನೀವು ಗುರುತಿಸಬಲ್ಲಿರಾ?

30 ಸೆಕೆಂಡ್​ಗಳ ಒಳಗೆ ಕಾಯಿನ್ ನಾಪತ್ತೆಯಾಗುವ ಚಿತ್ರ

ನಾಣ್ಯ ಮಾಯವಾಯಿತೇ? ಇದು ಹೇಗೆ ಸಾಧ್ಯವಾಯಿತು? ಇಲ್ಲಿದೆ ಉತ್ತರ

ಈ ಆಪ್ಟಿಕಲ್ ಇಲ್ಯೂಶನ್ ವಿನ್ಯಾಸವು ಟ್ರೋಕ್ಸ್ಲರ್ ಎಫೆಕ್ಟ್‌ನಿಂದ ಪ್ರೇರಿತವಾಗಿ ರಚಿಸಲಾಗಿದೆ. ಇದನ್ನು ಟ್ರೋಕ್ಸ್ಲರ್ ಫೇಡಿಂಗ್ ಎಂದೂ ಕರೆಯುತ್ತಾರೆ. 1804ರಲ್ಲಿ ಸ್ವಿಸ್ ವೈದ್ಯರಾದ ಪಾಲ್ ಟ್ರೋಕ್ಸ್ಲರ್ ಟ್ರೋಕ್ಸ್ಲರ್ ಫೇಡಿಂಗ್ ಕಂಡುಹಿಡಿದರು. ಏನಿದು? ಇದರಿಂದ ಮ್ಯಾಜಿಕ್ ಹೇಗೆ ಸಾಧ್ಯ ಎಂಬ ನಿಮ್ಮ ಕುತೂಹಲಕ್ಕೆ ಉತ್ತರವಿಷ್ಟೇ.

ನಮ್ಮ ಮೆದುಳಿನ ಕಾರ್ಯ ವಿಧಾನವನ್ನು ಟ್ರೋಕ್ಸ್ಲರ್ ಫೇಡಿಂಗ್ ವಿವರಿಸುತ್ತದೆ. ಅಂದರೆ ಬದಲಾಗದ ದೃಶ್ಯ ಅಥವಾ ವಸ್ತುಗಳಿಗೆ ನಮ್ಮ ಮೆದುಳು ಗಮನ ಕೊಡುವುದನ್ನು ನಿಲ್ಲಿಸುತ್ತದೆ. ಈ ಚಿತ್ರದಲ್ಲಿ ನೀವು ಪ್ಲಸ್ ಚಿಹ್ನೆಯನ್ನು ನೇರವಾಗಿ ದಿಟ್ಟಿಸಿದಾಗ ನಾಣ್ಯದ ಬಣ್ಣ ನಿಮ್ಮ ನೋಟದಿಂದ ಮುಸುಕಾಗುತ್ತದೆ. ಇದರಿಂದ ಅಲ್ಲಿ ಮೂಲಭೂತವಾಗಿ ಏನಿದೆ, ಅದರಿಂದ ನಿಮ್ಮ ದೃಷ್ಟಿ ಬದಲಾಗುತ್ತದೆ. ಆದರೆ ನೀವು ತುಸುವೇ ದೃಷ್ಟಿಯನ್ನು ಅತ್ತಿತ್ತ ಸರಿಸಿದರೂ ಮೊದಲಿನಂತೆ ನಾಣ್ಯ ಗೋಚರಿಸುತ್ತದೆ.

ಇನ್ನಷ್ಟು ಕುತೂಹಲಕರ ವಿಚಾರ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sun, 8 May 22