
ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವು ವಿಮಾನ ನಿಲ್ದಾಣಗಳಲ್ಲಿ ಇಂಡಿಗೋ ವಿಮಾನಗಳ (IndiGo flights) ಸಂಚಾರದಲ್ಲಿ ವ್ಯತ್ಯವಾಗಿ ಸತತ ಮೂರನೇ ದಿನವೂ ಪ್ರಯಾಣಿಕರು ಪರದಾಡುವಂತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 600 ಕ್ಕೂ ಹೆಚ್ಚು ಇಂಡಿಗೋ ವಿಮಾನಗಳು ರದ್ದಾಗಿದ್ದು, ಈ ಬಗ್ಗೆ ವಿಮಾನಯಾನ ಸಂಸ್ಥೆ ಮೊದಲೇ ಯಾವುದೇ ಮಾಹಿತಿ ನೀಡಿಲ್ಲ. ಇದೀಗ ಪ್ರಯಾಣಿಕರ ಸಹಾಯಕ್ಕೂ ಬಂದಿಲ್ಲ. ಇದರ ನಡುವೆ ದೆಹಲಿಯಿಂದ ಕೊಚ್ಚಿಗೆ ಪ್ರಯಾಣ ಬೆಳೆಸಿದ್ದ ಮಹಿಳೆಯೊಬ್ಬರು ತಾವು ಅನುಭವಿಸಿದ ಸಮಸ್ಯೆಯನ್ನು ಹೇಳಿದ್ದಾರೆ. ಈ ಮಹಿಳೆ ದೆಹಲಿಯಿಂದ ಕೊಚ್ಚಿಗೆ ಬಂದಿದ್ದಾರೆ. ಆದರೆ ಅವರ ಬ್ಯಾಗ್, ಸೂಟ್‌ಕೇಸ್ ಮಾತ್ರ ಬಂದಿಲ್ಲ, ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳನ್ನು ಕೇಳಿದ್ರೆ ಯಾವುದೇ ಸಹಾಯ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹಲವು ಪ್ರಯಾಣಿಕರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಮಹಿಳೆ ವಿಮಾನ ನಿಲ್ದಾಣದಲ್ಲಿ ಬಂದು ಇಳಿದ್ರೂ ಅವರ ಬ್ಯಾಗ್ ಮಾತ್ರ ಬಂದಿಲ್ಲ. ಅದು ಎಲ್ಲಿದೆ ಎಂಬ ಮಾಹಿತಿ ಕೂಡ ಇಲ್ಲ. ಈ ಬಗ್ಗೆ ಅವರ ಗಂಡ ಹೀಗೆ ಹೇಳಿದ್ದಾರೆ. “ನನ್ನ ಪತ್ನಿ ಮದುವೆಗಾಗಿ ಕೊಚ್ಚಿಗೆ ಬಂದಿದ್ದಾಳೆ. ವಿಮಾನ ನಿಲ್ದಾಣದಲ್ಲಿ ಬಂದು ಇಳಿದ ನಂತರ ಆಕೆಯ ಬ್ಯಾಗ್ ಬಂದಿಲ್ಲ. ಅದರಲ್ಲಿ ಬೆಲೆಬಾಳುವ ವಸ್ತುಗಳು ಇತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ರೆ ಯಾವುದೇ ಮಾಹಿತಿ ನೀಡುತ್ತಿಲ್ಲ” ಎಂದು ಹೇಳಿದ್ದಾರೆ. ಈ ಸಂಭಾಷಣೆಯ ಸ್ಕ್ರೀನ್ಶಾಟ್ನ್ನು ಸೋಶಿಯಲ್ ಮೀಡಿಯಾದಲ್ಲಿ ಮಹಿಳೆಯ ಗಂಡ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಧು ವರರ ಕುರ್ಚಿಯಲ್ಲಿ ಕುಳಿತ ತಂದೆ-ತಾಯಿ! ಮಧುಮಕ್ಕಳಿಲ್ಲದೇ ಹುಬ್ಬಳ್ಳಿಯಲ್ಲಿ ನಡೆಯಿತು ಆರತಕ್ಷತೆ: ಇಂಡಿಗೋ ವಿಮಾನ ರದ್ದು ಕಾರಣ
ನವೆಂಬರ್ 4 ರಂದು ಹಂಚಿಕೊಂಡ ಟ್ವೀಟ್‌ನಲ್ಲಿ, ವಿಮಾನ ರದ್ದತಿ ಮತ್ತು ವಿಳಂಬದ ಸಮಸ್ಯೆಗಳನ್ನು ವಿಮಾನಯಾನ ಸಂಸ್ಥೆಯು ಪರಿಹರಿಸಿದೆ. ಜತೆಗೆ ಪ್ರಯಾಣಿಕ ಕ್ಷಮೆಯಾಚಿಸಿದೆ. ಕಳೆದ ಎರಡು ದಿನಗಳಿಂದ ಇಂಡಿಗೋದ ನೆಟ್‌ವರ್ಕ್ ಮತ್ತು ಕಾರ್ಯಾಚರಣೆಗಳಲ್ಲಿ ವ್ಯಾಪಕ ಅಡಚಣೆ ಉಂಟಾಗಿದೆ. ಹಾಗಾಗಿ ವಿಮಾನ ನಿಲ್ದಾಣದ ಹಾಗೂ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಪ್ರಯಾಣಿಕರಲ್ಲಿ ಕ್ಷಮೆ ಕೇಳಿದ್ದಾರೆ. ಇಂಡಿಗೋ ತಂಡಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ಸಮಸ್ಯೆಯನ್ನು ಪರಿಹಾರ ಮಾಡಲು MOCA, DGCA, BCAS, AAI ಮತ್ತು ವಿಮಾನ ನಿಲ್ದಾಣ ನಿರ್ವಾಹಕರ ಸಹಾಯ ಪಡೆದುಕೊಂಡಿದ್ದೇವೆ. ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ