ಆಸ್ಟ್ರೇಲಿಯಾದ ರೈಲ್ವೆ ನಿಲ್ದಾಣದಲ್ಲಿ ಪರ್ಸ್ ಮರೆತು ಹೋದ ಭಾರತದ ಯುವತಿ, ಆಮೇಲೇನಾಯ್ತು?
ಸಾಮಾನ್ಯವಾಗಿ ರಸ್ತೆಗಳಲ್ಲಿ, ಬಸ್ಸುಗಳು, ಆಟೋಗಳು, ರೈಲ್ವೆ ನಿಲ್ದಾಣ ಎಲ್ಲೇ ಆಗಿರಲಿ ಬಿಟ್ಟ ವಸ್ತುಗಳು ಸಿಗುವುದು ಕಷ್ಟವೇ. ಆದರೆ ಆಸ್ಟ್ರೇಲಿಯಾದ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳು ಪರ್ಸ್ ಮರೆತು ಹೋಗಿದ್ದಳು. ಇಬ್ಬರು ಯುವತಿಯರು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಜೇಬಿನಲ್ಲಿ ಪರ್ಸ್ ಇಲ್ಲ ಎಂಬುದನ್ನು ಕಂಡು ಒಮ್ಮೆ ಗಾಬರಿಯಾದರು. ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲು ಹಿಡಿದು ತಾವು ಹತ್ತಿದ್ದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದರು.

ಆಸ್ಟ್ರೇಲಿಯಾ, ಮಾರ್ಚ್ 22: ಸಾಮಾನ್ಯವಾಗಿ ರಸ್ತೆಗಳಲ್ಲಿ, ಬಸ್ಸುಗಳು, ಆಟೋಗಳು, ರೈಲ್ವೆ ನಿಲ್ದಾಣ ಎಲ್ಲೇ ಆಗಿರಲಿ ಬಿಟ್ಟ ವಸ್ತುಗಳು ಸಿಗುವುದು ಕಷ್ಟವೇ. ಆದರೆ ಆಸ್ಟ್ರೇಲಿಯಾದ ರೈಲ್ವೆ ನಿಲ್ದಾಣದಲ್ಲಿ ಭಾರತದ ಯುವತಿಯೊಬ್ಬಳು ಪರ್ಸ್ ಮರೆತು ಹೋಗಿದ್ದಳು.
ಇಬ್ಬರು ಯುವತಿಯರು ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಜೇಬಿನಲ್ಲಿ ಪರ್ಸ್ ಇಲ್ಲ ಎಂಬುದನ್ನು ಕಂಡು ಒಮ್ಮೆ ಗಾಬರಿಯಾದರು. ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲು ಹಿಡಿದು ತಾವು ಹತ್ತಿದ್ದ ರೈಲ್ವೆ ನಿಲ್ದಾಣಕ್ಕೆ ಬಂದಿಳಿದರು.
ಆದರೆ ರೈಲ್ವೆ ನಿಲ್ದಾಣಕ್ಕೆ ಬಂದು ಆಶ್ಚರ್ಯಚಿಕಿತರಾದರು, ಆಕೆ ಎಲ್ಲಿ ಪರ್ಸ್ ಬಿಟ್ಟು ಹೋಗಿದ್ದರೋ ಅಲ್ಲೇ ಪರ್ಸ್ ಇತ್ತು, ಯಾರೊಬ್ಬರು ಕೂಡ ಆ ಪರ್ಸ್ ಮುಟ್ಟಿರಲಿಲ್ಲ.
View this post on Instagram
ಒಂದು ದಿನ ನಾನು ತುಂಬಾ ಒತ್ತಡದಲ್ಲಿದ್ದಾಗ ನನ್ನ ಬ್ಯಾಗ್ ಅನ್ನು ಶಾಪಿಂಗ್ ಸೆಂಟರ್‌ನಲ್ಲಿ ಮರೆತಿದ್ದೆ ಮತ್ತು 20 ನಿಮಿಷಗಳ ನಂತರ ನಾನು ಅಲ್ಲಿಗೆ ಹೋದಾಗ ನನ್ನ ಬ್ಯಾಗ್ ಇನ್ನೂ ಅದೇ ಸ್ಥಳದಲ್ಲಿದ್ದುದನ್ನು ಕಂಡು ಸಂತೋಷವಾಗಿತ್ತು ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
